Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.11.2024 (Gospel Special)
Share:

By Village Missionary Movement

Monday, 25-Nov-2024

ಧೈನಂದಿನ ಧ್ಯಾನ(Kannada) – 25.11.2024 (Gospel Special)

 

ಗೋದಿ ಕಾಳು 

 

"…ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯ ದಿದ್ದರೆ ಅದು ಒಂದೇ ಆಗಿ ಉಳಿಯುವದು; ಅದು ಸತ್ತಮೇಲೆ ಬಹಳ ಫಲಕೊಡುವದು" - ಯೋಹಾನ 12:24

  

ಗೋದಿಯ ಉಪಯೋಗವೇನು? ಒಂದು ಅದು ಆಹಾರ ಅಥವಾ ಬೀಜ. ಹೌದು, ಒಂದು ಬೀಜ ಸತ್ತು ಅನೇಕ ಹೊಸ ಬೀಜಗಳನ್ನು ಕೊಡುತ್ತದೆ. ಸುವಾರ್ತೆಗಾಗಿ ಸಾಯುವವರನ್ನು ಸತ್ಯವೇದವು ಗೋಧಿಯ ಕಾಳಿಗೆ ಹೋಲಿಸುತ್ತದೆ.

    

ಜೇಮ್ಸ್ ಚಾಲ್ಮರ್ಸ್ ಎಂಬ ಮಿಷನರಿ ದಂಪತಿಗಳು ಸುವಾರ್ತೆ ಸಾರಲು ಆಸ್ಟ್ರೇಲಿಯಾದ ಉತ್ತರದಲ್ಲಿರುವ ನ್ಯೂ ಗಿನಿಯಾ ದ್ವೀಪಕ್ಕೆ ಹೋದರು. ಆ ದ್ವೀಪದ ಮನುಷ್ಯರು ನರಭಕ್ಷಕರು ಎಂದು ತಿಳಿದರೂ, ದೇವರ ಪ್ರೀತಿಯಿಂದ ತುಂಬಲ್ಪಟ್ಟು ಧೈರ್ಯವಾಗಿ, ಆ ಜನರನ್ನು ಹುಡುಕಿಕೊಂಡು ಹೋದರು. ಅವರು 105 ಕ್ಕೂ ಹೆಚ್ಚು ಸಣ್ಣ ದ್ವೀಪವಾಸಿಗಳಿಗೆ ಕ್ರಿಸ್ತನ ಪ್ರೀತಿಯನ್ನು ಬೋಧಿಸಿದರು. ಸುಮಾರು 90 ದ್ವೀಪಗಳಲ್ಲಿ ಸುವಾರ್ತೆ ಸಾರಿದ ಮೊಟ್ಟ ಮೊದಲ ಬಿಳಿಯ ವ್ಯಕ್ತಿ ಇವರೇ. ತನ್ನ ಸ್ನೇಹಿತ ಆಲಿವರ್ ಟಾಮ್ಕಿನ್ಸ್ ಜೊತೆಗೆ, ಅವರು ಏಪ್ರಿಲ್ 8, 1901 ರಂದು ಈಸ್ಟರ್ ಭಾನುವಾರದಂದು ಕೊರಿಬರಿ ದ್ವೀಪಕ್ಕೆ ಹೋದರು. ಆದಿವಾಸಿಗಳು ಸಂಭ್ರಮದಿಂದ ಸ್ವಾಗತಿಸಿದರು. ತಮ್ಮ ಸ್ವಾಗತ ನಿಜವೆಂದು ನಂಬಿ ಖುಷಿಪಡುತ್ತಿರುವಾಗಲೇ ಅವರ ಮೇಲೆ ಅನಿರೀಕ್ಷಿತ ದಾಳಿ ನಡೆಯಿತು. ನಿಮಿಷಗಳಲ್ಲಿ ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಕುದಿಯುವ ಸಾರಿನೊಳಗೆ ಹಾಕಿಬಿಟ್ಟರು. ಆ ಜನರಿಗೆ ಇಬ್ಬರೂ ಆಹಾರವಾದರು.     

  

ಸತ್ಯವೇದದಲ್ಲಿ, ಅನೇಕ ಪರಿಶುದ್ಧರು ಮತ್ತು ಆದಿ ಅಪೊಸ್ತಲರು ಕ್ರಿಸ್ತನ ನಿಮಿತ್ತವಾಗಿ ರಕ್ತ ಸಾಕ್ಷಿಗಳಾಗಿ ಮರಣಹೊಂದಿದರು. ಮೊದಲ ರಕ್ತಸಾಕ್ಷಿ ಸ್ತೆಫನು ಕಲ್ಲೆಸೆದು ಕೊಲ್ಲಲ್ಪಟ್ಟರು (ಅಪೊಸ್ತಲ. 7:60) ಇಬ್ರಿಯ 11:36, 37 ರಲ್ಲಿ ನಂಬಿಕೆಯ ವೀರರ ಪಟ್ಟಿಯಲ್ಲಿ ಕೆಲವರು ನಿಂದೆಗಳನ್ನು, ಹೊಡೆತಗಳನ್ನು, ಬಂಧನಗಳನ್ನು ಅನುಭವಿಸಿದರು, ಕಲ್ಲೆಸೆಯಲ್ಪಟ್ಟರು, ಕತ್ತಿಗಳಿಂದ ಕೊಯ್ಯಲ್ಪಟ್ಟರು, ಪರೀಕ್ಷಿಸಲ್ಪಟ್ಟರು ಮತ್ತು ಖಡ್ಗಗಳಿಂದ ಕತ್ತರಿಸಲ್ಪಟ್ಟರು. ಅಪ್ಪಪ್ಪಾ... ಆ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ. ಇಂದಿಗೂ ದೇವಜನರು ಸುವಾರ್ತಾ ಪ್ರಚಾರಕ್ಕಾಗಿ ಗೋಧಿಯ ಕಾಳುಗಳಾಗಿ ಬಿತ್ತಲ್ಪಡುತ್ತಿದ್ದಾರೆ. 

  

ಹೌದು, ಪ್ರಿಯರೇ, ಆಗ ಇದ್ದಂತೆಯೇ, ಈಗಲೂ ಪ್ರಪಂಚದ ಅನೇಕ ದೇಶಗಳಲ್ಲಿ ಸುವಾರ್ತೆ ಸಾರುವುದು ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಇಂತಹ ಘಟನೆಗಳನ್ನು ಕೇಳಿದಾಗ ಮುಂದೆ ಸಾಗಲು ಹಿಂದೇಟು ಹಾಕುತ್ತಿದ್ದೇವೆ. ಆದರೆ ಯೇಸು ಕ್ರಿಸ್ತನು ತನ್ನ ಶಿಷ್ಯರನ್ನು ಸುವಾರ್ತೆಯನ್ನು ಸಾರಲು ಕಳುಹಿಸಿದಾಗ, ಅವರನ್ನು ನೋಡಿ, ಶರೀರವನ್ನು ಕೊಲ್ಲುವವರಿಗೆ ಹೆದರಬೇಡಿರಿ; ಆದರೆ ಆತ್ಮ ಮತ್ತು ಶರೀರ ಎರಡನ್ನೂ ನರಕದಲ್ಲಿ ನಾಶಮಾಡಲು ಶಕ್ತನಾಗಿರುವಾತನಿಗೇ ಭಯಪಡಿರಿ. (ಮತ್ತಾಯ 10:28) ಎಂದು ಹೇಳಿ ಕಳುಹಿಸಿದರು. ದೇವರು ತನ್ನ ಶಿಷ್ಯರನ್ನು ಸುವಾರ್ತೆಗೆ ಕಳುಹಿಸುವಾಗ ಹೇಗೆ ಪ್ರೋತ್ಸಾಹಿಸಿದರೆಂದು ನೋಡಿ. ಹೌದು, ನಾವೂ ಸಹ ಸುವಾರ್ತೆಯನ್ನು ಸಾರಲು ಧೈರ್ಯದಿಂದ ಹೊರಡೋಣ. ಅವರ ಚಿತ್ತವಿಲ್ಲದೆ ಕೂದಲೇ ಉದುರುವುದಿಲ್ಲ ಹಾಗಿರುವಾಗ ಇನ್ನು ತಲೆ‌ ಬಿದ್ದುಹೋಗುತ್ತದಾ! ಕರೆದಾತನು ನಮ್ಮೊಂದಿಗಿದ್ದಾರೆ. ಭಯಪಡಬೇಡಿರಿ.

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ನಾವು ನಡೆಸಿದ ಯೌವನಸ್ಥರ ಶಿಬಿರಗಳಲ್ಲಿ ಭಾಗವಹಿಸಿದ ಯೌವನಸ್ಥರು ದೇವರಿಗಾಗಿ ವೈರಾಗ್ಯವಾಗಿ ಜೀವಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino