Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.11.2024 (Gospel Special)
Share:

By Village Missionary Movement

Thursday, 14-Nov-2024

ಧೈನಂದಿನ ಧ್ಯಾನ(Kannada) – 14.11.2024 (Gospel Special)

 

ಮಕ್ಕಳ ದಿನಾಚರಣೆಯ ತೀರ್ಮಾನ 

 

"…ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ;…" - ಮಾರ್ಕ 10:14

  

ಇಂದು Children's day. ಕುಟುಂಬದಲ್ಲಿ ಚಿಕ್ಕ ಮಕ್ಕಳು ಬಹಳ ಮುಖ್ಯ. ಏಕೆಂದರೆ ಅವರು ದೇವರಿಂದ ಬಂದ ಸ್ವಾಸ್ಥ್ಯ. ಗರ್ಭಫಲವು ಯೆಹೋವನ ಬಹುಮಾನ. ದೇವರು ಕೊಡುವ ಈ ಪ್ರಯೋಜನವು ಬಹಳ ವಿಶೇಷವಾದದ್ದು ಮತ್ತು ತಲೆಮಾರಿಗೆ ಸೇರಿದ್ದು. ಒಮ್ಮೆ ಪೋಷಕರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ತರಲು ಬಯಸಿದ್ದರು. ಶಿಷ್ಯರು ಅವರನ್ನು ಗದರಿಸಿದಾಗ, ಅದನ್ನು ಕಂಡ ಯೇಸು ಕ್ರಿಸ್ತನು ತನ್ನ ಪವಿತ್ರ ತೋಳುಗಳಿಂದ ಅವರನ್ನು ಅಪ್ಪಿಕೊಂಡು ತನ್ನ ಕೈಗಳನ್ನು ಅವರ ಮೇಲೆ ಇಟ್ಟು ಅವರನ್ನು ಆಶೀರ್ವದಿಸಿದರು. ಅವರಲ್ಲಿ ಒಂದು ಚಿಕ್ಕ ಮಗುವನ್ನು ಎತ್ತಿಕೊಂಡು ನೀವು ಈ ಮಗುವಿನಂತೆ ಆಗದಿದ್ದರೆ, ಪರಲೋಕ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಂದರವಾಗಿ ವಿವರಿಸಿದರು. ಮಕ್ಕಳ ಸ್ವಭಾವ ವಿಶೇಷವಾದದ್ದು. ಸ್ವಲ್ಪ ಹೊತ್ತು ಜಗಳವಾಡುತ್ತಾರೆ, ಕೂಡಲೇ ಮರೆತು ಒಟ್ಟಿಗೆ ಆಟವಾಡುತ್ತಾರೆ.

  

ನಮ್ಮ ದಿವಂಗತ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದರು. ಅವರ ಮೇಲೆ ಎಷ್ಟು ಪ್ರೀತಿ ನೋಡುದ್ರಾ? ಸಮಾರಂಭಗಳಲ್ಲಿ ತನಗೆ ಹಾಕಿದ ಹೂವಿನ ಹಾರವನ್ನು ಕಳಚಿ ಮಕ್ಕಳಿಗೆ ಹಾಕಿ ರಂಜಿಸುತ್ತಿದ್ದರು. ಹೌದು, ಚಿಕ್ಕ ಮಕ್ಕಳ ಪ್ರೀತಿಗೆ ಹಂಬಲಿಸುತ್ತಿದ್ದರು. ಪ್ರೀತಿಯಿಂದ ಸಲಹೆಯನ್ನೋ ಅಥವಾ ಆಲೋಚನೆಯನ್ನೋ ಹೇಳುವಾಗ ಅದನ್ನು ಅಂಗೀಕರಿಸಿ ವಿಧೇಯರಾಗುವ ಸ್ವಭಾವವುಳ್ಳವರು. ಅವರನ್ನು ಪ್ರೋತ್ಸಾಹಿಸಿ ಸರಿಯಾಗಿ ಬೆಳೆಸಿದರೆ ಉತ್ತಮ ಪೀಳಿಗೆಯನ್ನು ಹುಟ್ಟು ಹಾಕಬಹುದು. ದೇಶದ ಮಕ್ಕಳೇ ಭವಿಷ್ಯದ ನಾಯಕರು. ಸಭೆಯಲ್ಲಿರುವ ಇಂದಿನ ಮಕ್ಕಳೇ ಬರುವ ದಿನಗಳಲ್ಲಿ ಸಭೆಯ ಆಧಾರಸ್ತಂಭಗಳು. ಆದ್ದರಿಂದ ಅವರನ್ನು ಅಲ್ಪವಾಗಿ ನೆನೆಸದೆ ಎಚ್ಚರವಹಿಸಬೇಕು. ಹಾಗೆ ಮಾಡಿದರೆ, ದೇವದೂತರು ಸರ್ವಶಕ್ತನಿಗೆ ಆ ವರದಿಯನ್ನು ತೆಗೆದುಕೊಂಡು ಹೋಗುತ್ತಾರೆ.

  

ಮಕ್ಕಳ ಪಾಲನೆಯಲ್ಲಿ ಪಾಲಕರು ಬಹಳ ಜಾಗರೂಕರಾಗಿರಬೇಕು. ನಮ್ಮ ಜೀವನ ಮತ್ತು ನಮ್ಮ ಮಾತುಗಳು ಅವರನ್ನು ಉತ್ತಮಗೊಳಿಸುತ್ತವೆ. ಅವರಿಗಾಗಿ ಕಣ್ಣೀರಿನಿಂದ ಪ್ರಾರ್ಥಿಸುವ ಆಧ್ಯಾತ್ಮಿಕ ತಾಯಿ-ತಂದೆ ಬೇಕು. ಸತ್ಯವೇದದಲ್ಲಿ ಒಬ್ಬ ಹುಡುಗಿಯ ತಾಯಿಯು ಶಿಷ್ಯನ ತಲೆಯನ್ನು ಕೇಳು ಎಂಬ ಸಲಹೆಯನ್ನು ಕೊಟ್ಟು ರಾಜನ ಬಳಿಗೆ ಕಳುಹಿಸಿದಳು. ಅದರಲ್ಲಿ ಅವಳು ಯಶಸ್ವಿಯಾದಳು. ಎಂತಹ ಶೋಚನೀಯ! ಆದರೆ ಹನ್ನಳೆಂಬ ತಾಯಿಯು ತನ್ನ ಮೊದಲ ಮಗುವನ್ನು ದೇವರಿಗೆ ಸಮರ್ಪಿಸಿ, ಆಧ್ಯಾತ್ಮಿಕ ವಿಷಯಗಳನ್ನು ಕಲಿಸಿ ಆಲಯದೊಳಗೆ ಕರೆದುಕೊಂಡು ಹೋಗಿ ಬಿಟ್ಟಳು. ನಾವು ನಮ್ಮ ಮಕ್ಕಳನ್ನು ಹೇಗೆ ಬೆಳೆಸಲಿದ್ದೇವೆ? ಇಂದೇ ನಿರ್ಧರಿಸೋಣ!

- Mrs. ದೆಬೋರಾಳ್ 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವಂತಹ ಸ್ವಸ್ಥತಾ ಕೂಟಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel