Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.11.2024 (Gospel Special)
Share:

By Village Missionary Movement

Monday, 11-Nov-2024

ಧೈನಂದಿನ ಧ್ಯಾನ(Kannada) – 11.11.2024 (Gospel Special)

 

ಯಾರನ್ನು ಕಳುಹಿಸಲಿ?

 

"…ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು ಅಂದೆನು" - ಯೆಶಾಯ 6:8

  

ಹದಿನೇಳರ ಹರೆಯದ ಹುಡುಗ ಕ್ಷಯರೋಗದಿಂದ ಬಳಲುತ್ತಿದ್ದನು ಮತ್ತು ವೈದ್ಯರು ಕೈಬಿಡಲ್ಪಟ್ಟ ಪರಿಸ್ಥಿತಿಯಲ್ಲಿದ್ದರು. ಬದುಕಲು ದಾರಿಯೇ ಇಲ್ಲ, ಎಂಬ ಹಂತಕ್ಕೆ ಬಂದರು. ಈ ಯುವಕನನ್ನು ನೋಡಲು ನೆರೆಹೊರೆಯವರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಜನರು ಬಂದರು. ಬದುಕಬೇಕಾದ ವಯಸ್ಸಿನಲ್ಲಿ ದಿನವೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನಲ್ಲಾ ಎಂದು ಇವರೆಲ್ಲ ಅಳಲು ತೋಡಿಕೊಂಡರು. ಈ ಪರಿಸ್ಥಿತಿಯಲ್ಲಿ ಚಿಕ್ಕ ಹುಡುಗಿಯೊಬ್ಬಳು ತನ್ನ ಕೈಯಲ್ಲಿ ಹೊಸ ಒಡಂಬಡಿಕೆಯೊಂದಿಗೆ ಹುಡುಗನನ್ನು ಭೇಟಿಯಾಗಲು ಹೋದಳು. ವೈದ್ಯರು ಕೈಬಿಡಲ್ಪಟ್ಟ ಎಂತಹಾ ರೋಗವನ್ನಾದರೂ ಯೇಸು ಗುಣಪಡಿಸಬಲ್ಲನು ಎಂದು ಹೇಳಿ ಯುವಕನಿಗೆ ಹೊಸ ಒಡಂಬಡಿಕೆಯನ್ನು ನೀಡಲು ಪ್ರಯತ್ನಿಸಿದಳು. ಆದರೆ ಅವನು ಅದನ್ನು ತೆಗೆದುಕೊಳ್ಳಲೇ ಇಲ್ಲ. ಹೀಗೆ ನಾಲ್ಕು ದಿನಗಳು ಕಳೆದು, ಐದನೇ ದಿನ ಆ ಹುಡುಗಿ ಹೊಸ ಒಡಂಬಡಿಕೆಯನ್ನು ಕೊಟ್ಟುಬಿಟ್ಟಳು. ಹುಡುಗ ಹೊಸ ಒಡಂಬಡಿಕೆಯನ್ನು ತೆಗೆದುಕೊಂಡ ತಕ್ಷಣವೇ ಅದನ್ನು ಎತ್ತಿಬಿಸಾಡಿದನು. ದಿನಗಳು ಕಳೆದವು. ಮನೆಯ ಮೂಲೆಯಲ್ಲಿ ಬಿದ್ದಿದ್ದ ಹೊಸ ಒಡಂಬಡಿಕೆಯನ್ನು ಎತ್ತಿಕೊಂಡು ಓದಿದನು. ಅದರಲ್ಲಿ ಯೇಸುವಿನ ಅದ್ಭುತ ಮತ್ತು ಪ್ರೀತಿಯ ಬೋಧನೆ ಇತ್ತು. ಅದನ್ನು ಓದುತ್ತಾ ಓದುತ್ತಾ ಆದರಣೆಯೂ, ನೆಮ್ಮದಿಯೂ ದೊರೆಯಿತು. ತಕ್ಷಣವೇ ಅವನು ಮೊಣಕಾಲೂರಿ, ತನ್ನನ್ನು ಗುಣಪಡಿಸುವಂತೆ ಪ್ರಾರ್ಥಿಸಿ ಅದ್ಭುತವನ್ನು ಪಡೆದುಕೊಂಡನು. ಆ ಯುವಕನೇ ದಕ್ಷಿಣ ಕೊರಿಯಾದ ಉಜ್ಜೀವನಕ್ಕೆ ಬೀಜ ಬಿತ್ತಿದ, ಪಾಲ್ ಯಾಂಗಿಚ್ಚೋ. ಅವರು ಈಗ ಇಲ್ಲ. ಅವರು ಕೆಲವು ವರ್ಷಗಳ ಹಿಂದೆ ನಿಧನರಾದರು. ಅವರ ಮರಣದ ಸಮಯದಲ್ಲಿ ಅವರ ಸಭೆಯಲ್ಲಿ ವಿಶ್ವಾಸಿಗಳ ಸಂಖ್ಯೆ 8,30,000 ಆಗಿತ್ತು. 

 

ಇಸ್ರಾಯೇಲ್ ಜನರನ್ನು ಮುನ್ನಡೆಸಲು ಮೋಶೆಯನ್ನು ದೇವರು ಆರಿಸಿಕೊಂಡರು. ಆದರೆ ದೇವರು ಇವರನ್ನು ಕರೆದಾಗ, ಕರ್ತನೇ, ನೀನು ಯಾರನ್ನು ಕಳುಹಿಸಲು ಬಯಸುತ್ತೀಯೋ ಅವರನ್ನೇ ಕಳುಹಿಸು ಎಂದು ಹೇಳಿದರು. ಆದರೆ ಯೆಹೋವನು ಮೋಶೆಯನ್ನು ಬಿಡಲೇ ಇಲ್ಲ. ಕರ್ತನು ಮೋಶೆಯ ಮೂಲಕ ಇಸ್ರಾಯೇಲ್ ಜನರನ್ನು ಮುನ್ನಡೆಸಿದರು.

       

ದೇವರು ಒಂದು ಚಿಕ್ಕ ಹುಡುಗಿಯ ಮೂಲಕ ಇಂತಹ ದೊಡ್ಡ ರಕ್ಷಣೆಯನ್ನು ಆಜ್ಞಾಪಿಸಿದರು. ಮಂದನಾಲಿಗೆ ಮತ್ತು ವಾಕ್ಚಾತುರ್ಯವಿಲ್ಲದವನನ್ನೇ ಕರ್ತನು ಆರಿಸಿಕೊಂಡರು. ಕರ್ತನು ತನ್ನ ಸುವಾರ್ತೆಯನ್ನು ಸಾರುವ ಕೆಲಸಕ್ಕೆ ಯಾರ ಮೂಲಕವಾದರೂ ಕ್ರಿಯೆ ಮಾಡುತ್ತಾರೆ. ಆದರೆ ನಾವು ಅವರ ಬಳಿ ನೆಪಗಳನ್ನು ಹೇಳಬಾರದು. ಯಾರಿಗೆ ಹೋಗಿ ಆತನ ಪ್ರೀತಿಯನ್ನು ಹೇಳಲು ನಾವು ಪ್ರೇರೇಪಿಸಲ್ಪಡುತ್ತೇವೋ ಅವರೆಲ್ಲರಿಗೂ ಸುವಾರ್ತೆಯನ್ನು ಸಾರೋಣ. ಯಾರನ್ನಾದರೂ ಕಳುಹಿಸಿ ನಿಮ್ಮ ಕೆಲಸವನ್ನು ಮಾಡಿರಿ ಎಂದು ಹೇಳಬಾರದು. ನಿಮಗೆ ಚಿತ್ತವಾದ ಜನರ ಬಳಿಗೆ ನನ್ನನ್ನು ಕರೆದುಕೊಂಡು ಹೋಗಿ ಎಂದು ನಾವು ಆತನಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವಾಗ ನಮ್ಮ ಮೂಲಕ ಅವರು ಕಾರ್ಯ ನಿರ್ವಹಿಸಲು ಸಿದ್ಧವಾಗಿದ್ದಾರೆ! ಯಾರಿಗೆ ಗೊತ್ತು, ನೀವು ಸುವಾರ್ತೆ ಸಾರುವ ವ್ಯಕ್ತಿ ಭಾರತ ದೇಶದ ಉಜ್ಜೀವನಕ್ಕೆ ಬಿತ್ತುವವರಾಗಿಯೂ ಸಹ ಇರಬಹುದೇ!

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿರುವ ಟ್ಯೂಷನ್ ಸೆಂಟರ್‌ಗೆ ಬರುವ ಶಿಕ್ಷಕರ ಕುಟುಂಬಗಳ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ.‌

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel