By Village Missionary Movement
Wednesday, 05-May-2021ಧೈನಂದಿನ ಧ್ಯಾನ(Kannada) – 05.05.2021
ದೇವರೇ! ನನ್ನನ್ನು ಸಂತೈಸಿರಿ!
"...ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ." - 2 ಕೊರಿಂಥ 12:10
ರೇ ಮತ್ತು ಸೋಫಿಯಾ ಎಂಬ ಮಿಷನರಿ ದಂಪತಿಗಳು ಪಶ್ಚಿಮ ಆಫ್ರಿಕಾದಲ್ಲಿ 40 ವರ್ಷಗಳಿಂದ ದೇವರ ಸೇವೆ ಮಾಡುತ್ತಿದ್ದಾರೆ. ಅವರು ಕಠಿಣ ಸಂದರ್ಭಗಳಲ್ಲಿಯೂ ಕರ್ತನ ಸೇವೆಯನ್ನು ಬಹಳ ಧೈರ್ಯದಿಂದ ಮಾಡಿದರು. ಅವರು ಮಾಡಿದ ಸೇವೆಯನ್ನು ಯಾರು ನೋಡಿದರೂ ದೇವರನ್ನು ಮಹಿಮೆಪಡಿಸದೇ ಇರಲಾಗುವುದಿಲ್ಲ. ಅಷ್ಟು ಚೆನ್ನಾಗಿ ಅವರು ದೇವರ ಕೆಲಸವನ್ನು ಮಾಡಿದರು. ಇಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಒಂದು ದಿನ ಸೋಫಿಯಾ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆಯಲ್ಲೇ ಮಲಗಿಬಿಟ್ಟರು. ತನ್ನ ಬಟ್ಟೆಗಳಿಗೆ ಬಟನ್ ಹಾಕಿಕೊಳ್ಳಲು, ಒಂದು ನೀರಿನ ಕಪ್ ಕೂಡ ಎತ್ತಿ ಕುಡಿಯಲು ಕೂಡ ಸಾಧ್ಯವಾಗದ ದುರ್ಬಲ ಸ್ಥಿತಿಗೆ ತಳ್ಳಲ್ಪಟ್ಟರು. ಇಂತಹ ಮೋಸವಾದ ಸ್ಥಿತಿಯಲ್ಲೂ ಆತುರ ಪಡದೇ, ಅಧೈರ್ಯಗೊಳ್ಳಲು ಸ್ಥಳ ಕೊಡಲೇ ಇಲ್ಲ. ತನ್ನ ದುರ್ಬಲ ಕ್ಷಣಗಳಲ್ಲಿಯೂ ಅವರು ಸದ್ದಿಲ್ಲದೆ ತನಗೆ ತಾನೇ ಹೇಳಿಕೊಂಡ ಮಾತುಗಳು ಇವೇ, “ಸೋಫಿಯಾ ಇದಕ್ಕಾಗಿಯೇ ನೀನು ಕರೆಯಲ್ಪಟ್ಟಿದ್ದೀಯ. ಅದಕ್ಕಾಗಿಯೇ ಯೇಸುವನ್ನು ತಿಳಿದುಕೊಂಡಿದ್ದೀಯ" ಎಂಬುದಾಗಿ. ಓಡಿ ಅಲೆದು ಸೇವೆ ಮಾಡಲು ಮಾತ್ರವಲ್ಲ, ಇದಕ್ಕಾಗಿಯೂ ದೇವರು ನನ್ನನ್ನು ಕರೆದಿದ್ದಾರೆ ಎಂಬುದೇ ಅವರ ಉದ್ದೇಶ.
ಇಂದಿನ ಸತ್ಯವೇದ ಭಾಗದಲ್ಲಿ ಪೌಲನ ಜೀವನವನ್ನು ಗಮನಿಸಿರಿ. ಅವರು ದೇವರನಾಮ ಮಹಿಮೆ ಹೊಂದುವಂತೆ ಉತ್ತಮವಾದ ಸೇವೆಯನ್ನು ಮಾಡಿದ ದೇವರ ಮನುಷ್ಯನಾಗಿದ್ದರು. ಸೇವೆಯ ಮಧ್ಯದಲ್ಲಿ ತನಗೆ ತೀರದ ಮುಳ್ಳಿನಂತಹ ಬಲಹೀನತೆಗಳು, ಇಕ್ಕಟ್ಟುಗಳು ಇರುವುದನ್ನು ಕಂಡರು. ಆದರೂ ಇವುಗಳ ಬಗ್ಗೆ ಪೌಲನು ದುಃಖಿಸಲಿಲ್ಲ. ಬದಲಾಗಿ ಅದರ ಅರ್ಥವನ್ನು ತಿಳಿದುಕೊಂಡು ದೇವರನ್ನು ಮಹಿಮೆ ಪಡಿಸಿದರು. ಇವುಗಳಲ್ಲಿ ನಾನು ಸಂತೋಷಿಸುತ್ತಿದ್ದೇನೆ ಎಂದು ಪೌಲನು ಆನಂದ ಪಡುತ್ತಾರೆ. ಕ್ರಿಸ್ತನಲ್ಲಿ ಇಲ್ಲದ ಒಬ್ಬ ಮನುಷ್ಯನು ಈ ಸಂದೇಶವನ್ನು ಓದುತ್ತಿರುವುದಾದರೆ ಇದು ತುಂಬಾ ಕಠಿಣವಾಗಿದೆ ಎಂದು ಹೇಳುತ್ತಾರೆ. ತನ್ನನ್ನು ಪ್ರೀತಿಸುವ ತನ್ನ ಮಕ್ಕಳಿಗೆ ದೇವರು ಇಂತಹ ಮಾರ್ಗಗಳನ್ನು ಕೂಡ ಅನುಮತಿಸಿದರೆ ನಿಮಗೆ ಇದನ್ನು ನಂಬಲು ಸಾಧ್ಯವಾ?
ಈ ಸಂದೇಶದ ಮೂಲಕ ದೇವರು ನಿಮ್ಮನ್ನು ಬಲಪಡಿಸಬೇಕೆಂದೇ ಬಯಸುತ್ತಿದ್ದಾರೆ. ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕ ವಾದ ಮತ್ತು ನಿರಂತರವಾಗಿರುವ ಗೌರವವುಳ್ಳ ಮಹಿಮೆಯನ್ನುಂಟು ಮಾಡುತ್ತದೆ. (2 ಕೊರಿಂಥ. 4:17). ಹೌದು, ಇದನ್ನು ಓದುತ್ತಿರುವ ನಿಮಗಾಗಿ ದೊಡ್ಡ ಸಂತೋಷವನ್ನು ಸಿದ್ದ ಮಾಡಲಾಗಿದೆ. ದೇವರ ಉಪಕಾರಗಳನ್ನು ಅನುಭವಿಸುವಂತೆ ಈಗಿರುವ ಬಲಹೀನತೆಗಳ ಮಧ್ಯದಲ್ಲಿಯೂ ದೇವರನ್ನು ಮಹಿಮೆಪಡಿಸಿರಿ. ಎಲ್ಲಾದಕ್ಕೂ ಸ್ತೋತ್ರ ಮಾಡಿರಿ. ಎಲ್ಲವನ್ನು ಒಳ್ಳೆಯದಕ್ಕಾಗಿಯೇ ಮಾಡುವ ದೇವರು ಈ ದಿನದಲ್ಲಿ ನಿಮಗೊಂದು ಅದ್ಭುತವನ್ನು ಮಾಡುತ್ತಾರೆ. ನಂಬಿರಿ.
- P.ಜೇಕಬ್ ಶಂಕರ್
ಪ್ರಾರ್ಥನಾ ಅಂಶ:-
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳನ್ನು ಅನೇಕರು ವೀಕ್ಷಿಸಿ ಪ್ರಯೋಜನ ಹೊಂದಿಕೊಳ್ಳುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482