Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.12.2024
Share:

By Village Missionary Movement

Saturday, 07-Dec-2024

ಧೈನಂದಿನ ಧ್ಯಾನ(Kannada) – 07.12.2024

 

ಕರ್ತನಲ್ಲಿ ಬಲಗೊಂಡು 

 

“...ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು" - 1 ಸಮುವೇಲ 30:6

  

ಬಿಲ್ಲಿ ಗ್ರಹಾಂ ಎಂಬ ಪ್ರಸಿದ್ಧ ದೇವರ ಸೇವಕರು ತಮ್ಮ ಜೀವನದಲ್ಲಿ ಕರಾಳ ಪರಿಸ್ಥಿತಿಯಲ್ಲಿರುವ ಹಾಗೆ ಭಾವಿಸಿ ವಿಚಲಿತರಾದರು. ಪರಿಸ್ಥಿತಿಯಿಂದ ಹೊರಬರಲು ಅವರು ಬಹಳಷ್ಟು ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ಆದರೂ ಅವರಿಗೆ ಬಿಡುಗಡೆಯಾಗಲಿಲ್ಲ. ದೇವರು ತನ್ನನ್ನು ಬಿಟ್ಟು ಹೋದಂತೆ ಅನಿಸಿತು. ಮನಮುರಿದ ಬಿಲ್ಲಿ ಗ್ರಹಾಂ ತನ್ನ ತಾಯಿಗೆ ಪತ್ರ ಬರೆದರು. ಅವರ ತಾಯಿ ಆ ಪತ್ರಕ್ಕೆ ಅತ್ಯಂತ ಸುಂದರವಾದ ಉತ್ತರವನ್ನು ಕಳುಹಿಸಿದರು. ಆ ಉತ್ತರ ಏನು ಗೊತ್ತಾ? ಭಯಪಡಬೇಡ, ಪ್ರೀತಿಯ ಮಗನೇ, ಕರ್ತನು ನಿನ್ನ ನಂಬಿಕೆಯನ್ನು ಪರೀಕ್ಷಿಸಲು ನಿನ್ನನ್ನು ಬಿಟ್ಟುಹೋದಂತೆ ತೋರುತ್ತಾರೆ. ನಿಜವಾಗಿಯೂ, ದೇವರು ನಿನ್ನನ್ನು ಬಿಟ್ಟು ಹೋಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆತನ ಮೇಲಿನ ನಿನ್ನ ನಂಬಿಕೆ ಹೇಗಿದೆ ಎಂದು ನೋಡಲು ನಿನ್ನನ್ನು ಪರೀಕ್ಷಿಸುತ್ತಾರೆ ಎಂಬ ಉತ್ತರವನ್ನು ಪತ್ರದಲ್ಲಿ ಬರೆದರು. ಆತನ ತೋಳುಗಳು ನಿನಗಾಗಿ ಚಾಚಲ್ಪಟ್ಟಿವೆ. ಆತನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದ ಆ ತಾಯಿಯ ಉತ್ತರ ಬಿಲ್ಲಿ ಗ್ರಹಾಂನನ್ನು ಬಲಪಡಿಸಿತು.

 

ಇಂತಹ ಸನ್ನಿವೇಶಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತವೆ. ದೇವರು ನಿನ್ನನ್ನು ಕೈಬಿಟ್ಟು ಒಂಟಿಯಾಗಿ ಬಿಡುವ ಸಂದರ್ಭಗಳು ಬರುತ್ತವೆ. ಸತ್ಯವೇದದಲ್ಲಿ ದೇವರ ಹೃದಯವನ್ನು ಅನುಸರಿಸುತ್ತಿದ್ದ ದಾವೀದನು ಅರಸನಾದ ಸೌಲನಿಂದ ಪ್ರೀತಿಸಲ್ಪಟ್ಟನು. ಅರಸನಾದ ಸೌಲನ ಅಸೂಯೆಯು ದಾವೀದನನ್ನು ಕೊಲ್ಲಲು ಪ್ರಯತ್ನಿಸಿತು. ಆಗ ದಾವೀದನು ಕಾಡುಗಳಲ್ಲಿ ಪರ್ವತಗಳಲ್ಲಿ ಮತ್ತು ಗವಿಗಳಲ್ಲಿ ಮರೆಯಾಗಿ ವಾಸಿಸುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿಯೂ ಕರ್ತನಲ್ಲಿ ತನ್ನನ್ನು ಬಲಪಡಿಸಿಕೊಂಡರು. ತನ್ನ ಮಗನ ಪದವಿಯ ಆಸೆಯಿಂದ ಓಡಿಸಲ್ಪಟ್ಟಾಗ, ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ.? (ಕೀರ್ತನೆ 22:1) ಎಂದು ಗೋಳಾಡಿದರು. ಆದರೂ ಕರ್ತನ ಹೆಸರಿನಲ್ಲಿ ನಂಬಿಕೆಯಿಂದ ಸಂಕಟ ಪಡುವವನ ಸಂಕಟವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು. (ಕೀರ್ತನೆ 22:24) ಎಂದು ಹೇಳಲ್ಪಟ್ಟಿದೆ.

 

ಮತ್ತು ದಾವೀದನು ಕರ್ತನಲ್ಲಿ ತನ್ನನ್ನು ಬಲಪಡಿಸಿಕೊಂಡದ್ದರಿಂದ, ನನ್ನ ಆಪತ್ತಿನ ದಿವಸದಲ್ಲಿ ನನ್ನನ್ನು ಅವರು ಸುತ್ತಿಕೊಂಡರು; ಆದರೆ ಕರ್ತನು ನನ್ನ ಆಧಾರನಾದನು (ಕೀರ್ತ. 18:18) ರಲ್ಲಿ ಹೇಳಲ್ಪಟ್ಟಿದೆ. ಅದರಂತೆ ಒಂಟಿಯಾಗಿ ಕೈಬಿಡಲ್ಪಟ್ಟಂತಿರುವ ಕತ್ತಲೆಯಿಂದ ಸುತ್ತುವರೆದಿರುವಂತಹ ಪರಿಸ್ಥಿತಿಗಳು ಬಂದಾಗ ಮನಸ್ಸು ದುರ್ಬಲವಾಗದೆ ಕರ್ತನಲ್ಲಿ ತನ್ನ ವಾಕ್ಯದ ಮೂಲಕ ಬಲಗೊಂಡಾಗ, ನಾವು ನಮ್ಮ ಜೀವನದಲ್ಲಿ ದೇವರ ಶಕ್ತಿಯನ್ನು ಸವಿಯಬಹುದು. ನಾವು ದೇವರ ವಾಕ್ಯವನ್ನು ಗ್ರಹಿಸಿದಾಗ ಅದು ನಮ್ಮನ್ನು ಬಲಪಡಿಸುತ್ತದೆ ಮತ್ತು ನಮ್ಮ ನಂಬಿಕೆಯನ್ನು ದೃಢೀಕರಿಸುತ್ತದೆ. ನಾವು ಪರಿಸ್ಥಿತಿಯನ್ನು ನೋಡಿದಾಗ, ಬಳಲಿಕೆ ಉಂಟಾಗುತ್ತದೆ, ಭಯ ಮತ್ತು ದಿಗಿಲು ಉಂಟಾಗುತ್ತದೆ. ಕೊನೆಗೆ ಸೋಲುತ್ತೇವೆ. ಬದಲಿಗೆ, ದೇವರ ವಾಕ್ಯದಿಂದ ಬಲಗೊಂಡಾಗ ನಂಬಿಕೆಯು ಬಲಗೊಳ್ಳುತ್ತದೆ. ದೇವರ ಹಸ್ತವನ್ನು ಹಿಡಿದು ನೀವು ಜಯವನ್ನು ಪಡೆಯಬಹುದು.

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ:

ಎಲ್ಲಾ ಜಿಲ್ಲೆಗಳಲ್ಲಿ ಸರಪಳಿ ಪ್ರಾರ್ಥನೆಯನ್ನು ಸ್ಥಾಪಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet