Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.11.2024 (Kids Special)
Share:

By Village Missionary Movement

Sunday, 03-Nov-2024

ಧೈನಂದಿನ ಧ್ಯಾನ(Kannada) – 03.11.2024 (Kids Special)

 

ಯಾವುದು ಮುಖ್ಯ

 

"…ನಿಮ್ಮ ಗೋಸ್ಕರ ಪರಲೋಕದಲ್ಲಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ;…" - ಮತ್ತಾಯ 6:20

 

Hello ಮುದ್ದು ಪುಟಾಣಿಗಳೇ! ದಿನಗಳು ಎಷ್ಟು ವೇಗವಾಗಿ ಓಡುತ್ತಿವೆ ನೋಡುದ್ರಾ? ತ್ರೈಮಾಸಿಕ ಪರೀಕ್ಷೆ ಮುಗಿದಂತೆ ತೋರುತ್ತಿದೆ, ಶೀಘ್ರದಲ್ಲೇ ಮಧ್ಯಾವಧಿ ಪರೀಕ್ಷೆ ಬರಲಿದೆ ಅಲ್ವಾ ಪುಟಾಣಿಗಳೇ, ಚೆನ್ನಾಗಿ ಓದಿ ಮಕ್ಕಳೇ ಟೈಂ ಅನ್ನು ವೇಸ್ಟ್ ಮಾಡಬೇಡಿ. ಯಾಕೆ ಗೊತ್ತಾ? ಸಮಯ ಬಂಗಾರವಿದ್ದಂತೆ. ಚಿನ್ನ ಎಂದರೆ ಎಲ್ಲರಿಗೂ ಇಷ್ಟ. ಒಂದು ಓಲೆ ತೆಗೆದುಕೊಳ್ಳಬೇಕಾದರೆ ಎಷ್ಟೊಂದು ಹಣ ಕೊಡಬೇಕಾಗಿದೆ? ಚಿನ್ನ ಬಹಳ ಮುಖ್ಯ ಎಂದು ಭಾವಿಸುತ್ತೇವೆ. ಆದರೆ ಯಾವುದು ಮುಖ್ಯ ಎಂದು ನಿಮಗೆ ಗೊತ್ತಾ? ಆ ಕುರಿತಾದ ಒಂದು ಕಥೆಯನ್ನು ನಾವು ಇಂದು ಕೇಳಲಿದ್ದೇವೆ. ವೃದ್ಧರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಸೈಕಲ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚೈನ್ ಕಿತ್ತುಕೊಂಡು ಓಡಿಹೋದ. ಆ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಳು. ಬಂಗಾರದ ಸರಕ್ಕಿಂತ ಜೀವವೇ ಮುಖ್ಯ ಎಂದುಕೊಂಡು ಕೆಳಗೆ ಬಿದ್ದ ಮಹಿಳೆಗೆ ಸಹಾಯ ಮಾಡಿಬಿಟ್ಟು, ನಡೆದುಕೊಂಡು ಹೋಗುವಾಗ ತನ್ನ ಬಾಲ್ಯದಲ್ಲಿ ನಡೆದ ಘಟನೆಗಳನ್ನು ಯೋಚಿಸುತ್ತಲೇ ಇದ್ದರು.  

 

ಅವರು ತನ್ನ ಸ್ನೇಹಿತನೊಂದಿಗೆ ಭಾನುವಾರದ ತರಗತಿಗೆ ಹೋಗುವುದು ಅಭ್ಯಾಸ. ಅಲ್ಲಿ ಪರಲೋಕ ಮತ್ತು ನರಕದ ಬಗ್ಗೆ ತನಗೆ ಕಲಿಸಿದ್ದನ್ನು ಅವರು ನೆನಪಿಸಿಕೊಂಡರು. ಯೇಸುವಿನ ಬಗ್ಗೆ ತಿಳಿದುಕೊಂಡರೂ ಅಂಗೀಕರಿಸಲಿಲ್ಲ. ಈಗ ಅವರು ಶ್ರೀಮಂತರಾಗಿ ಕೋಟಿಗಟ್ಟಲೆ ಆಸ್ತಿಗೆ ಒಡೆಯನಾಗಿ ಮುದುಕನಾಗಿದ್ದಾರೆ. ಒಂದು ದಿನ ಮುದುಕ ತನ್ನ ಎಲ್ಲಾ ಆಸ್ತಿಯನ್ನು ಮಾರಿ ಬಹಳಷ್ಟು ಚಿನ್ನದ ನಾಣ್ಯಗಳನ್ನು ಖರೀದಿಸಿ ಅದನ್ನು ಒಂದು ಸೂಟ್ಕೇಸ್ನಲ್ಲಿ ಇಟ್ಟು ನಾನು ಸತ್ತು ಪರಲೋಕಕ್ಕೆ ಹೋಗುವಾಗ ಸುಮ್ಮನೆ ಹೋಗಬಾರದು ಈ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಿದರು. ಅದರಂತೆಯೇ ಪರಲೋಕಕ್ಕೆ ಹೋದರು. ದೇವದೂತನು ಅವರನ್ನು ನೋಡಿ ಸೂಟ್ಕೇಸ್ನಲ್ಲಿ ಏನಿದೆ ಎಂದು ಕೇಳಿದರು. ಅದರಲ್ಲಿ ಬಹಳ ಬೆಲೆಬಾಳುವ ಚಿನ್ನದ ನಾಣ್ಯವಿದೆ ಎಂದು ಖುಷಿಯಿಂದ ಹೇಳಿದರು. ಅಯ್ಯೋ, ಇದನ್ನೆಲ್ಲಾ ಇಲ್ಲಿ ರಸ್ತೆ ನಿರ್ಮಿಸಲು ಉಪಯೋಗಿಸುತ್ತೇವೆ. ನೀನು ಇತರರಿಗೆ ಮಾಡಿದ ಒಳ್ಳೆಯ ಕಾರ್ಯಗಳು, ಕಣ್ಣೀರಿನಿಂದ ಪ್ರಾರ್ಥಿಸಿದ ಪ್ರಾರ್ಥನೆಗಳು, ಸುವಾರ್ತೆಯ ಮೂಲಕ ಸಂಪಾದಿಸಿದ ಆತ್ಮಗಳ ಲೆಕ್ಕವನ್ನು ಮಾತ್ರ ಪರಲೋಕದಲ್ಲಿ ಸ್ವೀಕರಿಸಲಾಗುವುದು ಎಂದು ಅವರು ಹೇಳಿದ ಕೂಡಲೇ ಅವರು ತಮ್ಮ ಕಣ್ಣುಗಳನ್ನು ತೆರೆದು ನೋಡಿದರು. ಆದರೆ ಅದೊಂದು ಕನಸು.

 

ಅದೃಷ್ಟವಶಾತ್, ಈಗಲಾದರೂ ಪರಲೋಕ ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಂಡ್ವಲ್ಲಾ! ಎಂದು ತನಗಿರುವುದನ್ನೆಲ್ಲಾ ಮಾರಿ ಇತರರಿಗೆ ಸಹಾಯ ಮಾಡಿದರು. ತನ್ನ ಸುತ್ತಲಿರುವವರಿಗೆ ಯೇಸುವಿನ ಬಗ್ಗೆ ಮತ್ತು ಪರಲೋಕದ ಬಗ್ಗೆ ಹೇಳಲು ಪ್ರಾರಂಭಿಸಿದರು. ಪ್ರೀತಿಯ ತಮ್ಮ, ತಂಗಿ ಆ ವಯಸ್ಸಾದ ತಾತನ ಮೂಲಕ ಪರಲೋಕವು ಎಷ್ಟು ಮುಖ್ಯ ಮತ್ತು ಅಲ್ಲಿಗೆ ಹೋಗಲು ನಾನು ಏನು ಮಾಡಬೇಕು ಎಂದು ತಿಳಿದುಕೊಂಡೋ ಅಲ್ವಾ? ನೀವು ಯೇಸುವಿಗಾಗಿ ಏನು ಮಾಡಲಿದ್ದೀರಿ? ಏನನ್ನಾದರೂ ಮಾಡಿ ಪರಲೋಕದಲ್ಲಿ ಸಂಪತ್ತನ್ನು ಸೇರಿಸಿಡಿರಿ. ಅಲ್ಲಿ ಸುರಕ್ಷಿತವಾಗಿರುತ್ತದೆ O.k. ಅಲ್ವಾ!   

- Mrs. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel