By Village Missionary Movement
Saturday, 26-Oct-2024ಧೈನಂದಿನ ಧ್ಯಾನ(Kannada) – 26.10.2024
ಶತ್ರುವಿನ ಮೇಲೆ ಪ್ರೀತಿ
"ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು?..." - ಲೂಕ 6:32
1950 ನೇ ವರ್ಷದಲ್ಲಿ, ಯುದ್ಧ ಪ್ರಾರಂಭವಾದಾಗ, ಡಾ. ಕಿಮ್ ತನ್ನ ದೇಶಕ್ಕಾಗಿ ಹೋರಾಡಲು ದಕ್ಷಿಣ ಕೊರಿಯಾದ ಸೈನ್ಯವನ್ನು ಸೇರಿಕೊಂಡರು. ಆದರೆ ಯುದ್ಧದ ಭೀಕರತೆಗೆ ತಾನು ಸಿದ್ಧವಿಲ್ಲ ಎಂದು ಅವರು ಶೀಘ್ರದಲ್ಲೇ ತಿಳಿದುಕೊಂಡರು. ಯುದ್ಧದಲ್ಲಿ ಜೊತೆಗಿದ್ದ ಗೆಳೆಯರ ಸಾವನ್ನು ಕಂಡಾಗ ಅವರಿಗೆ ಸಾವಿನ ಭಯ ಆವರಿಸಿತು. ಅವರ ಜೀವದ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಬಹುಶಃ ನಾನು ಬದುಕುಳಿದರೆ ತನ್ನ ಶತ್ರುಗಳನ್ನು ಪ್ರೀತಿಸಲು ಕಲಿಯುತ್ತೇನೆಂಬದಾಗಿ ನಿರ್ಧರಿಸಿದರು. ದೇವರು ಆ ಪ್ರಾರ್ಥನೆಗೆ ಉತ್ತರಿಸಿದರು. ಕೃಪೆಯಿಂದ ಅವರೂ ಬದುಕಿದರು. ಅವರು ತಮ್ಮ ದೇಶದ ವಿರುದ್ಧ ಹೋರಾಡಿದರು ಉತ್ತರ ಕೊರಿಯಾ ಮತ್ತು ಚೀನಾದಲ್ಲಿ ಅನಾಥ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಮೂಲಕ ಸಹಾಯ ಮಾಡಿದರು. ಹಾಗೆ ಮಾಡುವ ಮೂಲಕ, ಹಿಂದೆ ಶತ್ರುಗಳೆಂದು ಪರಿಗಣಿಸಿದವರಲ್ಲಿ ಅವರು ಅನೇಕ ಸ್ನೇಹಿತರನ್ನು ಮಾಡಿಕೊಂಡರು.
ಆದರೆ ಸತ್ಯವೇದದಲ್ಲಿ ಪ್ರವಾದಿಯಾದ ಯೋನನು ವಿಭಿನ್ನವಾದ ಗುರುತನ್ನು ಬಿಟ್ಟುಹೋಗಿದ್ದಾರೆ. ಮೀನಿನ ಹೊಟ್ಟೆಯಿಂದ ವಿಶೇಷವಾಗಿ ಕಾಪಾಡಲ್ಪಟ್ಟ ಕಾರ್ಯವೂ ಸಹ ಅವರ ಮನಸ್ಸನ್ನು ಬದಲಾಯಿಸಲಿಲ್ಲ. ಅಂತಿಮವಾಗಿ ಅವರು ದೇವರಿಗೆ ವಿಧೇಯರಾದರೂ ದೇವರು ನಿನೆವೆಯ ಜನರಿಗೆ ಕರುಣೆ ತೋರಿಸುವುದನ್ನು ನೋಡುವುದಕ್ಕಿಂತ ಸಾಯುವುದು ಉತ್ತಮ ಎಂದು ಹೇಳಿದರು.
ಪ್ರಿಯರೇ, ಬಲಗೈಗೂ, ಎಡಗೈಗೂ ವ್ಯತ್ಯಾಸ ತಿಳಿಯದ ಅ ನಿನೆವೆಯ ಜನರ ಮೇಲೆ ಯೋನನು ಕೋಪಗೊಂಡಿದ್ದರಿಂದ, ಯೋನನು ಆ ಜನರನ್ನು ಪ್ರೀತಿಸಲು ಸಾಧ್ಯವಾಗಲಿಲ್ಲ. ಆದರೆ ನಾವು ನಮ್ಮ ಬಗ್ಗೆ ಆಳವಾಗಿ ಯೋಚಿಸೋಣ. ನಮ್ಮನ್ನು ದ್ವೇಷಿಸುವವರನ್ನು ಡಾ. ಕಿಮ್‌ನಂತೆ ಪ್ರೀತಿಸಲು ಸಾಧ್ಯವಾ? ದೇವರು ನಮಗೆ ಕರುಣೆ ತೋರಿಸಿದಂತೆ ನಮ್ಮ ಶತ್ರುಗಳನ್ನು ಪ್ರೀತಿಸಲು ನಾವು ದೇವರ ಶಕ್ತಿಯನ್ನು ಹುಡುಕುತ್ತೇವೆಯೇ? ಯೋಬನು ತನ್ನ ಸ್ನೇಹಿತರಿಗಾಗಿ ಪ್ರಾರ್ಥಿಸಿದಾಗ, ಕರ್ತನು ಯೋಬನ ಸೆರೆಯನ್ನು ಬದಲಾಯಿಸಿದರು. ಪ್ರೀತಿ ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ. ನನಗೆ ಪ್ರಿಯವಾದವರೇ! ನಾವು ಪ್ರೀತಿಯಲ್ಲಿ ನೆಲೆಗೊಳ್ಳೋಣ. ಇತರರನ್ನು ಪ್ರೀತಿಸೋಣ ಮತ್ತು ಜಗತ್ತಿಗೆ ಸಾಕ್ಷಿಯಾಗಿ ಬದುಕಲು ನಮ್ಮನ್ನು ನಾವು ಸಮರ್ಪಿಸೋಣ. ಆಮೆನ್
- A. ಬ್ಯೂಲಾ
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿವಿಯನ್ನು ಸ್ಯಾಟಲೈಟ್ ಟಿವಿಯನ್ನಾಗಿ ಪರಿವರ್ತಿಸುವ ನಮ್ಮ ಪ್ರಯತ್ನದಲ್ಲಿ ದೇವರು ನಮ್ಮೊಂದಿಗೆ ಇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482