By Village Missionary Movement
Tuesday, 29-Oct-2024ಧೈನಂದಿನ ಧ್ಯಾನ(Kannada) – 29.10.2024
ಹೃದಯ ಪೂರ್ವಕವಾಗಿ
"ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು" - ಮತ್ತಾಯ 6:12
ಗೊಲ್ಗೊಥಾ ಬೆಟ್ಟದಲ್ಲಿ ತುಂಬಿದ್ದ ಜನಸಮೂಹ; ಅದರೊಂದಿಗೆ ರೋಮಾ ಸೈನಿಕರು, ಶಿಷ್ಯರು, ಯೆರೂಸಲೇಮ್ ಪಟ್ಟಣದವರು ಸೇರಿದಂತೆ ಎಲ್ಲರೂ ಒಂದು ಕ್ಷಣ ಗಾಬರಿಯಾಗಲು ಕಾರಣವೇನೆಂದರೆ, ಯೇಸುವನ್ನು ಶಿಲುಬೆಗೇರಿಸಿದಾಗ ಅವರು ಬಾಯಿ ತೆರೆದು ನುಡಿದ ಮೊದಲ ಮಾತು . ಅದು ಒಂದು ಪ್ರಾರ್ಥನೆಯಂತಿತ್ತು. "ತಂದೆಯೇ, ಅವರನ್ನು ಕ್ಷಮಿಸು; ಯಾಕಂದರೆ ತಾವು ಏನು ಮಾಡುತ್ತೇವೆಂದು ಅವರು ಅರಿಯರು ಅಂದನು".
ಈ ಸರ್ವೋಚ್ಚ ಕ್ಷಮೆಯನ್ನು ಅವರು ಯಾರಿಗೆ ಶಿಫಾರಸು ಮಾಡಿದರು? ರಾತ್ರಿಯಿಡೀ ಅವರನ್ನು ಚಾಟಿಯಿಂದ ಹೊಡೆದು, ಅವರ ಮುಖಕ್ಕೆ ಉಗುಳಿ, ಪರಿಹಾಸ್ಯ ಮಾಡಿ, ಮುಳ್ಳು ಕಿರೀಟವನ್ನು ಇಟ್ಟು, "ಅವನನ್ನು ಶಿಲುಬೆಗೇರಿಸಿ" ಎಂದು ಕೂಗುತ್ತಾ, ಕೊನೆಗೆ ಅವರ ಕೈ ಮತ್ತು ಕಾಲುಗಳಿಗೆ ಮೊಳೆಗಳನ್ನು ಹೊಡೆದು, ತನ್ನನ್ನು ಅಪಹಾಸ್ಯ ಮಾಡುತ್ತಿದ್ದವರೆಲ್ಲರನ್ನು ನೋಡಿಯೇ ತಂದೆಯ ಬಳಿ ಕ್ಷಮೆ ಯಾಚಿಸಿದರು. ಅವರು ಸತತವಾಗಿ ಹೇಳಿದ್ದೇನೆಂದರೆ, "ಅವರು ಏನು ಮಾಡುತ್ತಿದ್ದಾರೆಂದು ಅವರು ಅರಿಯರು" ಎಂದು. ಇದು ಅವರ ಮಹಿಮೆಯ ಕ್ಷಮೆ; ಅವರ ಶ್ರೇಷ್ಠತೆಯ ಅಭಿವ್ಯಕ್ತಿ; ಅವರು ತನ್ನ ಶಿಷ್ಯರಿಗೆ ಬೋಧಿಸಿದ ಹಾಗೆಯೇ (ಮತ್ತಾಯ 5:44) ಬದುಕಿದರು ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ಅವರು ಅವರನ್ನು ಹೃದಯಪೂರ್ವಕವಾಗಿ ಪ್ರೀತಿಸಿದ ಕಾರಣ ಕ್ಷಮೆಗಾಗಿ ಬೇಡಿಕೊಂಡರು. ಆ ಕ್ಷಣದಲ್ಲಿ ಅವರ ಮುಖದಲ್ಲಿ ಸಿಟ್ಟು, ಕಹಿ, ದ್ವೇಷ, ಸಿಡುಕು ಯಾವುದೂ ಕಾಣಿಸಲಿಲ್ಲ. ಅವರು ತನ್ನ ಶಿಷ್ಯರಿಗೆ ಹೇಗೆ ಪ್ರಾರ್ಥನೆ ಮಾಡಬೇಕೆಂದು ಕಲಿಸಿಕೊಟ್ಟಾಗಲೂ, "ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು" ಎಂದು ಹೇಳಿಕೊಡುವುದರ ಮೂಲಕ ನಾವು ಇತರರನ್ನು ಕ್ಷಮಿಸಿದರೆ ಮಾತ್ರವೇ ನಮ್ಮ ಪಾಪಗಳು ಕ್ಷಮಿಸಲ್ಪಡುತ್ತವೆ ಎಂಬ ಅಸ್ಥಿರ ನಿಯಮವನ್ನು ಸೇವೆಯ ದಿನಗಳಲ್ಲಿ ಕಲಿಸಿಕೊಟ್ಟರು.
ಪ್ರೀತಿಯ ಓದುಗರೇ! ಹೃದಯದ ಗಡಸುತನ ಮತ್ತು ಅಸೂಯೆ ಇತರರನ್ನು ಕ್ಷಮಿಸಲು ದೊಡ್ಡ ತಡೆಗೋಡೆಯನ್ನು ಸೃಷ್ಟಿಸುತ್ತದೆ. ಮಾನವನ ಮನಸ್ಸು ಬಾಯಿಂದ ಮಾತ್ರವೇ ಕ್ಷಮಿಸುತ್ತದೆ; ಹೃದಯದಲ್ಲಿ ದ್ವೇಷವನ್ನು ಇಟ್ಟುಕೊಂಡಿರುವಂಥದ್ದು. ಇದು ಕ್ಷಮಿಸುವುದಲ್ಲ. ಯೇಸು ನಮ್ಮ ಪಾಪಗಳನ್ನು ಮನಸಾರೆ ಕ್ಷಮಿಸುವುದು ಮಾತ್ರವಲ್ಲ; ಅವುಗಳನ್ನೆಲ್ಲಾ ತನ್ನ ಬೆನ್ನಿನ ಹಿಂದೆ ಹಾಕಿ ಬಿಡುತ್ತಾರೆ ಎಂಬುದನ್ನು (ಯೆಶಾಯ 38:17) ರ ಮೂಲಕ ತಿಳಿಯಬಹುದು. ಮನುಷ್ಯರಾದ ನಾವು ಹೆಸರಿಗೆ ಮಾತ್ರ ಕ್ಷಮಿಸಿ, ಯಾವಾಗಲೂ ಅದನ್ನು ನೆನಪಿನಲ್ಲೇ ಇಟ್ಟುಕೊಂಡು ಅವರನ್ನು ದೂಷಿಸುತ್ತಲೇ ಇರುವುದು ಕ್ಷಮೆಯಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ. ಹೃದಯಪೂರ್ವಕವಾಗಿ ಇತರರನ್ನು ಕ್ಷಮಿಸೋಣ. ನಲವತ್ತು ವರ್ಷದ ವ್ಯಕ್ತಿ ತನ್ನ ಯೌವನದಲ್ಲಿ ಒಂದು ಮಹಿಳೆಗೆ ಮಾಡಿದ ದ್ರೋಹವನ್ನು ನೆನಪಿಸಿಕೊಂಡು ಆರಾಧನೆಯ ನಂತರ ಬೋಧಕರ ಬಳಿ ಮನನೊಂದು ಕಣ್ಣೀರಿನಿಂದ, "ನನಗೆ ಕ್ಷಮಾಪಣೆ ಇದೆಯೇ?" ಎಂದರು. ಬೋಧಕರು ಹೇಳಿದರು. ಖಚಿತವಾಗಿ ಇದೆ. ಪ್ರೀತಿಯ ಯೇಸು "ಈಗಲೇ ನಿಮ್ಮ ಯೌವನದ ಪಾಪವನ್ನು ಕ್ಷಮಿಸಿ ನಿಮ್ಮ ಹೃದಯವನ್ನು ದೇವರ ಶಾಂತಿಯಿಂದ ತುಂಬುತ್ತಾರೆ" ಎಂದರು. ಪ್ರೀತಿಯ ಓದುಗರೇ! ನಮಗೆ ಅನ್ಯಾಯ ಮಾಡಿದವರನ್ನು ಒಂದು ನಿಮಿಷ ನೆನಪಿಸಿಕೊಂಡು "ತಂದೆಯೇ, ಇವರನ್ನು ಕ್ಷಮಿಸು" ಎಂದು ಪ್ರಾರ್ಥಿಸೋಣವೇ? ಪವಿತ್ರಾತ್ಮನು ತಾನೇ ನಿಮ್ಮೊಂದಿಗಿದ್ದು ನಮ್ಮ ಅಕ್ರಮವು, ಪಾಪವು ಕ್ಷಮಿಸಲ್ಪಡುವಂತೆ ನಮ್ಮೊಂದಿಗೆ ಸೇರಿ ಬೇಡಿಕೊಳ್ಳುವುದು ಖಚಿತ. ಇತರರು ತಪ್ಪುಗಳನ್ನು ಕ್ಷಮಿಸೋಣ! ನಮ್ಮ ತಪ್ಪುಗಳನ್ನು ಅವರು ಕ್ಷಮಿಸುತ್ತಾರೆ! ಆಮೆನ್!
- Mrs. ಎಮೀಮಾ ಸೌಂದರರಾಜನ್
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿವಿ ಮೂಲಕ ಭೇಟಿಯಾಗುವ ಜನರಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482