By Village Missionary Movement
Wednesday, 04-Dec-2024ಧೈನಂದಿನ ಧ್ಯಾನ(Kannada) – 04.12.2024
ಯಾರೋ ಒಬ್ಬರು
"…ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ?..." - ರೋಮಾ 10:14
ಹುಟ್ಟಿನಿಂದಲೇ ಕುರುಡನಾದ ವ್ಯಕ್ತಿಯೊಬ್ಬ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಕುಳಿತಿದ್ದನು. ಯೇಸು ಬರುತ್ತಿದ್ದಾನೆಂಬ ಸುದ್ದಿಯನ್ನು ಕೇಳಿದ ಕೂಡಲೇ ಆತನು ತನ್ನನ್ನು ಬಿಟ್ಟು ಮುಂದೆ ಹಾದು ಹೋಗಬಾರದೆಂದು “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಮಹಾಧ್ವನಿಯಿಂದ ಕೂಗಿದನು. ಯೇಸು ನಿಂತು ನಾನು ನಿನಗಾಗಿ ಏನು ಮಾಡಬೇಕು ಎಂದು ಕೇಳಿದರು? ನಾನು ನೋಡಬೇಕೆಂದು ಅವನು ಹೇಳುತ್ತಾನೆ. "ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿತು" ಎಂದು ಯೇಸು ಹೇಳಿದ ಕೂಡಲೇ ಅವನು ದೃಷ್ಟಿ ಪಡೆಯುತ್ತಾನೆ, ಕಣ್ಣು ಕಾಣದ ಒಬ್ಬ ಕುರುಡನು ಹೇಗೆ ಇದನ್ನು ನಂಬಲು ಸಾಧ್ಯವಾಯಿತು? ಯಾರೋ ಒಬ್ಬರು ಈ ಕುರುಡನಿಗೆ ಯೇಸುವಿನ ಬಗ್ಗೆ ಹೇಳಿದ್ದಾರೆ. ಅಂದಿನಿಂದ ಅವರಲ್ಲಿ ನಂಬಿಕೆ ಬೆಳೆಯಿತು. ನಾನು ಅವರನ್ನು ಭೇಟಿಯಾಗಲು ಸಾಧ್ಯವಾದರೆ, ನಾನು ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಎಂದು ಅವರು ಭಾವಿಸಿದರು. ಆದುದರಿಂದಲೇ ಯೇಸು ತನ್ನನ್ನು ದಾಟಿ ಹೋಗಿ ಬಿಡಬಾರದೆಂಬ ಭಯದಿಂದ ದೊಡ್ಡ ಧ್ವನಿಯಿಂದ ಕೂಗಿ ಅದ್ಬುತವನ್ನು ಪಡೆದುಕೊಂಡರು.
ಇದರಂತೆಯೇ ವಿಲೇಜ್ ಮಿಷನರಿ ಚಳವಳಿಯ ಸಂಸ್ಥಾಪಕರಾದ ಬ್ರದರ್ ಡೇವಿಡ್ ಗಣೇಶನ್ ಅವರಿಗೆ ಅವರು ವಾಸಿಸುವ ಪುಲ್ಲಲಕೋಟ್ಟೈ ಗ್ರಾಮದಲ್ಲಿ ಯಾರೋ ಒಬ್ಬರು ಯೇಸುವಿನ ಬಗ್ಗೆ ಹೇಳಿದ್ದಾರೆ. ಆದ್ದರಿಂದಲೇ ಯೇಸು ತನ್ನ ಹೃದಯ ಕಾಯಿಲೆಯನ್ನು ಗುಣಪಡಿಸುತ್ತಾರೆ ಎಂದು ಅವರು ನಂಬಿದರು. ಅವರು ಯೇಸುವನ್ನು ಕರೆದರು. ವಾಸಿಯಾದ ನಂತರ, ಅವರು ಯೇಸುವಿನ ಬಗ್ಗೆ ಬೋಧಿಸಲು ಹಳ್ಳಿಗಳಿಗೆ ಹೋದರು. ಇಂದು, 7000 ಮಿಷನರಿಗಳು, ಒಂದು ಲಕ್ಷ ಹಳ್ಳಿಗಳು ಯೇಸುವಿಗೆ ಸ್ವಂತವಾಗಬೇಕು ಎಂಬ ದರ್ಶನದೊಂದಿಗೆ ಸೇವೆ ಮಾಡುತ್ತಿದ್ದಾರೆ.
ಯಾರೋ ಒಬ್ಬರು ಯೇಸುವಿನ ಬಗ್ಗೆ ನಿಮಗೆ ಹೇಳಿದ್ದರಿಂದಲೇ ನೀವು ರಕ್ಷಿಸಲ್ಪಟ್ಟಿದ್ದೀರಿ. ಸ್ವಸ್ಥತೆಯನ್ನು ಪಡೆದುಕೊಂಡಿದ್ದೀರಿ. ಆದ್ದರಿಂದಲೇ ನೀವು ಸಹ ಆ ಯಾರೋ ಒಬ್ಬರಾಗಿ ಮಾರ್ಪಡಿರಿ. ಕರ್ತನನ್ನು ತಿಳಿಯದ ಜನರ ಬಳಿ ಯೇಸುವಿನ ಹೆಸರನ್ನು ಸುವಾರ್ತೆಯಾಗಿ ತಿಳಿಸಿರಿ. ನಿಮ್ಮ ಮೂಲಕವಾಗಿ ಯೇಸುವನ್ನು ಅರಿಯದ ಜನರು ರಕ್ಷಣೆ ಹೊಂದುತ್ತಾರೆ.
- Bro. ವೇಣು ವಿಲಿಯಮ್ಸ್
ಪ್ರಾರ್ಥನಾ ಅಂಶ:
ಪ್ರತಿ ರಾಜ್ಯದಲ್ಲಿ 10 ಎಕರೆ ಭೂಮಿಯನ್ನು ಖರೀದಿಸಿ ನಮ್ಮ ಕ್ಯಾಂಪಸ್‌ನಲ್ಲಿ ಮಾಡುವ ಸೇವೆಗಳನ್ನು ಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482