Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.10.2024
Share:

By Village Missionary Movement

Thursday, 31-Oct-2024

ಧೈನಂದಿನ ಧ್ಯಾನ(Kannada) – 31.10.2024

 

ಏನನ್ನು ನೋಡುತ್ತಾ ಪ್ರಯಾಣಿಸುತ್ತಿದ್ದೀಯ?

 

"…ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ" - ಇಬ್ರಿಯ 12:1

  

ಆ ಇಬ್ಬರು ಯೌವನಸ್ಥರ ಜೀವನ ಬಾಲ್ಯದಲ್ಲಿ ತುಂಬಾ ಮಧುರವಾಗಿತ್ತು. ಯೌವ್ವನ ಪ್ರಾಯಕ್ಕೆ ಬಂದಾಗ ಅವರಲ್ಲಿ ಶೂನ್ಯತೆ ನೆಲೆಸಿತು. ಹದಿಹರೆಯದ ಶೂನ್ಯತೆಯನ್ನು ಕಂಡು, ಏಕಾಂತವನ್ನು ಪ್ರೀತಿಸಿ ಆತ್ಮಹತ್ಯೆಗೆ ಮುಂದಾದಾಗ ಅವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಅವಕಾಶವನ್ನು ನೀಡಲಾಯಿತು. ಅದೇನೆಂದರೆ ಅದುವೇ ಶುಭ ಸಂದೇಶ, ಅಂದರೆ, "ಯೇಸು ನಿನ್ನನ್ನು ಪ್ರೀತಿಸುತ್ತಾರೆ" ಎಂದು ಅವರಿಗೆ ಹೇಳಲಾಯಿತು. ಅವರು ಆತ್ಮಹತ್ಯೆಯ ಪ್ರಯತ್ನವನ್ನು ಬಿಟ್ಟು ಯೇಸುವಿನ ಕಡೆಗೆ ನೋಡಿದರು ಮತ್ತು ಸರಿಯಾದ ಮಾರ್ಗದಲ್ಲಿ ನಡೆದರು. ಆದರೆ ಒಬ್ಬ ಯುವಕ ಮಾತ್ರ ಮತ್ತೆ ಮತ್ತೆ ಲೌಕಿಕ ಸುಖಕ್ಕೆ ತನ್ನನ್ನು ಮಾರಿಕೊಂಡ. ಅವನು ತುಂಬಾ ಕೆಟ್ಟದಾಗಿ ಬದುಕಿದ. ಇಬ್ಬರಿಗೂ ಒಂದೇ ಒಂದು ಅವಕಾಶ ನೀಡಲಾಗಿತ್ತು. ಆದರೆ ಒಬ್ಬ ಯುವಕ ತನ್ನ ಕಡೆಗೆ ನೋಡುತ್ತಿದ್ದ ಯೇಸುವಿನಿಂದ ದೂರ ಸರಿದು ಭ್ರಷ್ಟ ಜೀವನಕ್ಕೆ ಪ್ರವೇಶಿಸಿದನು.

  

ಸತ್ಯವೇದದಲ್ಲಿ ಒಬ್ಬ ತಂದೆಗೆ ಇಬ್ಬರು ಗಂಡು ಮಕ್ಕಳಿದ್ದರು, ಹಿರಿಯ ಮತ್ತು ಕಿರಿಯ. ಕಿರಿಯನು ತನ್ನ ಸ್ನೇಹಿತರೊಡನೆ ತನ್ನ ತಂದೆಯ ಆಸ್ತಿಯನ್ನೆಲ್ಲಾ ತೆಗೆದುಕೊಂಡು ದೂರದ ದೇಶಕ್ಕೆ ಹೋಗಿ ಅವನ ಆಸ್ತಿಯನ್ನೆಲ್ಲಾ ನಾಶಪಡಿಸಿ ಅತ್ಯಂತ ದುಷ್ಟ ಜೀವನವನ್ನು ನಡೆಸಿದನು. ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾರೂ ಅವನಿಗೆ ಕೊಡಲಿಲ್ಲ. ಅವನಿಗೆ ಬುದ್ದಿ ಬಂದಾಗ ಕಿರಿಯ ಮಗನು ತಂದೆಯನ್ನು ನೋಡಿ, ತಾನು ಮಾಡಿದ ಎಲ್ಲಾ ಪಾಪಗಳನ್ನು, ಅರಿಕೆ ಮಾಡಿದ್ದು ಮಾತ್ರವಲ್ಲದೆ ಇನ್ನೆಂದಿಗೂ ನಾನು ನಿನ್ನ ಮಗನೆಂದು ಕರೆಯಲ್ಪಡುವದಕ್ಕೆ ಯೋಗ್ಯನಲ್ಲ ಎಂದು ಹೇಳಿದನು. ತಂದೆಯೋ ತನ್ನ ಕಡೆಗೆ ಬಂದ ಮಗನನ್ನು ಸ್ವೀಕರಿಸಿದರು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ! ಪ್ರೌಢಾವಸ್ಥೆಯು ಪ್ರತಿಯೊಬ್ಬ ಮನುಷ್ಯನಿಗೆ ದೇವರು ನೀಡಿದ ಅದ್ಭುತ ಕೊಡುಗೆಯಾಗಿದೆ. ಜೀವನವು ಒಂದು ಉದ್ಯಾನವಾಗಿದೆ. ಆ ಉದ್ಯಾನಕ್ಕೆ ಪರಿಮಳವನ್ನು ನೀಡಲು, ಯೇಸು ನಮ್ಮ ಹೃದಯದಲ್ಲಿ ಬರಬೇಕು. ನಾವು ಯಾವ ಪಾಪ ಮಾಡಿದ್ದರೂ, ಇದನ್ನು ಓದುತ್ತಿರುವ ಈ ಸಮಯದಲ್ಲಿಯೂ ಕೂಡ, ಆತನನ್ನು ನೋಡಿ ಪ್ರಕಾಶವನ್ನು ಹೊಂದೋಣ. ಆತನೇ ನಮ್ಮ ಜೀವನವನ್ನು ಪ್ರಕಾಶಿಸುವಂತೆ ಮಾಡುವವರು. "ಕಂಡದ್ದೇ ದೃಶ್ಯ - ಕೊಂಡದ್ದೇ ಕೊಳ" ಎಂದು ಬದುಕಿ ಬಿಡದೇ ಕೊಡಲ್ಪಟ್ಟ ಸಮಯದಲ್ಲಿ ಆತನ ಕಡೆಗೆ ನೋಡುತ್ತಾ, ನಮ್ಮ ಓಟವನ್ನು ವಿಜಯಶಾಲಿಯಾಗಿ ಓಡಿ ಮುಗಿಸೋಣ.

- Sis. J.P.. ಹೆಪ್ಸಿಬಾ

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಮಾಸಪತ್ರಿಕೆಯನ್ನು ಓದುವ ಜನರು ದೇವರನ್ನು ತಿಳಿಯುವ ಜ್ಞಾನದಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş