Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.12.2024
Share:

By Village Missionary Movement

Friday, 06-Dec-2024

ಧೈನಂದಿನ ಧ್ಯಾನ(Kannada) – 06.12.2024

 

ಸುವಾರ್ತೆಗಾಗಿ ಕಳೆದುಕೊಳ್ಳುವಿಕೆ

 

"...ನನ್ನ ನಿವಿುತ್ತವಾಗಿಯೂ ಸುವಾರ್ತೆಯ ನಿವಿುತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು" - ಮಾರ್ಕ 8:35

 

17ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಕ್ರೈಸ್ತವ್ಯವನ್ನು ಬೋಧಿಸಬಾರದು ಎಂಬ ಕಾನೂನಿತ್ತು. ಆ ವಿಷಯ ಗೊತ್ತಿದ್ದರೂ ‘ಜಾನ್ ಹ್ಯಾಕೆಟ್’ ಎಂಬ ಬೋಧಕರು ದೇವಾಲಯದಲ್ಲಿ ದೇವರ ಸಂದೇಶವನ್ನು ಕೊಡುತ್ತಿದ್ದರು. ಕ್ಷಣಮಾತ್ರದಲ್ಲಿ ಒಬ್ಬ ಸೈನಿಕನು ಕೈಯಲ್ಲಿ ಬಂದೂಕನ್ನು ಹಿಡಿದು ನೇರವಾಗಿ ಪ್ರವಚನಪೀಠದ ಮುಂದೆ ನಿಂತು ಬೋಧಕನನ್ನು ನೋಡಿ, "ನಿನ್ನ ಉಪದೇಶವನ್ನು ನಿಲ್ಲಿಸು ಎಂದು ನಿನಗೆ ಆಜ್ಞಾಪಿಸುತ್ತೇನೆ" ಎಂದನು. ಆತನನ್ನು ದಿಟ್ಟಿಸಿ ನೋಡಿದ ಬೋಧಕರು ಆತನನ್ನು ನೋಡಿ, "ನಾನು ದೇವರ ಸೇವಕನಾಗಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ; ನೀನು ಸೈನಿಕನಾಗಿ ನಿನ್ನ ಕೆಲಸವನ್ನು ಚೆನ್ನಾಗಿ ಮಾಡು" ಎಂದು ಹೇಳಿ ತನ್ನ ಸಂದೇಶವನ್ನು ಮುಂದುವರೆಸಿದರು. ಸೈನಿಕನು ಬೋಧಕರನ್ನು ಸುಡಲು ಗುರಿ ಇಟ್ಟವನು, ಇದ್ದಕ್ಕಿದ್ದಂತೆ ಎತ್ತಿದ ಬಂದೂಕನ್ನು ಇಳಿಸಿ ವೇಗವಾಗಿ ದೇವಾಲಯದಿಂದ ಹೊರಗೆ ಹೊರಟುಹೋದನು. ಕಾರಣವೇನು? ದೇವರಿಗೇ ಗೊತ್ತು.

 

ಸತ್ಯವೇದವು ಹೇಳುತ್ತಿದೆ, "ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ... ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು" (ಕೀರ್ತನೆ 91: 14, 15). ದೇವರು ಅಬ್ರಹಾಮನ ಬಳಿ ಇಸಾಕನನ್ನು ತನಗೆ ಯಜ್ಞಮಾಡುವಂತೆ ಕೇಳಿದಾಗ, ಅಬ್ರಹಾಮನು ದೇವರಿಗಾಗಿ ತನ್ನ ಒಬ್ಬನೇ ಮಗನನ್ನು, ಪ್ರೀತಿಯಿಂದ ಮುದ್ದಾಗಿ ಬೆಳೆಸಿದ ಮತ್ತು ತನ್ನ ಎಲ್ಲಾ ಆಸ್ತಿಗೂ ಅಧಿಪತಿಯಾಗಲಿರುವವನನ್ನು ಕಳೆದುಕೊಳ್ಳಲು ಮುಂದಾದನು, ದೇವರು ಅಬ್ರಹಾಮನ ಹೃದಯವನ್ನು ನೋಡಿದರು. ತನ್ನ ಮೇಲಿನ ಪ್ರೀತಿಯನ್ನು ನೋಡಿದರು. ತನ್ನ ಸೇವಕನು ತನ್ನ ಮೇಲಿರುವ ಪ್ರೀತಿಯ ನಿಮಿತ್ತವಾಗಿ ತನ್ನ ಒಬ್ಬನೇ ಮಗನನ್ನು ಕಳೆದುಕೊಳ್ಳಲು ಸಿದ್ಧನಾದ ಕ್ರಿಯೆಯನ್ನು ನೆನೆಸಿ ಇಸಾಕನನ್ನು ಪುನಃ ಅಬ್ರಹಾಮನಿಗೆ ಕೊಟ್ಟು ಬಿಟ್ಟರು. ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಪಡೆದುಕೊಂಡನು" ಎಂದು ಇಬ್ರಿಯ 11:19 ಹೇಳುತ್ತದೆ.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ! ಸ್ವಲ್ಪ ಯೋಚಿಸಿ ನೋಡಿ. ನಾವು ದೇವರಿಗಾಗಿ, ಆತ್ಮಗಳನ್ನು ಗೆಲ್ಲುವುದಕ್ಕಾಗಿ, ಸುವಾರ್ತೆಯನ್ನು ಸಾರುವುದಕ್ಕಾಗಿ ಏನನ್ನಾದರೂ ಕಳೆದುಕೊಂಡಿದ್ದೇವೆಯೇ? ಸುವಾರ್ತೆ ಕೆಲಸಕ್ಕಾಗಿ ನಾವು ಧೈರ್ಯದಿಂದ ಹೋಗೋಣ. ಬೈಗುಳವನ್ನು, ಉಗುಳಿಕೆಗಳನ್ನು ಹೊಂದಿದವರು ಎಷ್ಟು ಜನ? ನಾವು ಹಾಗೆ ಪಡೆದುಕೊಂಡಿದ್ದರೆ ನಾವು ಧನ್ಯರೇ! ನಾವು ಕಳೆದುಕೊಂಡಿದ್ದನ್ನು ದೇವರು ಪುನಃ ಕೊಡುತ್ತಾರೆ. ಇಹಲೋಕದಲ್ಲಿ ಸಂಕಟಗಳೊಂದಿಗೆ ನೂರರಷ್ಟು ಆಶೀರ್ವಾದಗಳನ್ನು ಪರಲೋಕದಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳೋಣ. ಹಲ್ಲೇಲೂಯಾ!

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಈ ತಿಂಗಳು ನಾವು ಭೇಟಿ ನೀಡುವ ಹಳ್ಳಿಗಳಲ್ಲಿ ನಾವು ನಡೆಸುವ ಕ್ರಿಸ್ಮಸ್ ಕಾರ್ಯಕ್ರಮಗಳಲ್ಲಿ ಕರ್ತನ ನಾಮವು ಮಹಿಮೆ ಹೊಂದಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş