Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.11.2024 (Gospel Special)
Share:

By Village Missionary Movement

Saturday, 30-Nov-2024

ಧೈನಂದಿನ ಧ್ಯಾನ(Kannada) – 30.11.2024 (Gospel Special)

 

ನೀವೂ ಸಹ ಸಾಕ್ಷಿಗಳೇ

 

"ಜನಾಂಗಗಳಲ್ಲಿ ಆತನ ಘನತೆಯನ್ನೂ ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ” - ಕೀರ್ತನೆ 96:3

  

ನಾನು ಪ್ರತಿ ತಿಂಗಳು ಸೇವೆ ಮಾಡುವ ಹಳ್ಳಿಗೆ ಹೋಗಿದ್ದೆ. ಕೆಲಸ ಮಾಡಿ ಮಧ್ಯಾಹ್ನದ ವಿರಾಮವನ್ನು ತೆಗೆದುಕೊಳ್ಳುತ್ತಿದ್ದ ಕೆಲವು ಮಹಿಳೆಯರಿಗೆ ನಾನು ಹಸ್ತಪ್ರತಿಯನ್ನು ನೀಡಿ 'ಯೇಸುಕ್ರಿಸ್ತನ ಬಗ್ಗೆ ಹೇಳಿ, ಆತನು ನಮಗಾಗಿ ಶಿಲುಬೆಯಲ್ಲಿ ಮರಣ ಹೊಂದಿದ್ದಾರೆ" ಎಂದು ಹೇಳಿದೆನು. ಅವರಿಗೆ ಅದು ಅರ್ಥವಾಗುವುದು ಕಷ್ಟವಾಗಿತ್ತು. ನಂಬದೇ ನಕ್ಕರು. ನಂತರ ನಾನು ನನ್ನ ಜೀವನದಲ್ಲಿ ಯೇಸುಕ್ರಿಸ್ತನು ಮಾಡಿದ್ದನ್ನು ಸಾಕ್ಷಿಯಾಗಿ ಹೇಳಿದೆ. ಎಂಟು ವರ್ಷಗಳಿಂದ ವಾಮಾಚಾರದಿಂದ ಕಟ್ಟಲ್ಪಟ್ಟು ಹಲವು ಹೋರಾಟಗಳನ್ನು ಎದುರಿಸುತ್ತಾ ಎಲ್ಲೆಲ್ಲೋ ಅಲೆದಾಡಿ ಸ್ವಸ್ಥತೆ ಸಿಗದೇ ಇರುವಾಗ ಯೇಸುವನ್ನು ನನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿ, ಅವರನ್ನು ನಂಬಲು ಪ್ರಾರಂಭಿಸಿದಾಗ, ಯೇಸುಕ್ರಿಸ್ತನು ನನ್ನನ್ನು ವಾಮಾಚಾರದಿಂದ ಬಿಡುಗಡೆ ಮಾಡಿದನೆಂದು ನಾನು ಸಾಕ್ಷಿ ಹೇಳಿ, ಇನ್ನೂ ಯೇಸುವಿನ ಸುವಾರ್ತೆಯನ್ನು ಪ್ರಕಟಿಸಿದೆನು. ಅವರು ಎಚ್ಚರಿಕೆಯಿಂದ ಆಲಿಸಿ ಹಸ್ತಪ್ರತಿಯನ್ನೂ ಸ್ವೀಕರಿಸಿದರು.

 

ಮಾರ್ಕನು 5 ನೇ ಅಧ್ಯಾಯದಲ್ಲಿ ಅಶುದ್ಧ ಆತ್ಮವುಳ್ಳ ವ್ಯಕ್ತಿಯೊಬ್ಬನು ಸಮಾಧಿಗಳಿಂದ ಬಂದು ಯೇಸುವಿನಿಂದ ಸ್ವಸ್ಥತೆಯನ್ನು ಪಡೆದುಕೊಂಡನು. ಅಶುದ್ಧಾತ್ಮವುಳ್ಳ ಆ ಮನುಷ್ಯನು ಬಟ್ಟೆ ಧರಿಸಿ ಯೇಸುವಿನ ಪಾದದ ಬಳಿ ನಿಂತಿರುವುದನ್ನು ಕಂಡು ಜನರು ಸಂತೋಷಪಡದೇ ಭಯಪಟ್ಟರು. ಊರನ್ನೇ ಬಿಟ್ಟು ಹೋಗುವಂತೆ ಹೇಳಿದರು. ಆದರೆ ಈ ಸಮಾಧಿ ಮನುಷ್ಯನು, ಕರ್ತನು ತನ್ನನ್ನು ಕರುಣಿಸಿ, ತನಗೆ ಮಾಡಿದ್ದೆಲ್ಲವನ್ನೂ ಸಾಕ್ಷಿಯಾಗಿ ಇತರರಿಗೆ ಬೋಧಿಸಿದನು. ನೋಡಿ, ಅವನು ದೇವರಿಂದ ಒಳ್ಳೆಯದನ್ನು ಸ್ವೀಕರಿಸಿ ಸುಮ್ಮನಿರಲು ಸಾಧ್ಯವಾಗಲಿಲ್ಲ. ತನ್ನ ಜೀವನದಲ್ಲಿ ನಡೆದ ಅದ್ಭುತವನ್ನು ಇತರರಿಗೆ ತಿಳಿಸಿದನು. ಆ ಮೂಲಕ ಅನೇಕ ಜನರು ದೇವರನ್ನು ನಂಬಿದರು.

 

ಪ್ರಿಯರೇ! ಯೇಸು ನನಗೆ ಯಾವ ಒಳ್ಳೆಯದನ್ನೂ ಮಾಡಿಲ್ಲ ಎಂದು ನೀವು ಹೇಳಲು ಸಾಧ್ಯವೇ? ಇಲ್ಲವೇ ಇಲ್ಲ. ಅವರು ಎಷ್ಟೆಷ್ಟೋ ಅದ್ಭುತಗಳನ್ನು ಮಾಡಿದ್ದಾರೆ ಅಲ್ಲವೇ? ಅದನ್ನು ಸಾಕ್ಷಿಯಾಗಿ ಇತರರಿಗೆ ತಿಳಿಸಿ. ನೀವು ಹೇಳುವ ನಿಮ್ಮ ಚಿಕ್ಕ ಸಾಕ್ಷಿಯು ಇತರರಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಬೋಧನೆಯನ್ನು ಹೇಗೆ ಮಾಡಬೇಕೆಂದು ತಿಳಿಯದ ದಂಡು, ತಾನು ಗುಣಮುಖನಾದ ನಂತರ ಹತ್ತು ಪಟ್ಟಣಗಳನ್ನು ಕದಲಿಸಿಬಿಟ್ಟನು. ನಮ್ಮ ಬಗ್ಗೆ ಏನು? ಯೇಸುವಿನಿಂದ ಎಷ್ಟೋ ಪ್ರಯೋಜನಗಳನ್ನು ಪಡೆದುಕೊಂಡ ನಾವು ಯೇಸುವನ್ನು ಪ್ರಚಾರ ಮಾಡಲು ಪ್ರಾರಂಭಿಸೋಣವಾ!

- Sis. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

ರಾಕ್‌ಲ್ಯಾಂಡ್ ಬೈಬಲ್ ಕಾಲೇಜಿನ ಮಕ್ಕಳು ಕರ್ತನಿಗಾಗಿ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet