Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.11.2024 (Gospel Special)
Share:

By Village Missionary Movement

Saturday, 16-Nov-2024

ಧೈನಂದಿನ ಧ್ಯಾನ(Kannada) – 16.11.2024 (Gospel Special)

 

ಉಪಯುಕ್ತವಾದ ಪ್ರಯಾಣ

 

"ದೇವರಾತ್ಮನು ಫಿಲಿಪ್ಪನಿಗೆ - ನೀನು ಆ ರಥದ ಹತ್ತಿರ ಹೋಗಿ ಅದರ ಸಂಗಡಲೇ ನಡೆ ಎಂದು ಹೇಳಿದನು" - ಅಪೊಸ್ತಲ 8:29

             

ನಾನು ಉತ್ತರ ಭಾರತದಲ್ಲಿ ಸೇವೆ ಸಲ್ಲಿಸಲು ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸಿದೆ. ಆಗ ಅಲ್ಲಿ ಭಾಷೆ ಕಲಿತು ಸೇವೆ ಮಾಡಲು ಎಷ್ಟು ವರ್ಷ ಬೇಕು ಎಂಬ ಗೊಂದಲವಿತ್ತು. ಆದರೆ, ನೋಡಿ, ಆ ರೈಲು ಪ್ರಯಾಣದಲ್ಲಿ ಕೆಲವರು, "ಎಲ್ಲಿಗೆ, ಏನು ಮಾಡಲು ಹೋಗುತ್ತಿದ್ದೀರಿ?" ಎಂದು ಕೇಳಿದಾಗ ಸರಿಯಾಗಿ ಉತ್ತರಿಸಲಾಗದಿದ್ದರೂ ಯೇಸು, ಜೀಸಸ್ ಎಂದು ನನ್ನ ಕೈಲಾದಷ್ಟು ಹೇಳಿದೆ. ಮತ್ತು ಅಲ್ಲಿಗೆ ರೈಲು ಪ್ರಯಾಣವನ್ನು ಮುಗಿಸಿದ ನಂತರ, ನಾನು ಬಸ್ ಅಥವಾ ರಿಕ್ಷಾದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ, ಪ್ರಶ್ನೆಗಳನ್ನು ಕೇಳುವವರಿಗೆ ನಾನು ಆ ಒಂದೇ ಒಂದು ಪದವನ್ನು ಹೇಳುವ ಮೂಲಕ ಉತ್ತರಿಸಿದೆ. ಹೇಗೋ ರೈಲಿನಲ್ಲಿಯೇ ಸೇವೆಯನ್ನು ಆರಂಭಿಸುವಂತೆ ದೇವರು ಕೃಪೆ ತೋರಿದರು.

          

ಸತ್ಯವೇದದಲ್ಲಿ ಅಪೊ. 8ನೇ ಅಧ್ಯಾಯದ ಹಿಂದಿನ ಭಾಗದಲ್ಲಿ ಒಂದು ಅದ್ಭುತ ಘಟನೆ ಬರೆಯಲಾಗಿದೆ. ಐಥಿಯೋಪ್ಯದ ರಾಣಿಯ ಮಂತ್ರಿಯು ಪ್ರಯಾಣಿಸುವುದನ್ನು ನೋಡುತ್ತೇವೆ. ನಂತರ ದೇವರಾತ್ಮನು ಫಿಲಿಪ್ಪನನ್ನು ಪ್ರೇರೇಪಿಸುವುದನ್ನು ನೋಡುತ್ತೇವೆ. ಫಿಲಿಪ್ಪನು ವಿಧೇಯನಾಗಿ ಮಂತ್ರಿಯ ರಥದಲ್ಲಿ ಸೇರಿಕೊಂಡು ಕರ್ತನಾದ ಯೇಸು ಕ್ರಿಸ್ತನ ಬಗ್ಗೆ ಬೋಧಿಸಿದರು. ಮಂತ್ರಿಯು ಅದನ್ನು ಕೇಳಿ ನೀರಿನ ಬಳಿಗೆ ಬಂದು ದೀಕ್ಷಾಸ್ನಾನ ಪಡೆಯುತ್ತಾರೆ. ನಂತರ ಅವರು ಸಂತೋಷದಿಂದ ತನ್ನ ದೇಶಕ್ಕೆ ಹಿಂದಿರುಗುತ್ತಾರೆ ಇದು ಉಪಯುಕ್ತವಾದ ಪ್ರಯಾಣವಾಗಿ ಮಾರ್ಪಟ್ಟಿತು.

 

ಸ್ನೇಹಿತರೇ! ನಾವು ಎಲ್ಲೆಲ್ಲೋ ಪ್ರಯಾಣಿಸುತ್ತೇವೆ. ಅನೇಕ ಸ್ಥಳಗಳಿಗೆ ಹೋಗುತ್ತೇವೆ. ಬಸ್ಸಿನಲ್ಲಿ ನಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಗೆ ಸುವಾರ್ತೆ ಹೇಳು ಎಂದು ಪವಿತ್ರಾತ್ಮನು ನಮ್ಮ ಮನಸ್ಸಿನಲ್ಲಿ ಭಾರವನ್ನು ಕೊಟ್ಟು ಎಷ್ಟು ಬಾರಿ ನಮ್ಮನ್ನು ತಳ್ಳಿದರೂ, ಹೇಗೆ ಪ್ರಾರಂಭಿಸಬೇಕು ಮತ್ತು ಹೇಗೆ ಮಾತನಾಡಬೇಕು ಎಂದು ತಡಕಾಡುವ ಸಮಯದೊಳಗೆ ಅವರು ಇಳಿಯುವ ಸ್ಥಳ ಬಂದುಬಿಡುತ್ತದೆ. ಅವರು ಇಳಿದು ಹೋಗಿಬಿಡುತ್ತಾರೆ. ನಾವು ಅವಕಾಶವನ್ನು ಕಳೆದುಕೊಳ್ಳುತ್ತಲೇ ಇದ್ದೇವೆ. ಸ್ವಲ್ಪ ಯೋಚಿಸಿ. ಎಷ್ಟು ಜನರಿಗೆ ಇಂತಹ ಪ್ರಯಾಣಗಳಲ್ಲಿ ಸುವಾರ್ತೆ ಸಾರಿದ್ದೇವೆ? ಪ್ರಯಾಣ ಮಾಡುವಾಗ ಮೊಬೈಲ್ ಫೋನ್, ಇನ್ನೂ ಎಷ್ಟೋ ವ್ಯರ್ಥವಾದವುಗಳನ್ನು ಒಯ್ಯುತ್ತೇವೆ. ಇನ್ನು ಮುಂದೆ ಸುವಾರ್ತೆ ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಒಯ್ಯಲು ನಿರ್ಧರಿಸೋಣ! ಪ್ರಯಾಣದಲ್ಲಿ ನಮ್ಮ ಸುತ್ತ ಮುತ್ತಲಿನ ಜನರನ್ನು ನೋಡಿ ನಂಬಿಕೆ ಹುಟ್ಟಿಸುವ ನಾಲ್ಕು ವಾಕ್ಯಗಳನ್ನು ಹೇಳೋಣ. ನಾವು ಇದನ್ನು ಮಾಡುವಾಗ, ನಮ್ಮ ಪ್ರಯಾಣವು ನಮಗೆ ಮತ್ತು ಇತರರಿಗೆ ಪ್ರಯೋಜನಕಾರಿಯಾಗಿರುತ್ತದೆ. 

- Bro. ಶಂಕರ್ ರಾಜ್ 

 

ಪ್ರಾರ್ಥನಾ ಅಂಶ: 

ಇನಿಯವಳೆ ಎಂಬ ಮಹಿಳೆಯರಿಗಾಗಿ ಪ್ರಸಾರವಾಗುತ್ತಿರುವ ಟಿವಿ ಕಾರ್ಯಕ್ರಮ ಅನೇಕ ಮಹಿಳೆಯರ ಆಧ್ಯಾತ್ಮಿಕ ಜೀವನವನ್ನು ತಟ್ಟಿ ಎಬ್ಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel