Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.11.2024 (Gospel Special)
Share:

By Village Missionary Movement

Tuesday, 12-Nov-2024

ಧೈನಂದಿನ ಧ್ಯಾನ(Kannada) – 12.11.2024 (Gospel Special)

 

ಆತ್ಮ ಆದಾಯ 

 

"…ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" - ಮಾರ್ಕ 16:15

  

ರಕ್ಷಣೆ ಹೊಂದಿ, ಯೇಸುಕ್ರಿಸ್ತನ ಮಕ್ಕಳಾಗಿ ಜೀವಿಸುವ ಪ್ರತಿಯೊಬ್ಬರೂ ಇತರರಿಗೆ ಸುವಾರ್ತೆ ಸಾರಲು ಬಾಧ್ಯತೆ ಹೊಂದಿದ್ದೇವೆ. ನಾನು ಮದುವೆಯಾದ ಹೊಸದರಲ್ಲಿ, ಉಸಿಲಂಪಟ್ಟಿ ಬಳಿಯ ಗ್ರಾಮಸಭೆಯಲ್ಲಿ ಮಿಷನರಿಗಳಾಗಿ ಕೆಲಸ ಮಾಡುತ್ತಿದ್ದೆವು. ಒಂದು ಭಾನುವಾರದಂದು ಆರಾಧನೆ ಮತ್ತು ಸಬ್ಬತ್ ದಿನದ ಪಾಠಶಾಲೆಯ ತರಗತಿ ಮುಗಿಸಿ ಮಧ್ಯಾಹ್ನ ಮನೆಗೆ ಬಂದೆವು. ಮನೆಯ ಬಾಗಿಲಲ್ಲಿ 10 ವರ್ಷದ ಬಾಲಕಿಯೊಬ್ಬಳು ದುಃಖದ ನಗುವಿನೊಂದಿಗೆ ಬಾಗಿಲಲ್ಲಿ ನಿಂತಿದ್ದಳು. ನಾನು ಅವಳನ್ನು ಒಳಗೆ ಕರೆದು ಸ್ವಲ್ಪ ತಿಂಡಿ ತಿಂದು ಮನೆಗೆ ಹೋಗುವಂತೆ ಹೇಳಿದೆ. ಆದರೆ ಅವಳು ಹೋಗಲು ನಿರಾಕರಿಸಿ, ಅಕ್ಕ ನೀವು ಮತ್ತು ಅಣ್ಣ ಬೋಧಿಸುವ ಯೇಸು ಕ್ರಿಸ್ತನು ನನಗೆ ಬೇಕು ಎಂದು ಹೇಳಿದಳು.

           

ಹೆಣ್ಣು ಶಿಶುಹತ್ಯೆ ವ್ಯಾಪಕವಾಗಿರುವ ಉಸಿಲಂಪಟ್ಟಿ ಪ್ರದೇಶದಲ್ಲಿ, ಎಳೆಯ ಪ್ರಾಯದಲ್ಲೇ ಅಂತಹ ಘೋರ ಚಿತ್ರಹಿಂಸೆಯಿಂದ ಆಶ್ಚರ್ಯವಾಗಿ ಬದುಕುಳಿದವಳು. ಆದರೆ ಎಲ್ಲರಿಂದಲೂ ದ್ವೇಷಿಸಲ್ಪಟ್ಟ, ಬಹಿಷ್ಕಾರಕ್ಕೊಳಗಾದ ಮತ್ತು ನಿರ್ಲಕ್ಷಿಸಲ್ಪಟ್ಟ ಅವಳು ಬದುಕುಳಿದ ಕಾರಣ ಅವಳನ್ನು ಪಿಚೈಯಮ್ಮಾಳ್ ಎಂದು ಹೆಸರಿಸಲಾಯಿತು. ಯಾವುದೇ ಕಾಳಜಿ, ಪ್ರೀತಿ ಇಲ್ಲದೆ ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಳು. ಯೇಸುಕ್ರಿಸ್ತನ ಪ್ರೀತಿಯೊಂದಿಗೆ, ನಮ್ಮ ಪ್ರೀತಿ ಅವಳನ್ನು ಕ್ರಿಸ್ತನ ಕಡೆಗೆ ಸೆಳೆಯಿತು. ಅವಳು ಸತತವಾಗಿ ಚರ್ಚ್‌ಗೆ ಬಂದು ನನ್ನೊಂದಿಗೆ ಸೇರಿ, ಪ್ರಾರ್ಥಿಸಲು ಕಲಿತುಕೊಂಡಳು. ನನ್ನ ಕೈಲಾದಷ್ಟು ಅವಳನ್ನು ಪರಾಂಬರಿಸಿ ವಿದ್ಯೆಯನ್ನು ಕಲಿಸಿಕೊಟ್ಟೆ. 

 

ಯೇಸುಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದಳು, ಪಿಚೈಯಮ್ಮಾಳ್ ದೀಕ್ಷಾಸ್ನಾನ ಪಡೆದು ಗ್ರೇಸ್ ಆದರು. ಮನೆಯವರು ನೋಡಿದ ಹುಡುಗನನ್ನು ಮದುವೆಯಾಗುವಂತೆ ಒತ್ತಾಯಿಸಿದರು. ಆದರೆ ನಂಬಿಕೆಯುಳ್ಳ ನಾನು ನಂಬಿಕೆಯಿಲ್ಲದವರೊಂದಿಗೆ ಹೇಗೆ ಬೆರೆಯಲು ಸಾಧ್ಯ? ಎಂದು ನಿರಾಕರಿಸಿಬಿಟ್ಟಳು. ನೀನು ನನಗೆ ಕ್ರೈಸ್ತ ವರನನ್ನು ಕೊಡಬಲ್ಲೆ ಎಂದು ನಂಬಿಕೆಯಿಂದ ಪ್ರಾರ್ಥಿಸುತ್ತಿದ್ದಳು. ದೇವರು ತನ್ನ ಅನಾದಿ ತೀರ್ಮಾನದ ಪ್ರಕಾರ, ಹಿಂದೂ ಕುಟುಂಬದಿಂದ ರಕ್ಷಿಸಲ್ಪಟ್ಟು ಸೇವೆ ಮಾಡುತ್ತಿದ್ದ ಎಲೀಯ ಪಾಂಡಿ ಎಂಬ ವರನನ್ನು ನಮಗೆ ತೋರಿಸಿದರು. ದೇವರು ಮೂರು ಮಕ್ಕಳನ್ನೂ ಕೊಟ್ಟು ದಿಂಡಿಗಲ್ ಪ್ರದೇಶದ ಗ್ರಾಮದಲ್ಲಿ ಚರ್ಚ್ ಸೇವೆ ಮತ್ತು ಸುವಾರ್ತಾಬೋಧನೆಯಲ್ಲಿ ಉಪಯೋಗಿಸುತ್ತಿದ್ದಾರೆ.

 

ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ! (1 ಕೊರಿಂಥ 9 : 16.) ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ. (ಜ್ಞಾನೋಕ್ತಿ 11:30). ನನಗೆ ಪ್ರಿಯವಾದವರೇ! ಎಲ್ಲರಿಗೂ ಸುವಾರ್ತೆ ಸಾರಲು ನಾವು ಋಣಿಯಾಗಿದ್ದೇವೆ. (ರೋಮಾ 1 : 14 - 15) ಇಂತಹ ಅನೇಕ ಸಾಕ್ಷಿಗಳು ಎದ್ದೇಳಲು ದೇವರು ನಮ್ಮನ್ನು ಉಪಯೋಗಿಸಲಿ! ಆಮೆನ್.

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಸ್ಯಾಟಲೈಟ್ ಟಿವಿಯಾಗಿ ಬದಲಾಗಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al