Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.12.2024
Share:

By Village Missionary Movement

Monday, 02-Dec-2024

ಧೈನಂದಿನ ಧ್ಯಾನ(Kannada) – 02.12.2024

 

ಪ್ರೀತಿಯ ದೇವರು 

 

"…ನಿನ್ನ ಧರ್ಮಶಾಸ್ತ್ರವು ನನಗೆ ಪ್ರಿಯವಾಗಿದೆ" - ಕೀರ್ತನೆ 119:163

  

ನಾನು ಒಮ್ಮೆ ದೇವರಿಗೆ ಇಷ್ಟವಾಗದ ರೀತಿಯಲ್ಲಿ ಹೋಗಿದ್ದರಿಂದ ಪಾಪಪ್ರಜ್ಞೆ ನನ್ನನ್ನು ಒತ್ತುತ್ತಿತ್ತು. ನಾನೊಬ್ಬ ಪಾಪಿ, ನಾನು ಹೇಗೆ ಪರಿಶುದ್ದ ಗ್ರಂಥವನ್ನು ಮುಟ್ಟಿ ಓದುವುದು ಎಂಬ ಯೋಚನೆ ಪ್ರಾರಂಭವಾಯಿತು. ಹಾಗಾಗಿ ನಾನು ಮೂರು ದಿನಗಳ ಕಾಲ ಸತ್ಯವೇದವನ್ನು ಓದಲಿಲ್ಲ ಮತ್ತು ಪ್ರಾರ್ಥಿಸಲಿಲ್ಲ. ಮರುದಿನ ನಾನು ಪ್ರಾರ್ಥನಾ ಕೋಣೆಯೊಳಗೆ ಹೋಗಿ ಸುಮ್ಮನೆ ಕುಳಿತುಕೊಂಡು ಬರೋಣ ಅಂದುಕೊಂಡು ಹೋದೆ. ಸತ್ಯವೇದವನ್ನೂ ಓದದೆ ಸುಮ್ಮನೆ ಕುಳಿತುಕೊಂಡಿದ್ದೆ. ಆಗ ನನಗೆ "ಗಣೇಶ ನಾನು ಇನ್ನೂ ನಿನ್ನನ್ನು ಪ್ರೀತಿಸುತ್ತೇನೆ" ಎಂಬ ಮೃದುವಾದ ಧ್ವನಿ ಕೇಳಿಸಿತು. ಭ್ರಮೆ ಎಂದುಕೊಳ್ಳುತ್ತಿರುವಾಗಲೇ "ಗಣೇಶ ನಾನು ಇನ್ನೂ ನಿನ್ನನ್ನು ಪ್ರೀತಿಸುತ್ತೇನೆ" ಎಂಬ ಶಬ್ದವನ್ನು ಕೇಳಿದೆ.

  

ಹೌದು, ನಾವು ಪಾಪಿಗಳಾಗಿದ್ದಾಗ ದೇವರು ನಮ್ಮನ್ನು ಪ್ರೀತಿಸಿದರು ಮತ್ತು ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕಳುಹಿಸಿದರು. ಅಷ್ಟೇ ಅಲ್ಲ, ಪಾಪದಿಂದ ನಮ್ಮನ್ನು ರಕ್ಷಿಸಲು ಮತ್ತು ಪಾಪದಿಂದ ನಾವು ಕಳೆದುಕೊಂಡ ಪರಲೋಕ ಜೀವನವನ್ನು ಪಡೆಯಲು ಅವರು ತನ್ನ ಪ್ರಾಣವನ್ನು ಕೊಟ್ಟರು. ಯೇಸುಕ್ರಿಸ್ತನು ಕೂಡ "... ನಾನು ನೀತಿವಂತರನ್ನು ಕರೆಯುವದಕ್ಕೆ ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಅಂದನು." (ಮತ್ತಾಯ 9:13). ಆದ್ದರಿಂದ ಈ ಲೋಕವು ದ್ವೇಷಿಸಿದ ಸುಂಕದವರನ್ನೂ ಪಾಪಿಗಳನ್ನೂ ಪ್ರೀತಿಸಿದರು. ಅವರೊಂದಿಗೆ ಊಟ ಮಾಡಿದರು. ಯೇಸುಕ್ರಿಸ್ತನು ಜನಿಸಿದ ಸಂದೇಶವನ್ನು ಸಹ ಲೋಕದವರು ಅಲ್ಪವಾಗಿ ನೋಡುವ ಕುರುಬರಿಗೇ ಮೊದಲು ತಿಳಿಸಲಾಯಿತು. ಅವರಿಗೆ ಯೇಸುಕ್ರಿಸ್ತನು ಜನಿಸಿದ ಶುಭ ಸಂದೇಶವನ್ನು ಹೇಳಲು ದೂತರ ಸೇನೆಯೇ ಇಳಿದು ಬಂತು. 

 

ಪ್ರಿಯರೇ! ದೇವರ ಪ್ರೀತಿಯನ್ನು ಸವಿದ ನಾವು, ಪ್ರೀತಿಗಾಗಿ ಹಂಬಲಿಸುವ ಅನೇಕರ ಹೃದಯದಲ್ಲಿ ಕ್ರಿಸ್ತನು ಜನಿಸಲು, ಅವರಿಗೆ ಮೊದಲು ಸುವಾರ್ತೆಯನ್ನು ಹೇಳಬೇಕು. ಈ ಭಾರದೊಂದಿಗೆ, ಈ ವರ್ಷ 25,000 ಹಳ್ಳಿಗಳಿಗೆ ಯೇಸುವಿನ ಜನನದ ಸುವಾರ್ತೆಯನ್ನು ಪ್ರಕಟಿಸಲು ಯೋಜನೆ ಹಾಕಿ, ಸಾಧ್ಯವಾದಷ್ಟು ಮಟ್ಟಿಗೆ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಲು ದೇವರು ಕೃಪೆ ಮಾಡಿದರು. ಆತನು ಮಾತ್ರವೇ ಪಾಪವನ್ನು ತೊಳೆದು ಪಾಪದಿಂದ ವಿಮೋಚನೆಯನ್ನು ನೀಡಬಲ್ಲವನು. ಇದನ್ನು ಅನೇಕರಿಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ! ಅನೇಕರಿಂದ ದ್ವೇಷಿಸಲ್ಪಟ್ಟ ಮತ್ತು ಏಕಾಂಗಿಯಾಗಿರುವವರನ್ನು ನಾವೂ ಪ್ರೀತಿಸೋಣ. ಅವರೂ ಕೂಡ ಈ ಹಬ್ಬವನ್ನು ಆನಂದಿಸುವಂತೆ ಪ್ರೀತಿಯನ್ನು ಹಂಚೋಣ. ಕುರುಬರು ಮಗುವನ್ನು ನೋಡಿ, ಆ ವಿಷಯವನ್ನು ಎಲ್ಲಾ ಕಡೆಯಲ್ಲಿಯೂ ಪ್ರಕಟಮಾಡಿದರು. (ಲೂಕ 2:17) ನಂತರ ಅವರು ದೇವರನ್ನು ಮಹಿಮೆಪಡಿಸಿ, ಸ್ತುತಿಸುತ್ತಾ ಹಿಂದಿರುಗಿದರು. ಇಂದು ನಾವು ದೇವರ ಪ್ರೀತಿಯನ್ನು, ಶಾಂತಿಯನ್ನು ಹೊಂದಿ ಹೊಗಳಿ, ಮಹಿಮೆ ಪಡಿಸಿ ಅದರೊಂದಿಗೆ ಸುಮ್ಮನಾಗಿಬಿಡುತ್ತೇವೆ. ನಾವು ಪ್ರಕಟಿಸುತ್ತೇವೆ ಎಂದು ನಂಬಿಯೇ ಅವರ ಪ್ರೀತಿಯನ್ನು ಸವಿಯುವಂತೆ ಮಾಡಿದ್ದಾರೆ. ಮರೆಯದೆ ಸಾರೋಣ, ಮರೆಯದ ದೇವರು ಇಮ್ಮಾನುವೇಲನು ಜೊತೆಯಲ್ಲಿ ಇರುತ್ತಾರೆ.

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ ಮತ್ತು ಸೇವಕರ ಸೌಖ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet