Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.11.2024 (Gospel Special)
Share:

By Village Missionary Movement

Wednesday, 13-Nov-2024

ಧೈನಂದಿನ ಧ್ಯಾನ(Kannada) – 13.11.2024 (Gospel Special)

 

ಆತ್ಮಭಾರವು ಬೇಕು 

 

"...ಯಾವನನ್ನು ಕಳುಹಿಸಲಿ,... ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು ಅಂದೆನು" - ಯೆಶಾಯ 6:8

 

ಒಬ್ಬ ತಾಯಿ ತನ್ನ ಹಿರಿಯ ಮಗನನ್ನು ಮಿಷನರಿ ಸೇವೆಗೆ ಕಳುಹಿಸಿಕೊಟ್ಟಳು. ತನ್ನ ಮಗ ನಾಶವಾಗುತ್ತಿರುವ ಆತ್ಮಗಳನ್ನು ಕಾಪಾಡುತ್ತಾನೆ ಎಂದು ನಂಬಿ ಪ್ರಾರ್ಥಿಸುತ್ತಿದ್ದಳು. ಒಂದು ಸುದ್ದಿ ಬಂತು ನಿನ್ನ ಮಗನನ್ನು ಅವನು ಸೇವೆ ಮಾಡುತ್ತಿದ್ದ ಸ್ಥಳದ ಜನರು ಹೊಡೆದು, ಸಜೀವವಾಗಿ ತಿಂದುಬಿಟ್ಟರು ಎಂದು. ತಬ್ಬಿಬ್ಬಾದ ತಾಯಿ ಕಿರಿಯ ಮಗನನ್ನು ಕರೆದು, “ಮಗನೇ, ನಿನ್ನ ಸಹೋದರ ಸೇವೆ ಮಾಡಿದ ಪ್ರದೇಶಕ್ಕೆ ಹೋಗಿ ಸೇವೆಯನ್ನು ಮುಂದುವರಿಸು” ಎಂದು ಹೇಳಿದರು. ಅವನು ತನ್ನ ತಾಯಿಯ ಕೋರಿಕೆಗೆ ವಿಧೇಯನಾಗಿ ಸೇವೆಗಾಗಿ ಆ ಪ್ರದೇಶಕ್ಕೆ ಹೋದನು. ಕೆಲವು ತಿಂಗಳ ನಂತರ ನಿನ್ನ ಎರಡನೇ ಮಗನನ್ನೂ ಕೊಂದುಬಿಟ್ಟರು ಎಂಬ ಸುದ್ದಿ ಬಂತು. ಈ ಸುದ್ದಿ ತಿಳಿದ ತಾಯಿಯು ತನ್ನ ಕೊನೆಯ ಮಗನನ್ನು ಕರೆದು, ನಿನ್ನ ಸಹೋದರರು ಸೇವೆ ಸಲ್ಲಿಸಿದ ಪ್ರದೇಶಕ್ಕೆ ಹೋಗಿ ಸೇವೆ ಮಾಡಬೇಕು ಎಂದು ಕಳುಹಿಸಿದರು. ಕೆಲವು ತಿಂಗಳ ನಂತರ ನಿನ್ನ ಮೂರನೇ ಮಗನನ್ನೂ ಕೊಂದುಹಾಕಿಬಿಟ್ಟರು ಎಂಬ ಸುದ್ದಿ ಬಂತು. ಇದನ್ನು ಕೇಳಿದ ತಾಯಿ ಗೋಳಾಡಿ ಅತ್ತಳು. ಎಲ್ಲರೂ ಬೇರೆ ಗಂಡುಮಕ್ಕಳ ಸಾವಿನ ಸುದ್ದಿ ಕೇಳಿದಾಗ ನೀನು ಹೀಗೆ ಅಳಲಿಲ್ಲವಲ್ಲಾ, ಈಗ ಏನಾಯ್ತು? ಎಂದು ಕೇಳಿದಾಗ, ಆ ತಾಯಿ ಹೇಳಿದಳು, "ಆ ಪ್ರದೇಶದಲ್ಲಿ ಸೇವೆ ಮಾಡಲು ಇನ್ನೂ ಗಂಡುಮಕ್ಕಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು , ಈಗ ಅಲ್ಲಿ ಸೇವೆ ಮಾಡಲು ಅಲ್ಲಿಗೆ ಕಳುಹಿಸಲು ನನಗೆ ಮಗನಿಲ್ಲವಲ್ಲಾ ಎಂದು ಅಳುತ್ತಿದ್ದೇನೆ" ಎಂದು ತಾಯಿ ಹೇಳಿದರು.

      

ಪ್ರೀತಿಯ ದೇವರ ಮಕ್ಕಳೇ! ನಮಗೆ ಆತ್ಮಭಾರ ಎಷ್ಟರಮಟ್ಟಿಗಿದೆ? ತನ್ನ ಮಕ್ಕಳು ಒಬ್ಬೊಬ್ಬರಾಗಿ ಸತ್ತರೂ ಸೇವೆ ನಿಲ್ಲದಿರಲಿ ಎಂದು ಮಕ್ಕಳನ್ನು ಸೇವೆಗೆ ಕಳುಹಿಸಿದ ಆ ತಾಯಿಯ ಆತ್ಮಭಾರವನ್ನು ನೋಡಿ.

 

ಆದರೆ ಇಂದಿನ ಕಾಲಘಟ್ಟದಲ್ಲಿ ಈ ಆತ್ಮಭಾರವು ಇಲ್ಲ. ಅಷ್ಟೇಕೆ ಸಭೆಯ ಬೋಧಕರು, ಮತ್ತು ಸೇವಕರು ಸಹ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಡಾಕ್ಟರ್ ಮತ್ತು ಇಂಜಿನಿಯರ್ ಮಾಡಿ ವಿದೇಶಕ್ಕೆ ಕಳುಹಿಸಬೇಕು ಎಂದು ಯೋಚಿಸುತ್ತಾರೆ? ನಿಮ್ಮ ನಂತರ ಸಭೆಯ ಸೇವೆಯನ್ನು ಯಾರು ನೋಡಿಕೊಳ್ಳುತ್ತಾರೆ ಎಂದರೆ, ಬೇರೆಯವರನ್ನು ನೇಮಿಸಿ ನೋಡಬೇಕು ಅಷ್ಟೇ ಎಂದು ಹೇಳುತ್ತಾರೆ. ಈ ರೀತಿಯ ಆತ್ಮಭಾರವಿಲ್ಲದ ಸೇವಕರು ಇರುವಾಗ ವಿಶ್ವಾಸಿಗಳಿಂದ ನಾವು ಹೇಗೆ ನಿರೀಕ್ಷಿಸಬಹುದು? ಅಂತಹ ಆತ್ಮಭಾರದೊಂದಿಗೆ ಅನೇಕ ಮಿಷನರಿಗಳು ಇಲ್ಲಿಗೆ ಬಂದದ್ದರಿಂದಲೇ ನಾವು ಯೇಸುವನ್ನು ಕಂಡುಕೊಂಡಿದ್ದೇವೆ. ಅದೇ ಆತ್ಮಭಾರದೊಂದಿಗೆ ನಾವು ಸಹ ಕಾರ್ಯ ನಿರ್ವಹಿಸಿದರೆ ಮಾತ್ರವೇ ಸುವಾರ್ತೆಯ ದೀಪವು ಆರಿಹೋಗುವುದಿಲ್ಲ.

               

ಇದನ್ನು ಓದುತ್ತಿರುವ ವಿಶ್ವಾಸಿ ಮಕ್ಕಳೇ! ನಮ್ಮೊಳಗೆ ಆತ್ಮಭಾರವಿದ್ದರೆ ಮಾತ್ರವೇ ಅದು ನಮ್ಮ ಮಕ್ಕಳೊಳಗೂ ಬರುತ್ತದೆ. ಆತ್ಮಭಾರವಿಲ್ಲದೆ, ನಾವು ಸೇವೆ ಮಾಡಿದರೆ ಅದು ನಿಷ್ಪ್ರಯೋಜಕವಾಗಿದೆ. ನಾವು ಆತ್ಮಭಾರವನ್ನು ಕುರಿತು ನಮ್ಮ ಮಕ್ಕಳಿಗೆ ಉಣಿಸಿ ಸೇವೆಗೆ ಕಳುಹಿಸೋಣ. ನಮ್ಮ ಮಕ್ಕಳು ಸಹ ಪರಲೋಕದ ಪ್ರತಿಫಲವನ್ನು ಪಡೆಯಲಿ. ಕರ್ತನು ನಿಮ್ಮನ್ನು ಆಶೀರ್ವದಿಸಲಿ!      

- Mrs. ಹೆಪ್ಸಿಬಾ ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಸ್ಯಾಟಲೈಟ್ ಚಾನೆಲ್ ಆಗಿ ಬದಲಾಗುವಂತೆ, ಮತ್ತು ಕಿಡ್ಸ್ ಟಿವಿ ಪ್ರಾರಂಭಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel