By Village Missionary Movement
Monday, 21-Oct-2024ಧೈನಂದಿನ ಧ್ಯಾನ(Kannada) – 21.10.2024
ಮೊಣಕಾಲೂರಿ ಪ್ರಾರ್ಥನೆ
"ಅವನು . . . ಮೊಣಕಾಲೂರಿಕೊಂಡು ಅವರೆಲ್ಲರ ಸಂಗಡ ಪ್ರಾರ್ಥನೆ ಮಾಡಿದನು" - ಅಪೊಸ್ತಲ 20:36
ಒಂದು ಮಿಷನರಿ ಸಂಸ್ಥೆಯು ನಿರ್ದಿಷ್ಟ ಪಟ್ಟಣಕ್ಕೆ ಸೇವೆ ಸಲ್ಲಿಸಲು ಒಬ್ಬ ಮಿಷನರಿಯನ್ನು ಕಳುಹಿಸಿತು. ಉತ್ಸಾಹವಾಗಿ ಹೊರಟ ಅವರು ಅಲ್ಲಿ ಸೇವೆಯನ್ನು ಪ್ರಾರಂಭಿಸಿದರು. ತಿಂಗಳುಗಳು ಉರುಳಿದವು. ಅವರ ಬೋಧನೆಗೆ ಯಾರೂ ಕಿವಿಗೊಡಲಿಲ್ಲ. ಜನರು ತುಂಬಾ ಒರಟು ಮತ್ತು ಬುದ್ಧಿಮಾಂದ್ಯ ಜೀವನ ನಡೆಸುತ್ತಿದ್ದರು. ಇವರು ಎಡೆಬಿಡದೆ ದಿನವು ಸೇವೆ ಮಾಡಿದರೂ ಒಂದಿಷ್ಟು ಜನರನ್ನೂ ಸಹ ಬದಲಾಯಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ತುಂಬಾ ದಣಿದು ತನ್ನ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತಲ್ಲಾ ಅಂದುಕೊಂಡು ನಗರದ ಇನ್ನೊಂದು ಭಾಗಕ್ಕೆ ಬಂದರು. ಅಲ್ಲಿ ಯಾರೋ ಒಬ್ಬರು ರಸ್ತೆಯ ಬಳಿ ಕಲ್ಲುಗಳನ್ನು ಒಡೆಯುತ್ತಿರುವುದನ್ನು ನೋಡಿದರು. ಆತ ದೊಡ್ಡ ಬಂಡೆಗಳನ್ನು ಸುತ್ತಿಗೆಯಿಂದ ಒಡೆಯುತ್ತಿದ್ದನು. ಸೇವಕರು ಅವನ ಬಳಿಗೆ ಹೋಗಿ, “ಅಯ್ಯಾ, ನೀವು ಹೇಗೆ ಇಂತಹ ದೊಡ್ಡ ಕಲ್ಲುಗಳನ್ನು ಒಡೆಯಲು ಸಾಧ್ಯವಾಯಿತು? ಎಂದು ಕೇಳಿದರು. ಅದಕ್ಕೆ ಅವರು ಗಟ್ಟಿಯಾದ ಬಂಡೆಗಳನ್ನು ಒಡೆಯುವಾಗ ಮೊಣಕಾಲುಗಳ ಮೇಲೆ ಮುರಿಯಬೇಕು ನಾವು ಮೊಣಕಾಲಿನಲ್ಲಿ ನಿಲ್ಲುವಾಗ, ನಮ್ಮ ಶಕ್ತಿ ಹೆಚ್ಚಾಗುತ್ತದೆ. ಎಂತಹ ಗಟ್ಟಿಯಾದ ಬಂಡೆಯನ್ನೂ ಸಹ ಒಡೆದುಬಿಡಬಹುದು ಎಂದು ಹೇಳಿದರು. ದೇವರು ಅ ವ್ಯಕ್ತಿಯ ಮೂಲಕ ತನ್ನೊಂದಿಗೆ ಮಾತನಾಡುತ್ತಿದ್ದಾರೆ ಎಂದು ಸೇವಕರಿಗೆ ಕ್ಷಣಾರ್ಧದಲ್ಲಿ ಅರ್ಥವಾಯಿತು. ಇವರು ಸಂಭ್ರಮದಿಂದ ಮನೆಗೆ ಹಿಂದಿರುಗಿದರು. ಅಂದಿನಿಂದ ಗಂಟೆಗಟ್ಟಲೆ ಮಂಡಿಯೂರಿ ಪ್ರಾರ್ಥಿಸಿ ಗೆದ್ದರು. ದಾನಿಯೇಲ, ಎಲೀಯ, ಪೌಲನು, ಎಸ್ತೇರ್ ಇವರೆಲ್ಲರೂ ಪ್ರಾರ್ಥಿಸಿ ಯಶಸ್ಸನ್ನು ಕಂಡುಕೊಂಡವರು.
ಸತ್ಯವೇದದಲ್ಲಿ ತಮ್ಮ ಪ್ರಾರ್ಥನೆಯಿಂದ ಜಯಿಸಿದವರು ಅನೇಕರಿದ್ದಾರೆ. ಹನ್ನಳು ಕಣ್ಣೀರಿಟ್ಟು ತನಗೆ ಒಂದು ಮಗುಬೇಕೆಂದು ಹೋರಾಡಿ ಪ್ರಾರ್ಥಿಸಿದಳು. ಅವಳು ತನ್ನ ಹೃದಯವನ್ನು ದೇವರ ಸನ್ನಿಧಿಯಲ್ಲಿ ಸುರಿದಳು. ಅದ್ಬುತವನ್ನು ಪಡೆದುಕೊಂಡಳು.
ಕರ್ತನಲ್ಲಿ ಪ್ರಿಯರೇ, ಈ ಕಾರ್ಯವು ನನ್ನ ಜೀವನದಲ್ಲಿ ನೆರವೇರಲಿಲ್ಲವೇ? ನನ್ನ ಜೀವನದಲ್ಲಿ ಸತತವಾಗಿ ಸೋಲನ್ನೇ ಕಾಣುತ್ತಿದ್ದೇನಲ್ಲಾ ಎಂದು ಚಿಂತಿಸುತ್ತಿದ್ದೀರಾ? ಚಿಂತಿಸಬೇಡಿ. ನಿಮ್ಮ ಮೊಣಕಾಲುಗಳ ಮೇಲೆ ನಿಂತು ದೇವರಿಗೆ ಮೊರೆಯಿಡಿರಿ. ನಾವು ಮೊಣಕಾಲುಗಳ ಮೇಲೆ ನಿಂತು ನಮ್ಮ ಹೃದಯವನ್ನು ಅವರ ಮುಂದೆ ಸುರಿಯುವಾಗ, ನಾವು ಕೇಳುವದನ್ನು ನಾವು ಪಡೆಯಬಹುದು. ನಮ್ಮ ಬುದ್ಧಿವಂತಿಕೆಯಿಂದ ಸಾಧಿಸಲು ಸಾಧ್ಯವಾಗದೇ ಇರುವಂಥದ್ದನ್ನು ನಮ್ಮ ಮೊಣಕಾಲಿನ ಪ್ರಾರ್ಥನೆಯಿಂದ ಸಾಧಿಸಬಹುದು. ಮೊಣಕಾಲಿನ ಪ್ರಾರ್ಥನೆಯು ಅದ್ಬುತಗಳನ್ನು ನಡೆಸುತ್ತದೆ, ಕೊರತೆಗಳನ್ನು ಬದಲಾಯಿಸುತ್ತದೆ ಮತ್ತು ನಮ್ಮ ಕಣ್ಣೀರನ್ನು ಒರೆಸುತ್ತದೆ. ಹೀಗಾಗಿ ಗೆಲುವಿನ ಗುಟ್ಟು ತಿಳಿದು ಇಂದಿನಿಂದಲೇ ಮೊಣಕಾಲೂರಿ ಹೋರಾಡೋಣ, ಗೆಲ್ಲೋಣ.
- Mr. ಶಿವ
ಪ್ರಾರ್ಥನಾ ಅಂಶ:
ನಮ್ಮ ಎಲ್ಲಾ ಸೇವಾ ಕ್ಷೇತ್ರಗಳಲ್ಲಿ 24-ಗಂಟೆಗಳ ಸತತ ಸರಪಳಿ ಪ್ರಾರ್ಥನೆಯು ಪ್ರಾರಂಭಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482