By Village Missionary Movement
Friday, 22-Nov-2024ಧೈನಂದಿನ ಧ್ಯಾನ(Kannada) – 22.11.2024 (Gospel Special)
ಒಂದು ಸಣ್ಣ ಆರಂಭ
"ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕ ದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ" - 1 ಕೊರಿಂಥ. 1:26
ಇಂದು ನಾವು ಚೆನ್ನೈನ ಕೊಳತ್ತೂರ್‌ನಲ್ಲಿರುವ ಚರ್ಚ್‌ನ ಬಾಗಿಲಲ್ಲಿ ಹೂವುಗಳನ್ನು ಮಾರುವ ಅಜ್ಜಿಯ ಮಹಾನ್ ಕಾರ್ಯವನ್ನು ಧ್ಯಾನಿಸೋಣ. ಪ್ರತಿ ಭಾನುವಾರ, ಅಜ್ಜಿ ಹೂವುಗಳನ್ನು ಮಾರುತ್ತಿದ್ದರು ಮತ್ತು ಚರ್ಚ್ ಆರಾಧನೆಯ ಹಾಡುಗಳನ್ನು ಮತ್ತು ವಾಕ್ಯಗಳನ್ನು ಕೇಳುತ್ತಿದ್ದರು. ಕೊನೆಗೆ ಈ ಅಜ್ಜಿಯೂ ದೇವರ ರಕ್ಷಣೆಯನ್ನು ಪಡೆದು ಚರ್ಚಿನ ಸದಸ್ಯೆಯಾದರು.
ಭಾನುವಾರದಂದು ಹೂವು ಮಾರುವುದಲ್ಲದೆ, ಈ ಅಜ್ಜಿ ದೈನಂದಿನ ಸೇವೆಗಳಿಗೆ ಹಾಜರಾಗುತ್ತಿದ್ದರು. ಅವರು ಕೆಲವೇ ವರ್ಷಗಳಲ್ಲಿ ವೃದ್ಧಾಪ್ಯದಿಂದ ನಿಧನರಾದರು. ಅವರು ಗಳಿಸಿದ ಆತ್ಮಗಳು 12 ಕುಟುಂಬಗಳು. ಆ 12 ಕುಟುಂಬಗಳು ಅದೇ ಸಭೆಯಲ್ಲಿ ಆರಾಧನೆಯಲ್ಲಿ ಭಾಗವಹಿಸುತ್ತಿದ್ದರು. ಸರಳವಾಗಿ ಕಾಣುವ ಅಜ್ಜಿಯೊಬ್ಬರು ಆತ್ಮ ಆದಾಯ ಮಾಡುವುದರಲ್ಲಿ ನಮ್ಮ ಮುಂದೆ ಒಂದು ಉತ್ತಮ ಮಾದರಿಯಾಗಿ ಕಾಣುತ್ತಿದ್ದಾರೆ.
ಯೋಹಾನನ ಸುವಾರ್ತೆಯ ನಾಲ್ಕನೇ ಅಧ್ಯಾಯದಲ್ಲಿ ಸಮಾರ್ಯದ ಸ್ತ್ರೀಯ ಮೂಲಕ ನಡೆದ ಅದ್ಭುತ ಸಾಕ್ಷ್ಯವನ್ನು ನಾವು ಓದಬಹುದು. ಸಮಾರ್ಯದ ಸ್ತ್ರೀಯು ಹೇಳಿದ ಮಾತುಗಳ ನಿಮಿತ್ತವಾಗಿ ಇಡೀ ಗ್ರಾಮವೇ ರಕ್ಷಣೆ ಹೊಂದಿತು ಎಂದು ಓದುತ್ತೇವೆ. ದೇವರು ತನ್ನ ಸೇವೆಯಲ್ಲಿ ಸಾಮಾನ್ಯ ಜನರೊಂದಿಗೆ ಅಪರೂಪದ ಅದ್ಭುತಗಳನ್ನು ಮಾಡಿದ್ದಾರೆ. ಸುವಾರ್ತಾಬೋಧನೆಗೆ ಅನೇಕ ಪ್ರತಿಭೆಗಳು ಮತ್ತು ಕೃಪೆಗಳ ಅಗತ್ಯವಿರುವುದಿಲ್ಲ. ಮತ್ತೊಬ್ಬರೂ ರಕ್ಷಣೆ ಹೊಂದಬೇಕು ಎಂಬ ಆತ್ಮಭಾರ ಇದ್ದರೇನೆ ಸಾಕು.
ಕ್ರಿಸ್ತನಲ್ಲಿ ಪ್ರಿಯರೇ, ಈ ಸಂದೇಶವನ್ನು ಓದುತ್ತಿರುವ ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮಗೆ ಸಾಧ್ಯವಾದಷ್ಟು ಆತ್ಮಗಳನ್ನು ಸಂಪಾದಿಸಿರಿ. ವೈಯಕ್ತಿಕ ಸುವಾರ್ತಾಬೋಧನೆಯ ಮೂಲಕ ಪ್ರತಿಯೊಬ್ಬರನ್ನು ಕ್ರಿಸ್ತನೊಳಗೆ ಕರೆದೊಯ್ಯಿರಿ. ಹಸ್ತಪ್ರತಿ ಸೇವೆಗಳು, ಮಕ್ಕಳ ಸೇವೆಗಳನ್ನು ನಿಮ್ಮಿಂದ ಸಾಧ್ಯವಾದಷ್ಟು ನಿಮ್ಮ ಪ್ರದೇಶದಲ್ಲಿ, ಎದುರು ಹಳ್ಳಿಯಲ್ಲಿ ಪ್ರಾರಂಭಿಸಿ. ಪ್ರಾರಂಭವು ಚಿಕ್ಕದಾಗಿದ್ದರೂ, ದೇವರು ಅಂತ್ಯವನ್ನು ಪರಿಪೂರ್ಣಗೊಳಿಸುತ್ತಾರೆ. ಸಣ್ಣದಾಗಿ ಪ್ರಾರಂಭಿಸಲು ಇಂದೇ ನಿರ್ಧರಿಸಿ. ಕರ್ತನು ನಿಮ್ಮನ್ನು ಸುವಾರ್ತೆ ಸೇವೆಯಲ್ಲಿ ಉಪಯೋಗಿಸುತ್ತಾರೆ. ಪವಿತ್ರಾತ್ಮನು ನಿಮ್ಮನ್ನು ಆತ್ಮಗಳ ಕಡೆಗೆ ನೇರವಾಗಿ ಮುನ್ನಡೆಸಲಿ.
- Bro. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಪಶ್ಚಿಮ ಬಂಗಾಳದ ಸೇವೆಗಳಲ್ಲಿ ದೇವರು ತೆರೆದ ಬಾಗಿಲನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482