Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.12.2024 (Kids Special)
Share:

By Village Missionary Movement

Sunday, 01-Dec-2024

ಧೈನಂದಿನ ಧ್ಯಾನ(Kannada) – 01.12.2024 (Kids Special)

 

ಎರಡು ಮನೆಗಳು

 

"ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ" - ಯಾಕೋಬ 1:22

 

ಕಣ್ಣು ಸೆಳೆಯುವ ಸುಂದರ ದೃಶ್ಯಾವಳಿಗಳನ್ನು ನೋಡಿದಾಗ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಅಲ್ವಾ ಪುಟಾಣಿಗಳೇ . . . ಹಸಿರು ಹುಲ್ಲುಗಾವಲುಗಳು, ಎತ್ತರದ ಪರ್ವತಗಳ ನಡುವಿನ ಸುಂದರವಾದ ತೊರೆಗಳು ನೋಡಲು ತುಂಬಾ ಅದ್ಭುತವಾಗಿರುತ್ತದೆ. ಯೇಸು ಈ ಲೋಕದಲ್ಲಿ ಜೀವಿಸುತ್ತಿದ್ದಾಗ, ಅವರು ಎಲ್ಲಿಗೆ ಹೋದರೂ, ಜನರು ಗುಂಪು ಗುಂಪಾಗಿ ಬಂದು ಬಿಡುತ್ತಿದ್ದರು. ಈ ತಿಂಗಳೂ ಸಹ ಯೇಸು ರಾಜನ ಜನ್ಮದಿನವನ್ನು ಆಚರಿಸುವ ಕ್ರಿಸ್ಮಸ್ ಬರಲಿದೆ. ಹಾಗಾದರೆ ಪುಟಾಣಿಗಳೇ, ನಿಮಗೆಲ್ಲಾ ಕೊಂಡಾಟ ಅಲ್ವಾ? ಸೂಪರ್. ಸರಿ, ಇಂದು ಯೇಸು ಹೇಳಿದ ಒಂದು ಸಾಮ್ಯವನ್ನು ಕೇಳೋಣ್ವಾ? ಸಾಮ್ಯ ಎಂದರೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಹೇಳುವ ಉದಾಹರಣೆಯಾಗಿದೆ.

 

ಯೇಸು ಹೇಳಿದ್ದನ್ನು ಕೇಳಲು ನೀವು ತುಂಬಾ ಉತ್ಸುಕರಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ, ಸರಿ. ಒಂದು ಕಾಲದಲ್ಲಿ ಒಂದೇ ಗ್ರಾಮದಲ್ಲಿ ವಾಸವಾಗಿದ್ದ ಇಬ್ಬರಿಗೂ ಹೊಸ ಮನೆ ಕಟ್ಟಲು ಆಸೆಯಾಯಿತಂತೆ. ಒಬ್ಬನು ನಾನು ಬಂಡೆಯ ಮೇಲೆ ಮನೆ ಕಟ್ಟುತ್ತೇನೆ ಅದು ಗಟ್ಟಿಯಾಗಿ ಮತ್ತು ಭದ್ರವಾಗಿ ಇರುತ್ತದೆ ಎಂದು ಬಹಳ ಶ್ರಮಪಟ್ಟು ಬಂಡೆಯನ್ನು ಅಗೆದು ಸುಂದರವಾದ ಮನೆಯನ್ನು ಕಟ್ಟಿ ಮುಗಿಸಿದನು. ಇನ್ನೊಬ್ಬ ಮನುಷ್ಯ ನಿನ್ನಂತೆ ಕಷ್ಟಪಟ್ಟು ಬಂಡೆ ಒಡೆದು ಮನೆ ಕಟ್ಟಲು ಹೋಗುವುದಿಲ್ಲ. ನಾನು ಮರಳಿನ ಮೇಲೆ ಕಟ್ಟುತ್ತೇನೆ. ಅದೇ ಈಜಿ ಮತ್ತು ಬೇಗ ಕಟ್ಟಬಹುದು ಎಂದುಕೊಂಡು ಮರಳಿನ ಮೇಲೆ ಸೂಪರ್ ಮನೆ ಕಟ್ಟಿ ಮುಗಿಸಿದನು. ಇಬ್ಬರೂ ತುಂಬಾ ಸಂತೋಷದಿಂದ ಬದುಕುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಮಳೆ ಸುರಿದು, ಗಾಳಿ ಜೋರಾಗಿ ಬೀಸಿತು ಮತ್ತು ದೊಡ್ಡ ಪ್ರವಾಹ ಉಂಟಾಯಿತು. ಬಂಡೆಯ ಮೇಲೆ ಕಟ್ಟಿದ ಮನೆ ಅದ್ಭುತವಾಗಿ ಅಲುಗಾಡದೇ ನಿಂತಿತ್ತು. ಆದರೆ ಮರಳಿನ ಮೇಲೆ ನಿರ್ಮಿಸಲಾದ ಮನೆ ಆಟವಾಡಲು ಪ್ರಾರಂಭಿಸಿತು. ಪ್ರವಾಹಕ್ಕೆ ಮರಳು ಕೊಚ್ಚಿ ಹೋಗುತ್ತಿದ್ದಂತೆ ಮನೆ ಸ್ವಲ್ಪಮಟ್ಟಿಗೆ ಕುಸಿಯತೊಡಗಿತು. ಅಯ್ಯೋ ನಾನು ಏನು ಮಾಡುವುದು ಅಂತ ಸದ್ದು ಕೇಳಿದ ಕೂಡಲೇ ಮನೆ ಹಾಗೆಯೇ ಕುಸಿದು ಬಿದ್ದು ಹಾಳಾಗಿ ಹೋಯಿತು.

 

ಮುದ್ದು ಪುಟಾಣಿಗಳೇ, ನೀವು ವಾರ ವಾರ ಕಥೆಯನ್ನು ಕೇಳುತ್ತಲೇ ಇದ್ದೀರಲ್ಲಾ ನೀವು ಅದರಂತೆ ಬದುಕುತ್ತಿದ್ದೀರಾ? ಇಲ್ಲವಾದರೆ ಇಂದೇ ಯೇಸಪ್ಪನ ಮಾತು ಕೇಳಿ ಅದರಂತೆ ಬದುಕಲು ನಿರ್ಧರಿಸಿ. ಆಗ ಮಾತ್ರ ನೀವು ಬಂಡೆಯ ಮೇಲೆ ಕಟ್ಟಿದ ಮನೆಯಂತೆ ದೃಢವಾಗಿರುತ್ತೀರಿ. ಪ್ರತಿವಾರವೂ ಕಥೆಯನ್ನು ಕೇಳಿ, ಒಂದು ಕಿವಿಯಲ್ಲಿ ಕೇಳುತ್ತಾ ಇನ್ನೊಂದು ಕಿವಿಯಲ್ಲಿ ಬಿಟ್ಟು ಬಿಟ್ಟು, ಚಾಕಲೇಟು, ಬಿಸ್ಕತ್ತುಗಳನ್ನು ಮಾತ್ರ ತೆಗೆದುಕೊಂಡು ತಿಂದು ಬಿಟ್ಟು ಬಂದುಬಿಟ್ಟರೆ ನಿಮ್ಮ ಜೀವನ ಮರಳಿನ ಮೇಲೆ ಕಟ್ಟಿದ ಮನೆಯಂತಾಗುತ್ತದೆ, ಸಮಸ್ಯೆಗಳು, ಕಷ್ಟಗಳು, ಸೋಲುಗಳು ಬಂದಾಗ ಸುಸ್ತಾಗಿ ಬಿದ್ದು ಹೋಗುತ್ತೀರಿ, ನೀವು ಅದ್ಭುತವಾಗಿ ನೆಲೆಗೊಳ್ಳಬೇಕು ಅಂತಾ ತಾನೇ ಬಯಸುತ್ತೀರ. O.k ಮಂಡಿಯೂರಿ ಪ್ರಾರ್ಥಿಸೋಣ.

 

ಯೇಸಪ್ಪಾ ನಾನು ನಿಮ್ಮ ಮಾತನ್ನು ಕೇಳುವುದು ಮಾತ್ರವಲ್ಲ, ಅದರಂತೆ ಬದುಕಲು ಒಪ್ಪಿಸುತ್ತೇನೆ. ನೀವು ನನ್ನ ಹೃದಯದಲ್ಲಿ ಹುಟ್ಟಿ, ಹೊಸ ಸೃಷ್ಟಿಯಾಗಿ ಬದುಕಲು ನನಗೆ ಸಹಾಯ ಮಾಡಿ, ಆಮೆನ್. O.k ಪುಟಾಣಿಗಳೇ ಕ್ರಿಸ್ಮಸ್ ಶುಭಾಶಯಗಳು Bye.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet