By Village Missionary Movement
Friday, 15-Nov-2024ಧೈನಂದಿನ ಧ್ಯಾನ(Kannada) – 15.11.2024 (Gospel Special)
ಯೇಸುವಿಗಾಗಿ ಸತ್ತ ಗೋಧಿಕಾಳು
"ಆತನು (ಯೇಸು) ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ" - ಮಾರ್ಕ 16:15
ಯೇಸುಕ್ರಿಸ್ತನು ಪುನರುತ್ಥಾನವಾದ ನಂತರ ತನ್ನ ಶಿಷ್ಯರಿಗೆ ಕೊಟ್ಟ ಆಜ್ಞೆಯ ಪ್ರಕಾರ ಆತನ ಶಿಷ್ಯರು ಯೇಸುವನ್ನು ಕುರಿತು, ಮಾನಸಾಂತರದ ಕುರಿತು ಮತ್ತು ದೇವರ ರಾಜ್ಯದ ಕುರಿತು ಬೋಧಿಸಲು ಪ್ರಾರಂಭಿಸಿದರು. ಈ ಕಾರಣದಿಂದಾಗಿ ಅನೇಕರು ರಕ್ಷಿಸಲ್ಪಟ್ಟರು, ಅವರಲ್ಲಿ ಅನೇಕರು ಸಂಕಟ, ಸೆರೆಮನೆ ಮತ್ತು ಮರಣವನ್ನು ಸ್ವಇಚ್ಛೆಯಿಂದ ಸ್ವೀಕರಿಸಿದರು. ಪೇತ್ರ, ಸ್ತೆಫನು, ತೋಮಾ, ಪೌಲನು, ಹೀಗೆ ಪಟ್ಟಿ ಮುಂದುವರಿಯುತ್ತದೆ. ಇನ್ನೂ ಅನೇಕರು ಭಾರತಕ್ಕೆ, ತಮಿಳುನಾಡಿಗೆ ಬಂದು ಯೇಸುವಿನ ಕುರಿತು ಬೋಧಿಸಿದರು. ಇವರು ಹೀಗೆ ಬರದೇ ಇದ್ದಿದ್ದರೆ ನಮಗೆ ರಕ್ಷಣೆಯೇ ಅಸಾಧ್ಯವಾಗುತ್ತಿತ್ತು.
ಇಂಗ್ಲೆಂಡಿನ ಉದಾತ್ತ ಕುಟುಂಬದಲ್ಲಿ ಕ್ರಿ.ಶ 1815 ರಲ್ಲಿ ಜನಿಸಿದ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಉನ್ನತ ವಿದ್ಯಾರ್ಥಿಯಾಗಿ ಪದವಿ ಪಡೆದರು ಮತ್ತು 26 ನೇ ವಯಸ್ಸಿನಲ್ಲಿ ಸಹಾಯಕ ಬಿಷಪ್ ಆದರು. ಶಬ್ಧ ಮತ್ತು ಬೆಳಕಿನಿಂದ ಸಿಡಿಯುವ ಪಟಾಕಿಗಳು ಉತ್ಪತ್ತಿಯಾಗುವ ಶಿವಕಾಶಿಯಲ್ಲಿ ಕ್ರಿಸ್ತನ ಸುವಾರ್ತೆಯ ಬೆಳಕನ್ನು ಪರಿಚಯಿಸಿದವರು ಇವರೇ. ಸಿ.ಎಂ.ಎಸ್.ದಕ್ಷಿಣ ಭಾರತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಕುಮರಿ ಜಿಲ್ಲೆಯಲ್ಲಿ ಕಂಡ ಒಂದು ದೃಶ್ಯ ಅವರನ್ನು ಒಮ್ಮೆ ಕಂಗಾಲಾಗಿಸಿತ್ತು. ಉಳುಮೆ ಮಾಡುವ ಗದ್ದೆಯ ಒಂದು ಬದಿಯಲ್ಲಿ ಎತ್ತು ಮತ್ತು ಇನ್ನೊಂದು ಕಡೆ ಕೆಳವರ್ಗದ ಮಹಿಳೆಯನ್ನು ಕಟ್ಟಿರುವುದನ್ನು ಕಂಡು, ಅವಳನ್ನು ಹಸುವಾಗಿ ಮತ್ತು ಗುಲಾಮಳಾಗಿ ನಡೆಸಿಕೊಳ್ಳುತ್ತಿರುವುದನ್ನು ಕಂಡು ಗುಲಾಮಗಿರಿಯ ವಿರುದ್ಧ ಮೊದಲು ಧ್ವನಿ ಎತ್ತಿದರು. ತುಳಿತಕ್ಕೊಳಗಾದ ಜನರ ಮೇಲೆ ಅಪಾರ ಪ್ರೀತಿಯೊಂದಿಗೆ ಕ್ರಿಸ್ತನ ಪ್ರೀತಿಯನ್ನು ಹಂಚಿಕೊಳ್ಳಲು ಅವರು ತನ್ನನ್ನು ಅರ್ಪಿಸಿಕೊಂಡರು. ಅವರು ಒಂದು ಗ್ರಾಮಕ್ಕೆ ಭೇಟಿ ನೀಡಿದಾಗ ಬಾಯಾರಿಕೆಯಿಂದಾಗಿ ಅಲ್ಲಿನ ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಅಲ್ಲಿನವರು ಅನುಮತಿಸಲಿಲ್ಲ. ಕ್ರೈಸ್ತರಿಗೆ ಬಾವಿ ನೀರು ಕೊಡುವುದಿಲ್ಲ, ಆದ್ದರಿಂದಾಗಿ ಒಬ್ಬ ಚಿಕ್ಕ ಹುಡುಗ ಅವರಿಗೆ ಕುಡಿಯಲು ಸ್ವಲ್ಪ ಮೇಕೆ ಹಾಲನ್ನು ಕೊಟ್ಟು ಅವರ ಬಾಯಾರಿಕೆಯನ್ನು ನೀಗಿಸಿದನು. ತನ್ನ ಹುದ್ದೆಯನ್ನು ತ್ಯಜಿಸಿ, ಜನರೊಂದಿಗೆ ಜನರಂತೆ ಬದುಕಲು ನಿರ್ಧರಿಸಿದರು. ಅವರು ಹಳ್ಳಿಯಿಂದ ಹಳ್ಳಿಗೆ ಹೋಗಿ ಸುವಾರ್ತೆಯನ್ನು ಸಾರಿದರು. ಉದಾತ್ತ ಕುಟುಂಬದಲ್ಲಿ ಜನಿಸಿದ ಅವರು, ಒಂದು ದಿನ, ತಮ್ಮ ಟೋಪಿಯಲ್ಲಿ, ಒಂದು ಮಹಿಳೆ ಕೊಡುತ್ತಿದ್ದ ಗಂಜಿಯನ್ನು ತೆಗೆದುಕೊಂಡು ಕುಡಿದು ನೆಲದ ಮಟ್ಟಕ್ಕೆ ತನ್ನನ್ನು ತಗ್ಗಿಸಿಕೊಂಡರು. ಅವರು ಶ್ರೀವಿಲ್ಲಿಪುತ್ತೂರ್, ರಾಜಪಾಳ್ಯಂ, ವಿರುಧುನಗರ್, ಎಂಚಾರ್, ಏಳು ಸಾವಿರ ಫಾರ್ಮ್‌ಗಳಲ್ಲಿ 25 ಸಭೆಗಳನ್ನು ರಚಿಸಿದರು. ಬಹಳ ಕಡಿಮೆ ವಯಸ್ಸಿನಲ್ಲೇ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕ್ರಿ.ಶ.1858ರ ಅಕ್ಟೋಬರ್ 22ರಂದು ತಮ್ಮ 43ನೇ ವಯಸ್ಸಿನಲ್ಲಿ ದೇವರ ರಾಜ್ಯವನ್ನು ಪ್ರವೇಶಿಸಿದರು. ಉದಾತ್ತ ಸಮಾಧಿಯಲ್ಲಿ ಸಮಾಧಿ ಮಾಡಲ್ಪಡಬೇಕಾದ ಅವರನ್ನು ಒಂದು ಹುಣಸೆ ಮರದ ಕೆಳಗೆ ಸಮಾಧಿ ಮಾಡಲಾಯಿತು.
ಇಂತಹ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸಲು ಅವರಂತಹವರೇ ಇಂದು ಸುವಾರ್ತೆ ಸಾರಲು ಬೇಕಾಗಿದ್ದಾರೆ. ಯೇಸುವಿನಂತೆ ಪ್ರೀತಿ, ಸಹಾನುಭೂತಿ ಮತ್ತು ತಾಳ್ಮೆಯುಳ್ಳ ರಾಕ್‌ಲ್ಯಾಂಡ್ ಅಯ್ಯನವರಂತೆ ಸುವಾರ್ತೆ ಸಾರಲು ನಮ್ಮನ್ನು ಸಹ ಆಹ್ವಾನಿಸಲಾಗುತ್ತಿದೆ. ಹಸ್ತಪ್ರತಿಗಳ ಮೂಲಕ, ಗ್ರಾಮ ಸೇವೆಗಳ ಮೂಲಕವೂ ಇನ್ನೂ ಸುವಾರ್ತೆ ತಲುಪದ ಗ್ರಾಮಗಳು, ಜನರ ಬಳಿ ರಕ್ಷಕನಾದ ಯೇಸುವನ್ನು, ಅವರು ನೀಡುವ ಪಾಪಕ್ಷಮಾಪಣೆಯನ್ನು ಹೇಳಲು ನಮ್ಮನ್ನು ನಾವು ಪೂರ್ಣ ಹೃದಯದಿಂದ ಸಮರ್ಪಿಸಿಕೊಳ್ಳೋಣವಾ? ಆಮೆನ್.
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
ಎಲ್ಲಾ ತಾಲೂಕುಗಳಲ್ಲಿ ಸರಪಳಿ ಪ್ರಾರ್ಥನೆ ಆರಂಭಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482