Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.11.2024 (Gospel Special)
Share:

By Village Missionary Movement

Wednesday, 20-Nov-2024

ಧೈನಂದಿನ ಧ್ಯಾನ(Kannada) – 20.11.2024 (Gospel Special)

 

ಶುಭವಾರ್ತೆ ಸಾರುವುದು 

 

"…ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು ಎಂದು ಹೇಳಿದನು" - ಯೋಹಾನ 4:14

 

ಕೆನಡಾದಲ್ಲಿ ಒಬ್ಬ ಅನಾಥ ಚಿಕ್ಕಹುಡುಗ ಇದ್ದನು. ಅವನಿಗೆ ಊಟ, ಬಟ್ಟೆ ಇಲ್ಲದೆ ಕಷ್ಟಪಟ್ಟನು. ಅವನನ್ನು ಸಭೆಯ ಬೋಧಕರು ಪರಾಂಬರಿಸಿ ನೋಡಿಕೊಳ್ಳುತ್ತಿದ್ದರು. ಒಂದು ದಿನ ಅವರು ಹುಡುಗನಿಗೆ ಕೆಲವು ಕರಪತ್ರಗಳನ್ನು ಕೊಟ್ಟು, "ಯೇಸು ಕ್ರಿಸ್ತನು ನಿಮ್ಮನ್ನು ಪ್ರೀತಿಸುತ್ತಾರೆ" ಎಂದು ಹೇಳಿ ನೋಡುವವರೆಲ್ಲರಿಗೂ ಇದನ್ನು ಕೊಟ್ಟು ಬಾ. ಕತ್ತಲಾಗುವ ಮುನ್ನ ಬಂದುಬಿಡು ಎಂದು ಹೇಳಿ ಕಳುಹಿಸಿದರು. ಆ ಹುಡುಗನೂ ಕೊಡುತ್ತಾ ಬಂದನು. ಒಂದೇ ಒಂದು ಟ್ರ್ಯಾಕ್ಸ್ ಮಾತ್ರ ಇತ್ತು. ಯಾರಿಗೆ ಕೊಡುವುದು ಎಂದು ಕಾಯುತ್ತಿದ್ದನು. ಆಗ ಅವನು ಒಂದು ಮನೆಯನ್ನು ನೋಡಿದನು. ಆ ಮನೆಯ ಬಾಗಿಲನ್ನು ಬಡಿಯುತ್ತಲೇ ಇದ್ದನು. ಆ ಮನೆಯಲ್ಲಿ ಒಬ್ಬ ಮಹಿಳೆ ಮಾತ್ರ ಇದ್ದಳು. ಅವಳಿಗೆ ಯಾರೂ ಇರಲಿಲ್ಲ. ಒಂಟಿಯಾಗಿದ್ದ ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆ ಸಮಯದಲ್ಲೇ ಹುಡುಗ ಬಾಗಿಲು ಬಡಿಯುತ್ತಲೇ ಇದ್ದ.   

 

ಅವಳು ತುಂಬಾ ಕೋಪವಾಗಿ ಬಂದು ಬಾಗಿಲು ತೆರೆದಳು. ಆಗ ಆ ಚಿಕ್ಕ ಹುಡುಗ ಸುಂದರವಾದ ನಗುಮುಖದೊಂದಿಗೆ "ಅಮ್ಮಾ, ಯೇಸುಕ್ರಿಸ್ತನು ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ" ಎಂದು ಹಸ್ತಪ್ರತಿಯನ್ನು ಕೊಟ್ಟು ಓಡಿಹೋದನು. ಅವಳೂ ಸಹ ಬಾಗಿಲು ಮುಚ್ಚಿ ಆ ಟ್ರ್ಯಾಕ್ಸ್ ನಲ್ಲಿ ಏನಿದೆ ಎಂದು ಓದತೊಡಗಿದಳು. ಅದರಲ್ಲಿ ಯೇಸು ಕ್ರಿಸ್ತನು ನಿಮ್ಮನ್ನು ಪ್ರೀತಿಸುತ್ತಾರೆಂದು ನೀವು ತಿಳಿದುಕೊಳ್ಳಲು ಚರ್ಚ್‌ಗೆ ಬನ್ನಿ ಎಂದು ಬರೆಯಲ್ಪಟ್ಟಿತ್ತು. ಮಹಿಳೆ ಆತ್ಮಹತ್ಯೆಯ ಆಲೋಚನೆಯನ್ನು ಕೈಬಿಟ್ಟಳು. ಮರುದಿನ ಸಂತೋಷದಿಂದ ಚರ್ಚ್‌ಗೆ ಹೋಗಿ ಯೇಸು ಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದ ಸಾಕ್ಷಿಯನ್ನು ಹೇಳಿದಳು.

 

ಆ ಹುಡುಗನ ಮೂಲಕ ಬಂದ ಸುವಾರ್ತೆಯು ಒಂದು ಜೀವವನ್ನು ಉಳಿಸಿ ರಕ್ಷಣೆಯೊಳಗೆ ನಡೆಸಿತು. ಅದೇ ರೀತಿ, ಯೋಹಾನ 4: 6-30 ರಲ್ಲಿ, ಯೇಸು ಕ್ರಿಸ್ತನು ಸಮಾರ್ಯದ ಸ್ತ್ರೀಯೊಂದಿಗೆ ಮಾತನಾಡಿ ಅವಳ ಎಲ್ಲಾ ಕಾರ್ಯಗಳನ್ನು ಹೇಳಿ, ಅವಳೊಂದಿಗೆ ಮಾತನಾಡುತ್ತಿರುವುದು ಮೆಸ್ಸೀಯನೇ ಎಂದು ತಿಳಿಸಿದರು. ಅವಳೂ ಸಂತೋಷದಿಂದ ತನ್ನ ಊರಿಗೆ ಓಡಿ ಬಂದು ಯೇಸುಕ್ರಿಸ್ತನ ಬಗ್ಗೆ ಹೇಳಿದಳು. ಆ ಊರಿನವರನ್ನು ರಕ್ಷಣೆಯೊಳಗೆ ಮುನ್ನಡೆಸಿದಳು. ಅದೇ ರೀತಿ ದೇವರು ನಮಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ನಮ್ಮೊಳಗೇ ಇಟ್ಟುಕೊಳ್ಳದೇ ನೆರೆಹೊರೆಯವರಿಗೆ ಹೇಳಬೇಕು. ಯೇಸು ಒಳ್ಳೆಯವನು ಎಂದು, ಆತನ ಪ್ರೀತಿ ಶಾಶ್ವತವಾದದ್ದು ಎಂದು ಹೇಳುವ ಮೂಲಕ ಜನರನ್ನು ರಕ್ಷಣೆಯೊಳಗೆ ಮುನ್ನಡೆಸಬೇಕು. ಇದನ್ನು ನಾವು ಮಾಡಲು ನಮಗೆ ಶಿಕ್ಷಿತರ ನಾಲಿಗೆಯನ್ನು ನೀಡುವಂತೆ ದೇವರನ್ನು ಕೇಳೋಣ. ಶುಭವಾರ್ತೆ ಸಾರೋಣ.  

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ: 

ಕಣ್ಮಣಿಯೇ ಕೇಳ್ ಎಂಬ ಹದಿಹರೆಯದ ಹೆಣ್ಣುಮಕ್ಕಳ ಕಾರ್ಯಕ್ರಮದ ಮೂಲಕ ಅನೇಕ ಹದಿಹರೆಯದ ಹೆಣ್ಣುಮಕ್ಕಳು ಕರ್ತನಿಗಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al