Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.10.2024
Share:

By Village Missionary Movement

Wednesday, 30-Oct-2024

ಧೈನಂದಿನ ಧ್ಯಾನ(Kannada) – 30.10.2024

 

ನಾಯಿಯ ಗುಣ

 

"ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿಕೊಳ್ಳುವ ಹಾಗೆ ಮೂಢನು ತಾನು ಮಾಡಿದ ಮೂರ್ಖತನವನ್ನೇ ಪುನಃ ಮಾಡುವನು" - ಜ್ಞಾನೋಕ್ತಿ 26:11

  

ನಾಯಿ ಕೃತಜ್ಞತೆಯುಳ್ಳದ್ದು ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಪರಿಶುದ್ಧ ಗ್ರಂಥವು ನಮಗೆ ನಾಯಿಯಂತೆ ಸ್ವಭಾವದಲ್ಲಿ ಇರಬಾರದು ಎಂದು ಹೇಳುತ್ತದೆ. ಏಕೆಂದರೆ ನಾಯಿ ತಾನು ಕಕ್ಕಿದ್ದನ್ನೇ ತಿನ್ನುತ್ತದೆ. ಅದೇ ರೀತಿ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರಿಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿದೆ ಎಂದು 2 ಪೇತ್ರ 2:20 ರಲ್ಲಿ ಸತ್ಯವೇದವು ಹೇಳುತ್ತಿದೆ. 

  

ನನಗೆ ಒಬ್ಬ ಸಹೋದರ ಗೊತ್ತು. ಅವರು ಬಾಲ್ಯದಿಂದಲೂ ದೇವರನ್ನು ಅಧಿಕವಾಗಿ ಹುಡುಕಿದವರು. ಪ್ರಾರ್ಥನೆ, ವಾಕ್ಯ ಓದುವುದು, ಆಲಯಕ್ಕೆ ಹೋಗುವುದು ಹೀಗೆ ದೇವರನ್ನು ಸೇವಿಸುವ ಕಾರ್ಯಗಳನ್ನೆಲ್ಲಾ ಉತ್ಸಾಹದಿಂದ ಮಾಡಿದರು. ದೇವರು ಅವರಿಗೆ ಒಳ್ಳೆಯ ತಲಾಂತುಗಳನ್ನೂ ಕೊಟ್ಟಿದ್ದರು. ಆದರೆ ದಿನಗಳು ಕಳೆದಂತೆ ಅವರು ತನ್ನ ಸ್ನೇಹಿತರ ಜೊತೆಗೆ ಲೌಕಿಕ ಸುಖವನ್ನು ಅನುಭವಿಸಿದರು. ಪ್ರಾರ್ಥನೆ ಮತ್ತು ವಾಕ್ಯ ಓದುವಿಕೆ ಕಡಿಮೆಯಾಯಿತು. ಆಲಯಕ್ಕೆ ಹೋಗಲಿಲ್ಲ. ಪವಿತ್ರ ಜೀವನವು ಅಪವಿತ್ರವಾಯಿತು. ಮನಸ್ಸಿಗೆ ನೆಮ್ಮದಿ ಇಲ್ಲ. ದುಷ್ಟನಾಗಿ ಮಾರ್ಪಟ್ಟರು. ತನ್ನ ತಂದೆಯನ್ನು ತಲೆಗೆ ಹೊಡೆದದ್ದರಲ್ಲಿ ಅವರು ಸಾವನ್ನಪ್ಪಿದರು. ನಂತರ ಇವರೂ ಮನಸ್ಸಾಕ್ಷಿ ಚುಚ್ಚಲ್ಪಟ್ಟು ಮಾನಸಿಕ ಅಸ್ವಸ್ಥತೆಯಿಂದ ಸಾವನ್ನಪ್ಪಿದರು.

  

ಪರಿಶುದ್ಧ ಗ್ರಂಥದಲ್ಲಿ, ಯೇಸುಕ್ರಿಸ್ತನು ಇಸ್ಕರಿಯೋತ ಯೂದನನ್ನು ಹನ್ನೆರಡು ಶಿಷ್ಯರಲ್ಲಿ ಒಬ್ಬನನ್ನಾಗಿ ಮಾಡಿದರು. ಅವನ ಮೂಲಕ ಜನರ ಬಳಿ ದೆವ್ವಗಳನ್ನು ಓಡಿಸಿ, ರೋಗಗಳನ್ನು ಸಹ ಗುಣಪಡಿಸಿದರು. ಆದರೆ ಅವನೋ ಹಣದಾಸೆಗೆ ಸಿಕ್ಕಿಹಾಕಿಕೊಂಡು, ತನ್ನ ಜೀವನದಲ್ಲಿ ಅದ್ಭುತಗಳನ್ನು ಮಾಡಿದ ಆ ಯೇಸುವಿಗೆ ದ್ರೋಹ ಮಾಡಿ ಅವರನ್ನು ತೋರಿಸಿಕೊಟ್ಟನು. ಕೊನೆಗೆ ಅವನ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು ಅಂದರೆ ನೇಣುಬಿಗಿದುಕೊಂಡು ಸತ್ತನು.

 

ಇದನ್ನು ಓದುತ್ತಿರುವ ಪ್ರೀತಿಯ ದೇವ ಜನರೇ, ಯೇಸು ಕ್ರಿಸ್ತನು ಶಿಲುಬೆಯಲ್ಲಿ ಸುರಿಸಿದ ತನ್ನ ಅಮೂಲ್ಯ ರಕ್ತದಿಂದ ನಮ್ಮನ್ನು ಪ್ರಪಂಚದ ಕಲ್ಮಶಗಳಿಂದ ಮುಕ್ತಗೊಳಿಸಿ, ಕೃಪೆಯಿಂದ ರಕ್ಷಿಸಿದ್ದಾರೆ. ನಾವು ಕೃತಜ್ಞತೆಯುಳ್ಳ ಹೃದಯದೊಂದಿಗೆ ಆ ಕೃಪೆಯನ್ನು ಕಾಪಾಡಿಕೊಂಡು ನಡೆಯಬೇಕು. ಅದನ್ನು ಬಿಟ್ಟು ಇಸ್ಕರಿಯೋತ ಯೂದನಂತೆ ಲೌಕಿಕ ಆಸೆಗಳಿಗಾಗಿ ದೇವರನ್ನು ಬಿಟ್ಟು ಹಿಂಜಾರುವ ಹೃದಯ ನಮಗೆ ಬೇಡ. ನಾಯಿಯು ತಾನು ಕಕ್ಕಿದ್ದನ್ನು ತಿನ್ನಲು ಹಿಂತಿರುಗುವಂತೆ, ನಾವು ಸಹ "ಇದು ಅಶುದ್ಧ ದೇವರಿಗೆ ಇಷ್ಟವಿಲ್ಲದ್ದು" ಎಂದು ತಿಳಿದೂ, ಅದನ್ನೇ ಸತತವಾಗಿ ಮಾಡಿದರೆ ನಮ್ಮ ಸ್ಥಿತಿಯೂ ಸಹ ತುಂಬಾ ಶೋಚನೀಯವಾಗಿರುತ್ತದೆ. ಆದುದರಿಂದ ನನ್ನ ಪ್ರೀತಿಯ ದೇವರ ಜನರೇ, ನಾವು ಜಾಗರೂಕರಾಗಿರೋಣ.

- Bro. ಸಿಮಿಯೋನ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಪತ್ರಿಕೆ ಸೇವೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet