By Village Missionary Movement
Thursday, 05-Dec-2024ಧೈನಂದಿನ ಧ್ಯಾನ(Kannada) – 05.12.2024
ಯಜಮಾನನಿಗಾಗಿ ನಿಲ್ಲು
"…ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು... ಕತ್ತೆಯೂ ಸಿಂಹವೂ ಹೆಣದ ಬಳಿಯಲ್ಲಿ ನಿಂತುಕೊಂಡಿದ್ದವು" - 1 ಅರಸು. 13:24
1 ಅರಸು. 13:1-32 ರ ವಾಕ್ಯಗಳಲ್ಲಿ, ದೇವರು ಎಂಥವರು, ಪ್ರವಾದನೆ ಎಂಥದ್ದು, ಪ್ರವಾದಿ ಎಂಥವರು ಎಂಬುದನ್ನೂ ಮತ್ತು ಅವನಿಗೆ ಸಹಾಯ ಮಾಡಿದ ಕತ್ತೆ ಎಂಥದ್ದು ಎಂಬುದನ್ನೂ ನಾವು ಗಮನಿಸಬೇಕು. ರಾಜನು ತನಗೆ ವಿರುದ್ಧವಾದ ಪ್ರವಾದನೆಯನ್ನು ಕೇಳಿದಾಗ ಕೋಪಗೊಳ್ಳುತ್ತಾನೆ ಆ ಪ್ರವಾದಿಯನ್ನು ಹಿಡಿಯಿರಿ ಎಂದು ಅವನಿಗೆ ವಿರುದ್ಧವಾಗಿ ಕೈ ಚಾಚಿದನು. ತಕ್ಷಣ ರಾಜನ ಕೈ ಹಿಂದಕ್ಕೆ ಎಳಕೊಳ್ಳದ ಹಾಗೆ ಒಣಗಿಹೋಯಿತು. ಕೂಡಲೇ ಪ್ರವಾದಿಯ ಬಳಿ ಮನವಿ ಮಾಡಿದನು. ಪ್ರವಾದಿಯು ದೇವರನ್ನು ಪ್ರಾರ್ಥಿಸಿದಾಗ, ಕೈ ತನ್ನ ಹಳೆಯ ಸ್ಥಿತಿಗೆ ಮರಳಿತು. ರಾಜನು ಅವನನ್ನು ನೋಡಿ ನನ್ನ ಬಳಿಗೆ ಬಾ, ಬಹುಮಾನ ನೀಡುತ್ತೇನೆ ಎಂದು ಹೇಳಿದರು.
ಎಚ್ಚರಿಕೆಯಿಂದ ಇರಬೇಕಾದವನು ದೇವರು ತನ್ನ ಬಳಿ ರಹಸ್ಯವಾಗಿ ಹೇಳಿದ್ದನ್ನು ರಾಜನಿಗೆ ತಿಳಿಸಿದನು. (1ಅರಸು. 13 : 8 - 9) ಇದನ್ನು ಕೇಳಿದ ಆ ಊರಿನ ಸ್ಥಳೀಯ ಪ್ರವಾದಿ ಅವನ ದಾರಿ ತಪ್ಪಿಸಿ, "ದೇವರು ನಿನ್ನನ್ನು ಕರೆದು ನನ್ನ ಮನೆಯಲ್ಲಿ ಆಹಾರ ಕೊಡಲು ಹೇಳಿದರು" ಎಂದು ಹೇಳಿದನು. ತಕ್ಷಣವೇ ಹೊರಗಿನಿಂದ ಬಂದ ಪ್ರವಾದಿಯು ದೇವರಿಗಾಗಿಯೂ ಅವರ ಮಾತಿಗಾಗಿಯೂ ನಿಲ್ಲದೆ, ಆ ಮುದುಕ ಪ್ರವಾದಿಯನ್ನು ಪಾಲಿಸಿ ದೇವರ ಮಾತನ್ನು ಉಲ್ಲಂಘಿಸಿದ್ದರಿಂದ, ಅವನನ್ನು ನೋಡಿ (21-23) ಸಿಂಹವು ನಿನ್ನನ್ನು ಕೊಂದುಹಾಕುತ್ತದೆ ಎಂದನು. "ನೀನು ಕರ್ತನ ಮಾತಿಗೆ ತಿರುಗಿಬಿದ್ದು ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಕೊಳ್ಳದೆ ಹೋದದರಿಂದ ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ" ಹಾಗೆಯೇ ಸಿಂಹವು ಅವನನ್ನು ಕೊಂದಿತು." ಸತ್ತ ಪ್ರವಾದಿಯ ಕತ್ತೆ ಅವನ ದೇಹದ ಪಕ್ಕದಲ್ಲೇ ನಿಂತಿತ್ತು.
ಪ್ರೀತಿಯ ದೇವರ ಮಕ್ಕಳೇ! ಮೇಲ್ಕಂಡ ಸತ್ಯವೇದ ಭಾಗದಲ್ಲಿ ನಾವು ಕಲಿತುಕೊಳ್ಳಬೇಕಾದ ಸತ್ಯಗಳು ಏನೆಂದರೆ, ದೇವರು ನಮಗೆ ಅವರ ಸತ್ಯವನ್ನು ಕೈಗೊಳ್ಳಿರಿ ಎಂದು ಹೇಳುವ ಕಾರ್ಯದಲ್ಲಿ ನಾವು ಹೇಗೆ ನಡೆಯುತ್ತಿದ್ದೇವೆ. ಅದನ್ನು ಕೈಗೊಳ್ಳುತ್ತಿದ್ದೇವಾ? ಅಥವಾ, ಅದಕ್ಕೆ ವಿರುದ್ಧವಾಗಿ ಹೋಗುತ್ತಿದ್ದೇವಾ? ಕೈಗೊಂಡರೆ ಮುಂಬರುವ ಶಿಕ್ಷೆಯಿಂದ ಪಾರಾಗುತ್ತೇವೆ. ಕತ್ತೆಯು ಸಿಂಹವು ತನ್ನ ಯಜಮಾನನನ್ನು ಕೊಂದರೂ ಆ ಸಿಂಹವು ನಮ್ಮನ್ನೂ ಕೊಲ್ಲುತ್ತದೆ ಎಂದು ಹೆದರದೆ ಯಜಮಾನನಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಿಂತಿತ್ತು. ನಾವು ನಮ್ಮ ಪರಮ ಯಜಮಾನನಾದ ಯೇಸು ಅಪ್ಪನಿಗಾಗಿ ಎಂಥವರಾಗಿದ್ದೇವೆ. ಈ ಕತ್ತೆಯಿಂದ ನಾವು ಒಳ್ಳೆಯ ಪಾಠ ಕಲಿತಿದ್ದೇವೆ. "ಯಜಮಾನನಿಗಾಗಿ ನಿಲ್ಲು" ದೇವರು ಆಶೀರ್ವದಿಸಲಿ!
- Pr. S.A. ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಪ್ರತಿ ಜಿಲ್ಲೆಯಲ್ಲಿಯೂ 300 ಗಿದ್ಯೋನ್‌ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482