Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.11.2024 (Gospel Special)
Share:

By Village Missionary Movement

Tuesday, 19-Nov-2024

ಧೈನಂದಿನ ಧ್ಯಾನ(Kannada) – 19.11.2024 (Gospel Special)

 

ಅಲ್ಪವಾದ ಯೌವನಸ್ಥ

 

"ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ;…" - ಮತ್ತಾಯ 18:10

 

ಒಬ್ಬ ಯೌವನಸ್ಥನನ್ನು ಸಂಡೇ ಸ್ಕೂಲ್ ಟೀಚರ್ ರಕ್ಷಣೆಯಲ್ಲಿ ಮುನ್ನಡೆಸಿದರು. ಅವನಿಗೆ ಸತ್ಯವೇದದ ಒಂದು ಸರಳವಾದ ವಾಕ್ಯವನ್ನೂ ಕಂಠಪಾಠ ಮಾಡಲು ಸಾಧ್ಯವಾಗಲಿಲ್ಲ. ಸಂಡೇ ಸ್ಕೂಲ್ ಮಕ್ಕಳು ನಕ್ಕರು. ಆದರೆ ಶಿಕ್ಷಕರು ಅವನನ್ನು ಪ್ರೋತ್ಸಾಹಿಸಿದ್ದರಿಂದ ಅವನು ಸಭೆಯ ಸದಸ್ಯನಾಗಲು ಬಯಸಿದ್ದನು. ಅದಕ್ಕಾಗಿ ನಡೆಸಿದ ಮೌಖಿಕ ಪರೀಕ್ಷೆಯಲ್ಲಿ ನಡುಕದೊಂದಿಗೆ ಕಾಣಲ್ಪಟ್ಟ ಈ ಯುವಕನಿಗೆ ಸದಸ್ಯತ್ವದ ಅವಕಾಶವನ್ನು ತಡೆಮಾಡಲಾಯಿತು. 19 ನೇ ವಯಸ್ಸಿನಲ್ಲಿ, ಚಿಕಾಗೋಗೆ ರೈಲು ಹತ್ತಿದನು ಮತ್ತು ಶೂ ಮಾರಾಟಗಾರನಾದನು. 23 ನೇ ವಯಸ್ಸಿನಲ್ಲಿ ಪೂರ್ಣ ಸಮಯ ಕರ್ತನ ಸೇವೆ ಮಾಡಲು ನಿರ್ಧರಿಸಿದನು. 1500 ಮಕ್ಕಳೊಂದಿಗೆ ಭಾನುವಾರ ಶಾಲೆಯನ್ನು ನಡೆಸುತ್ತಿದ್ದನು. 28 ನೇ ವಯಸ್ಸಿನಲ್ಲಿ, ಯಂಗ್ ಮೆನ್ಸ್ ಕ್ರಿಶ್ಚಿಯನ್ ಮೂವ್ಮೆಂಟ್ (Y.M.C.A) ನ ಅಧ್ಯಕ್ಷನಾದನು. ಚಿಕಾಗೋದಲ್ಲಿ ಎರಡು ಚರ್ಚುಗಳನ್ನು ಸ್ಥಾಪಿಸಿದನು. ಅಮೆರಿಕ ಮತ್ತು ಇಂಗ್ಲೆಂಡಿಗೆ ತೆರಳಿ ಸುಮಾರು 5 ಕೋಟಿ ಜನರಿಗೆ ಸುವಾರ್ತೆಯನ್ನು ಸಾರಿದನು. ಆ ಹುಡುಗನೇ ಡಿ.ಎಲ್ ಮೂಡಿ ಎಂಬ ಅಮೆರಿಕದ ಖ್ಯಾತ ಬೋಧಕರು. ಇವರೇ ಅಮೆರಿಕದಲ್ಲಿ ಮೊಟ್ಟ ಮೊದಲ ಬೈಬಲ್ ಕಾಲೇಜಿನ ಸ್ಥಾಪಕರೂ ಆಗಿದ್ದರು. 

  

ದೇವರು ಉಪಯೋಗಿಸುವ ಪಾತ್ರೆಗಳು ಪ್ರಪಂಚದ ದೃಷ್ಟಿಯಲ್ಲಿ ದುರ್ಬಲ ಮತ್ತು ಅತ್ಯಲ್ಪವಾಗಿರಬಹುದು! ದೇವರು ಅವರೊಂದಿಗೆ ಮಹತ್ಕಾರ್ಯಗಳನ್ನು ಮಾಡುತ್ತಾರೆ. ಹಾಗಾಗಿ ನಾವು ಯಾರನ್ನೂ ಕಡಿಮೆ ಅಂದಾಜು ಮಾಡಬಾರದು. ಚಿಕ್ಕ ಮಕ್ಕಳು ತಾನೇ ಇವರು ಬೆಳೆದು ದೇವರನ್ನು ಅಂಗೀಕರಿಸಲಿ ಎಂದು ಭಾವಿಸದೆ ಅವರನ್ನು ಸಂಪೂರ್ಣ ಮಾನವರನ್ನಾಗಿ, ಸಂಪೂರ್ಣ ಆತ್ಮವಾಗಿ ಭಾವಿಸಿ ಸುವಾರ್ತೆಯನ್ನು ಬೋಧಿಸಿ. ನೀವು ಚಿಕ್ಕ ವಯಸ್ಸಿನಲ್ಲೇ ಸುವಾರ್ತೆಯನ್ನು ಬೋಧಿಸಿದರೆ, ಜೀವನದ ಆರಂಭದಲ್ಲೇ ಯೇಸುವನ್ನು ತಿಳಿದುಕೊಂಡು ಅಂಗೀಕರಿಸುತ್ತಾರೆ ಮತ್ತು ಜೀವನಪೂರ್ತಿ ಅವರಿಗಾಗಿ ಬದುಕುತ್ತಾರೆ. ಅವರು ಅವಿದ್ಯಾವಂತರು, ಪ್ರತಿಭಾನ್ವಿತರು, ಚೆಂದ ಕಾಣದವರಾಗಿರಬಹುದು, ಸರಿಯಾದ ಬಟ್ಟೆಯಿಲ್ಲದೆ ಸರಳವಾಗಿರಬಹುದು, ನೀವು ಏನೇ ನೋಡಿದರೂ ಅವರನ್ನು ನಿರ್ಲಕ್ಷಿಸದೆ ಉಪದೇಶಿಸಿರಿ. ಅವರು ನಾಳಿನ ಸಮಾಜದ ಆಧಾರ ಸ್ತಂಭಗಳು. ದೇವರು ಅವರ ಮೂಲಕ ಮಹತ್ಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾರೆ.

 

ನಿನ್ನ ಆಹಾರವನ್ನು ನೀರಿನ ಮೇಲೆ ಹಾಕು, ಬಹಳ ದಿನಗಳ ಮೇಲೆ ಅದು ನಿನಗೆ ಸಿಗುವದು. (ಪ್ರಸಂಗಿ. 11:1) ಎಂದು ಸತ್ಯವೇದವು ಹೇಳುತ್ತಿದೆ. ಫಲಿತಾಂಶವನ್ನು ನಿಮ್ಮ ಕಣ್ಣುಗಳು ತಕ್ಷಣವೇ ನೋಡದಿದ್ದರೂ, ಬಹಳ ದಿನಗಳ ನಂತರ ಜಗತ್ತು ನಿಮ್ಮ ಬಗ್ಗೆ ಮಾತನಾಡುತ್ತದೆ. ಭಾನುವಾರ ಶಾಲೆಯ ಶಿಕ್ಷಕರೊಬ್ಬರು ಆ ಹುಡುಗನನ್ನು ದೇವರ ಕಡೆಗೆ ಮುನ್ನಡೆಸಿದರ ನಿಮಿತ್ತವಾಗಿ ಡಿ.ಎಲ್. ಮೂಡಿ ಎಂಬ ಪ್ರಸಿದ್ಧ ಸೇವಕರು ರೂಪುಗೊಂಡರು. ನೀವೇಕೆ ಅಂತಹ ಸಂಡೇ ಸ್ಕೂಲ್ ಟೀಚರ್ ಆಗಬಾರದು? ನೀವು ಮುನ್ನಡೆಸುವ ಯುವಕರು ಮೂಡಿ ಮತ್ತು ಬಿಲ್ಲಿ ಗ್ರಹಾಂ ಹಾಗೆ ಆಗುತ್ತಾರೆ ಎಂದು ನಂಬಿ ಪ್ರಕಟಿಸಿರಿ. ಪರಲೋಕದ ಪ್ರತಿಫಲವನ್ನು ಪಡೆಯಿರಿ.

- Bro. ಶಿವ ಪಳನಿಸ್ವಾಮಿ

 

ಪ್ರಾರ್ಥನಾ ಅಂಶ:

ಭಾರತದ ಎಲ್ಲಾ ರಾಜ್ಯಗಳಲ್ಲಿ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino