Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.11.2024 (Kids Special)
Share:

By Village Missionary Movement

Sunday, 10-Nov-2024

ಧೈನಂದಿನ ಧ್ಯಾನ(Kannada) – 10.11.2024 (Kids Special)

 

ಬಾಳೆ ಮರವಾ? ತೆಂಗಿನ ಮರವಾ?

 

"ಮುಖಸ್ತುತಿಯ ಎಲ್ಲಾ ತುಟಿಗಳನ್ನೂ ಗರ್ವದಿಂದ ಮಾತನಾಡುವ ನಾಲಿಗೆಯನ್ನೂ ಕರ್ತನು ಕಡಿದು ಬಿಡುವನು" - ಕೀರ್ತನೆ 12:3

 

ಜಾನ್ ಅಂಕಲ್ ಮನೆಯ ಹತ್ತಿರ ಅವರ ಸ್ವಂತವಾದ ಒಂದು ಸುಂದರವಾದ ತೋಟವಿತ್ತು. ಅದರಲ್ಲಿ ಮಾವಿನ ಮರ, ತೆಂಗಿನ ಮರ, ಚೇಪೆಕಾಯಿ ಮರ ಮತ್ತು ಹಲಸಿನ ಮರಗಳಂತಹ ಅನೇಕ ಮರಗಳು ಇದ್ದವು. ಜಾನ್ ಅಂಕಲ್ ನ ಮಕ್ಕಳಾದ ಡಾಫ್ನಿ ಮತ್ತು ಡಾರ್ವಿನ್ ಅದಕ್ಕೆ ಪ್ರತಿನಿತ್ಯ ನೀರುಣಿಸಿ ಪೋಷಿಸುತ್ತಿದ್ದರು. ಮರ-ಗಿಡಗಳನ್ನು ಬೆಳೆಸುವುದು ಎಂದರೆ ಅವರಿಗೆ ತುಂಬಾ ಇಷ್ಟ. 

 

ಒಂದು ದಿನ ಒಬ್ಬ ವ್ಯಾಪಾರಿ ಸಸಿಗಳನ್ನು ಮಾರಲು ಅವರ ಹಳ್ಳಿಗೆ ಬಂದನು. ಕೂಡಲೇ ಡಾಫ್ನಿ ಮತ್ತು ಡಾರ್ವಿನ್ ತಮ್ಮ ತಂದೆಯನ್ನು ಕರೆದುಕೊಂಡು ಹೋಗಿ ವ್ಯಾಪಾರಿಯ ಬಳಿ ಒಂದು ಬಾಳೆ ಸಸಿಯನ್ನು ಖರೀದಿಸಿ ತೋಟದಲ್ಲಿದ್ದ ತೆಂಗಿನ ಸಸಿಯ ಬಳಿ ನೆಟ್ಟರು. ದಿನಗಳು ಕಳೆದವು. ಬಾಳೆ ಸಸಿ ತೆಂಗಿನ ಸಸಿ ಗಾತ್ರಕ್ಕೆ ಬೆಳೆಯಿತು. ಬೆಳೆದ ಬಾಳೆ ಸಸಿಗೆ ಗರ್ವ ತಾಳಲಾಗಲಿಲ್ಲ. ಅದರ ಪಕ್ಕದಲ್ಲಿರುವ ತೆಂಗಿನ ಮರವನ್ನು ನೋಡಿ ಹೇ ತೆಂಗಿನ ಮರವೇ! ನೀನು ಈ ತೋಟದಲ್ಲಿ ಎಷ್ಟು ದಿನಗಳಿಂದ ಇದ್ದೀಯ ಎಂದು ಕೇಳಿದಾಗ ತೆಂಗಿನ ಮರ ವಿನಮ್ರವಾಗಿ, ನಾನು ಒಂದು ವರ್ಷದಿಂದ ಇದ್ದೇನೆ ಎಂದಿತು. ತಕ್ಷಣ ಬಾಳೆಗಿಡ ಒಂದು ವರ್ಷದಿಂದ ಇದ್ದೀಯ ಆದರೆ ಇಷ್ಟೇ ಉದ್ದ ಬೆಳೆದಿದ್ದೀಯಾ, ನಿನಗೆ ಏನಾದರೂ ಕಾಯಿಲೆ ಇದೆಯಾ ಎಂದು ಗೇಲಿ ಮಾಡಿತು. ಬಾಳೆ ಮರ ಇನ್ನೂ ಬೆಳೆಯಿತು. ಅದರಿಂದ ಇನ್ನೊಂದು ಸಸಿ ಹುಟ್ಟಿಕೊಂಡಿತು. ಮತ್ತು ಉದ್ದವಾದ ಎಲೆಗಳು, ಹೂವು ಮತ್ತು ಹಣ್ಣುಗಳು ಮರವನ್ನು ಅಲಂಕರಿಸಿದವು. ಡಾಫ್ನಿ ಮತ್ತು ಡಾರ್ವಿನ್ ಇಬ್ಬರೂ ಬಾಳೆಯ ಮರದಲ್ಲಿನ ಇನ್ನೊಂದು ಸಸಿಯನ್ನು ನೋಡಿ ಸಂತೋಷಪಟ್ಟರು. ನಂತರ ತಂದೆಯನ್ನು ಕರೆತಂದು ಬಾಳೆ ಸಸಿಯನ್ನು ತೋರಿಸಿದರು. ಅವರು ಬಾಳೆಗಿಡವನ್ನು ಹಿಡಿದುಕೊಂಡು ಇದು ಸರಿಯಾದ ಋತು ಎಂದರು. ತೆಂಗಿನ ಮರವನ್ನು ಮುಟ್ಟಿ ಸಹ ನೋಡಲಿಲ್ಲ. ಈಗ ಬಾಳೆಗಿಡದ ಹೆಮ್ಮೆ ಗಗನಕ್ಕೇರಿತು. ತೆಂಗಿನ ಮರವನ್ನು ನೋಡಿ ಹೀನವಾಗಿ ನಕ್ಕಿತು. ತೆಂಗಿನ ಮರ ಮೌನವಾಗಿತ್ತು. ಮರುದಿನ ಬೆಳಿಗ್ಗೆ ಆ ಮನೆಯ ಕೆಲಸಗಾರರು ಬಂದರು. ಬಾಳೆಗೊನೆಯನ್ನು ಹಿಡಿದು ಕಡಿದು ಎತ್ತಿದರು. ಈಗ ಬಾಳೆಮರ ಗೋಳಾಡಿತು. ನಂತರ ಮಚ್ಚು ತೆಗೆದುಕೊಂಡು ಬಾಳೆಗಿಡವನ್ನು ಕಡಿದು ಹಾಕಿದರು. ಅಷ್ಟೇ ಬಾಳೆಗಿಡದ ಹೆಮ್ಮೆ ಹೊರಟುಹೋಯಿತು. ತೆಂಗಿನ ಮರವೋ ನಿಧಾನವಾಗಿ ಬೆಳೆದು ಅದನ್ನು ನೆಟ್ಟವರಿಗೆ ಎಳನೀರು ಮತ್ತು ತೆಂಗಿನಕಾಯಿಯನ್ನು ನೀಡುತ್ತಲೇ ಇತ್ತು.

       

ಪ್ರೀತಿಯ ಸಹೋದರ ಮತ್ತು ಸಹೋದರಿಯೇ! ನೀನು ಸಹ ನಿನಗಿರುವ ಸೌಂದರ್ಯ, ಜ್ಞಾನ, ಕೌಶಲ್ಯ ಮತ್ತು ಪ್ರತಿಭೆಯಿಂದ ಇತರರನ್ನು ಕಡಿಮೆ ಅಂದಾಜು ಮಾಡಬೇಡ. ತಾಳ್ಮೆಯಿಂದ ಇದ್ದು ಯೇಸಪ್ಪನಿಗೂ ಮತ್ತು ಇತರರಿಗೂ ಉಪಯುಕ್ತವಾದ ಮಗುವಾಗಿ ಜೀವಿಸಿ ತೋರಿಸು. O.k

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş