Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.10.2024 (Kids Special)
Share:

By Village Missionary Movement

Sunday, 27-Oct-2024

ಧೈನಂದಿನ ಧ್ಯಾನ(Kannada) – 27.10.2024 (Kids Special)

 

ವೈರಾಗ್ಯವುಳ್ಳ ವನಿತಾ 

 

"ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು" - ಕೀರ್ತನೆ 91:14

 

ಎತ್ತರದ ಪರ್ವತಗಳು, ಸುಂದರವಾದ ಹುಲ್ಲುಗಾವಲುಗಳು ಮತ್ತು ಕಣ್ಮನ ಸೆಳೆಯುವ ತೊರೆಗಳ ಆ ಹಳ್ಳಿಯಲ್ಲಿ ವನಿತಾ ಎಂಬ ಪುಟ್ಟ ಹುಡುಗಿ ವಾಸಿಸುತ್ತಿದ್ದಳು. ಅವಳಿಗೆ ಅಣ್ಣ, ಅಕ್ಕ ಎಲ್ಲರೂ ಇದ್ದಾರೆ. ವನಿತಾ ಮೂರು ವರ್ಷದ ಬಾಲಕಿಯಾಗಿದ್ದಾಗ, ಅವಳ ತಾಯಿ ತೀರಿಕೊಂಡರು. ಹಾಗಾಗಿ ಅವಳ ಅಪ್ಪ, ಅಣ್ಣ, ಅಕ್ಕ ಎಲ್ಲರೂ ಅವಳನ್ನು ತುಂಬಾ ಮುದ್ದಾಗಿ ಬೆಳೆಸಿದರು. ವನಿತಾ ಬೆಳೆದು ಸಂಡೇ ಸ್ಕೂಲ್ ಗೆ ಹೋಗಲು ಪ್ರಾರಂಭಿಸಿದಳು. ಅಲ್ಲಿ ಯೇಸುವಿನ ಪ್ರೀತಿಯಿಂದ ತುಂಬಲ್ಪಟ್ಟು ಇನ್ನೂ ಹೆಚ್ಚಿನ ಆಸೆಯಿಂದ ಯೇಸುವನ್ನು ಹುಡುಕಲು ಪ್ರಾರಂಭಿಸಿದಳು. ಊರಿನಲ್ಲೊಂದು ಆಲಯವಿದೆ. ಆ ಆಲಯದ ಗಂಟೆ ಬಾರಿಸುವುದಕ್ಕಿಂತ ಮೊದಲು, ಅವಳು ಎದ್ದು ಪ್ರಾರ್ಥಿಸಿಬಿಡಬೇಕೆಂಬ ವೈರಾಗ್ಯವು ಅವಳಿಗೆ ಉಂಟಾಯಿತು. ಅದರಂತೆಯೇ ಎದ್ದು ಪ್ರಾರ್ಥಿಸಿಬಿಡುತ್ತಿದ್ದಳು.   

 

ಚಿಕ್ಕವಯಸ್ಸಿನಲ್ಲೇ ಯೇಸುವನ್ನು ಕುತೂಹಲದಿಂದ ಹುಡುಕುತ್ತಿದ್ದ ಹುಡುಗಿಯಾಗಿದ್ದ ಕಾರಣ ಊರಿನ ಪ್ರತಿಯೊಬ್ಬರಿಗೂ ಅವಳೆಂದರೆ ತುಂಬಾ ಇಷ್ಟ. ವನಿತಾ 10ನೇ ತರಗತಿವರೆಗೆ ಓದಿದಳು. ನಂತರ ಶಿಕ್ಷಣವನ್ನು ಮುಂದುವರೆಸಲು ಮನೆಯಲ್ಲಿ ಸೌಕರ್ಯವಿಲ್ಲದ ಕಾರಣ ಅವಳ ತಂದೆ ಅವಳ ಓದನ್ನು ನಿಲ್ಲಿಸಿಬಿಟ್ಟರು. ಅವಳಿಗೆ ತುಂಬಾ ಕಷ್ಟವಾಗಿತ್ತು. ಆಕೆಯೊಂದಿಗೆ ಓದಿದ ಇತರೆ ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ ಎಂದು ಗೇಲಿ ಮಾಡಿದರು. ಇದರಿಂದ ಮನನೊಂದ ಅವಳು ಯೇಸುವನ್ನು ಇನ್ನೂ ಹೆಚ್ಚಾಗಿ ಹುಡುಕತೊಡಗಿದಳು. ಯೇಸಪ್ಪ ಅವಳ ಪ್ರಾರ್ಥನೆಯನ್ನು ಕೇಳಿದರು. ಅವಳ ಪ್ರಾರ್ಥನೆಯ ಕೆಲವೇ ದಿನಗಳಲ್ಲಿ ವಿದೇಶದಿಂದ ಒಂದು ಪತ್ರ ಬಂದಿತು. ಅದು ಯಾರೆಂದರೆ, ಅವಳ ತಂದೆಯ ಬಾಲ್ಯದ ಸ್ನೇಹಿತ. ವನಿತಾಳನ್ನು ನಾನು ಓದಿಸುತ್ತೇನೆ ಎಂದು, ವ್ಯಾಸಂಗಕ್ಕೆ ಬೇಕಾಗುವ ವೆಚ್ಚ ಹಾಗೂ ಖರ್ಚಿಗೆ ಬೇಕಾದ ಹಣವನ್ನು ಕಳುಹಿಸಿದರು. ವನಿತಾಳಿಗೆ ಒಂದೇ ಸಂತೋಷ. ಮತ್ತೊಂದೆಡೆ, ಭಯಂಕರವಾದ ಆಶ್ಚರ್ಯ ತಲೆ ಕಾಲು ಅರ್ಥವಾಗದೇ ಜಿಗಿದು ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು ಮತ್ತು ಯೇಸಪ್ಪಾಗೆ ತುಂಬಾ ಧನ್ಯವಾದ ಹೇಳಿದಳು. ಶಾಲೆಯಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ತನ್ನನ್ನು ಸಂಪೂರ್ಣವಾಗಿ ಸೇವೆಗೆ ಅರ್ಪಿಸಿಕೊಂಡಳು. ಅವಳು ಅನೇಕ ಹಳ್ಳಿಗಳಿಗೆ ಹೋಗಿ ಸುವಾರ್ತೆಯನ್ನು ಸಾರಿದಳು. ಅಷ್ಟೇ ಅಲ್ಲ ಉತ್ತರದ ರಾಜ್ಯಗಳಿಗೆ ಹೋಗಿ ಅಲ್ಲಿನ ಭಾಷೆ ಕಲಿತು ಯೇಸುವನ್ನು ಪ್ರಕಟಿಸಿದಳು. ಅವಳು ಬಾಲ್ಯದಲ್ಲಿ ಯೇಸುವಿನ ಮೇಲೆ ತೋರಿದ ಆಸೆ ಮತ್ತು ವೈರಾಗ್ಯವೇ ಅವಳನ್ನು ಸರಿಯಾದ ಸಮಯದಲ್ಲಿ ಊಹಿಸಲೂ ಸಾಧ್ಯವಾಗದ ಸ್ಥಳದಿಂದ ಅವಳಿಗೆ ಒಳ್ಳೆಯದನ್ನು ತಂದು ಉನ್ನತ ಸ್ಥಾನದಲ್ಲಿರಿಸಿತು.    

  

ಪುಟ್ಟ ತಮ್ಮ, ತಂಗಿ! ವನಿತಾಳಂತೆ ಯೇಸುವನ್ನು ಆಸೆಯಿಂದ ಹುಡುಕುವ ಮಕ್ಕಳನ್ನೇ ಯೇಸಪ್ಪ ಹುಡುಕುತ್ತಿದ್ದಾರೆ. ನೀನು ಕೂಡ ಹಾಗೆಯೇ ಬದಲಾಗಿ ಬಿಡು. ಯೇಸಪ್ಪ ನಿನ್ನನ್ನು ಸಹ ಉತ್ತಮಗೊಳಿಸುತ್ತಾರೆ. ಓ.ಕೆ.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş