Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.11.2024 (Gospel Special)
Share:

By Village Missionary Movement

Thursday, 28-Nov-2024

ಧೈನಂದಿನ ಧ್ಯಾನ(Kannada) – 28.11.2024 (Gospel Special)

 

ಹೊಸ ಉದ್ದೇಶ

 

"ಯೇಸು ಅವರಿಗೆ--ನೀವು ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ನಾನು ನಿಮ್ಮನ್ನು ಮಾಡುವೆನು ಅಂದನು" - ಮಾರ್ಕ 1:17

  

ಜಾಕೋಬ್ ಡೇವಿಸ್ 1800 ರ ದಶಕದಲ್ಲಿ ವಾಸಿಸುತ್ತಿದ್ದ ಟೈಲರ್ ಆಗಿದ್ದರು. ಆಗಿನ ಕಾಲದಲ್ಲಿ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುವವರ ಪ್ಯಾಂಟ್ ಬೇಗ ಹರಿದು ಹೋಗುತ್ತಿತ್ತು. ಆದ್ದರಿಂದ ಇದನ್ನು ಪರಿಹರಿಸಲು, ಅವರು ಟೆಂಟ್ ಹಾಕಲು ಉಪಯೋಗಿಸುವ ಬಟ್ಟೆಯನ್ನು ಖರೀದಿಸಿದರು. ಆ ಬಟ್ಟೆ ಅಷ್ಟು ಸುಲಭವಾಗಿ ಹರಿದು ಹೋಗದಂತಹ ಮಂದವಾದ ಬಟ್ಟೆಯಾಗಿತ್ತು. ಆ ಬಟ್ಟೆಯಿಂದ ಕೆಲಸಗಾರರಿಗೆ ತಕ್ಕ ಪ್ಯಾಂಟ್ ಹೊಲಿಯುತ್ತಿದ್ದರು. ಆ ದಿನವೇ ನೀಲಿ ಜೀನ್ಸ್ ಹುಟ್ಟಿದ್ದು. ಇಂದಿಗೂ, ಇದು ಅನೇಕರು ಧರಿಸುವ ನೆಚ್ಚಿನ ಉಡುಪಾಗಿದೆ. ಒಬ್ಬ ವ್ಯಕ್ತಿ ಟೆಂಟ್ ಬಟ್ಟೆಯನ್ನು ಮರುರೂಪಿಸಿದ ಕಾರಣ ಇದು ಸಂಭವಿಸಿತು.

      

ಸೀಮೋನ ಪೇತ್ರನು ಮತ್ತು ಅವನ ಸ್ನೇಹಿತರು ಗಲಿಲಾಯ ಸಮುದ್ರದಲ್ಲಿ ಸಾಮಾನ್ಯ ಮೀನುಗಾರರಾಗಿದ್ದರು. ಯೇಸು ಕ್ರಿಸ್ತನು ಬಂದು ಅವರಿಗೆ, "ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ನಾನು ನಿಮ್ಮನ್ನು ಮಾಡುವೆನು" ಎಂದು ಹೇಳಿ, ಅವರಿಗೆ ಒಂದು ಹೊಸ ಉದ್ದೇಶವನ್ನು ಮತ್ತು ಪ್ರಾರಂಭವನ್ನು ನೀಡಿದರು. ಈ ಹೊಸ ಉದ್ದೇಶವು ಅವರ ಜೀವನವನ್ನು ಬದಲಾಯಿಸಿತು. ಯೇಸುವೇ ಅವರಿಗೆ ಎಲ್ಲವನ್ನೂ ಬೋಧಿಸಿದರು. ದೇವರು ಅವರ ಮೂಲಕ ಜನರ ಹೃದಯವನ್ನು ಮುಟ್ಟಿದರು. ಅವರು ಯೇಸುವಿನ ಶಿಲುಬೆಗೇರಿಸುವಿಕೆ ಮತ್ತು ಪುನರುತ್ಥಾನದ ಶಕ್ತಿಯನ್ನು ಜಗತ್ತಿಗೆ ತೆಗೆದುಕೊಂಡು ಹೋದರು.

 

ಪ್ರಿಯರೇ! ಯೇಸುವಿನ ಶಿಷ್ಯರಂತೆ, ಕ್ರಿಸ್ತನ ಪ್ರೀತಿಯನ್ನು ಮತ್ತು ರಕ್ಷಣೆಯನ್ನು ತಿಳಿದಿರುವ ನಾವು ಅದನ್ನು ತಿಳಿಯದ ಲೋಕದ ಜನರ ನಡುವೆ ಶುಭವಾರ್ತೆಯಾಗಿ ತೆಗೆದುಕೊಂಡು ಹೋಗೋಣ. ನಾವು ನೀಡುವ ಒಂದು ಸಣ್ಣ ಹಸ್ತಪ್ರತಿ ಅಥವಾ ಹೊಸ ಒಡಂಬಡಿಕೆಯು ಅವರ ಜೀವನ ಮತ್ತು ಗುರಿಗಳಲ್ಲಿ ಬದಲಾವಣೆಯನ್ನು ತರುತ್ತದೆ. ಇಂತಹ ಅನೇಕ ಸಾಕ್ಷಿಗಳನ್ನು ಹೇಳಬಹುದು. ಜೀವನದಲ್ಲಿ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ ಅನೇಕ ಜನರನ್ನು ಹಸ್ತಪ್ರತಿ ರಕ್ಷಿಸಿದೆ. ಅವರಿಗೆ ಬದುಕಲು ಹೊಸ ಉದ್ದೇಶವನ್ನು ನೀಡಿ ಬದುಕಿಸಿದೆ. ಅಂದು ಆ ಸರಿಯಾದ ಸಮಯದಲ್ಲಿ ಆ ವ್ಯಕ್ತಿಗೆ ಅದು ಸಿಗದೇ ಹೋಗಿದ್ದರೆ ಆ ಆತ್ಮದ ಸ್ಥಿತಿ ಏನು? ಯೋಚಿಸೋಣ. ದೇವರಿಗಾಗಿ ನಮ್ಮ ಕೈಲಾದಷ್ಟು ಮಾಡೋಣ. ನಮ್ಮ ಹೃದಯವು ದೇವರ ಪ್ರೀತಿಯಿಂದ ತುಂಬಿರಲಿ. ನೆರೆಹೊರೆಯವರೆಲ್ಲರಿಗೂ ಯೇಸುವಿನ ಪ್ರೀತಿಯನ್ನು ಹೇಳೋಣ. ಯೇಸುಕ್ರಿಸ್ತನ ಸುವಾರ್ತೆಯು ಅವರನ್ನು ಹೊಸ ಸೃಷ್ಟಿಯಾಗಿ ಮಾರ್ಪಡಿಸಿ, ಹೊಸ ಉದ್ದೇಶವನ್ನು ಹೊಂದಿಕೊಳ್ಳುವಂತೆ ಪ್ರಾರ್ಥಿಸೋಣ! ಕೊಡೋಣ!! ದುಡಿಯೋಣ!!!

- Sis. ಬ್ಯೂಲಾ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಪ್ರಾರ್ಥನಾ ಗೋಪುರದ ನಿರ್ಮಾಣದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al