Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.10.2024
Share:

By Village Missionary Movement

Sunday, 20-Oct-2024

ಧೈನಂದಿನ ಧ್ಯಾನ(Kannada) – 20.10.2024

 

ಮತ್ಸರ ಬೇಡ

 

"ಸ್ವಸ್ಥವಾದ ಹೃದಯವು ದೇಹಕ್ಕೆ ಜೀವ; ಮತ್ಸರವು ಎಲುಬುಗಳಿಗೆ ಕ್ಷಯವು" - ಜ್ಞಾನೋಕ್ತಿ 14:30

 

ಹಾಯ್ ಪುಟಾಣಿಗಳೇ, HOW are you? O...ಸೂಪರ್! ಯಾರಾದರೂ ನಿನಗಿಂತ ಸುಂದರವಾಗಿದ್ದರೆ, ಚೆನ್ನಾಗಿ ಓದಿದರೆ, ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದರೆ, ನಿನ್ನೊಳಗೆ ಸ್ವಲ್ಪ ಹೊಟ್ಟೆಕಿಚ್ಚು ಬರುತ್ತದೆಯೇ? it's O.K. ಆದರೆ ಆರಂಭದಲ್ಲೇ ಸರಿಪಡಿಸಿಕೊಳ್ಳದಿದ್ದರೆ ಮೂಳೆಗಳು ಕಣ್ಣಿಗೆ ಕಾಣದೇ ಕರಗಿ ಹೋಗುವಂತಹ ಗಂಭೀರ ಕಾಯಿಲೆಯಾಗಿ ಪರಿಣಮಿಸಬಹುದು. ಅರ್ಥ ಆಗ್ತಿದಿಯಾ ಪುಟಾಣಿಗಳೇ. ಸರಿ, ನಾವು ಅದರ ಬಗ್ಗೆ ಒಂದು ಕಥೆಯನ್ನು ಕೇಳೋಣ್ವಾ? 

 

ಐದನೇ ತರಗತಿ ಓದುತ್ತಿರುವ ಕಯಲ್ ಒಳ್ಳೆಯ ಸ್ವಭಾವದ ಮಗು. ಚೆನ್ನಾಗಿ ಓದುತ್ತಾಳೆ. ಅವಳು ಯಾವಾಗಲೂ ಗೆಲ್ಲುತ್ತಿದ್ದರಿಂದ ಕ್ಲಾಸ್ ಟೀಚರ್ ಅವಳನ್ನು ಲೀಡರ್ ಆಗಿ ಮಾಡಿದರು. ಮಿಸ್ ಇಲ್ಲದಿರುವಾಗ ತರಗತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಚೇಷ್ಟೆ ಆಡುವ ಮಕ್ಕಳನ್ನೂ ನಯವಾಗಿ ಮಾತನಾಡಿ ಮೌನವಾಗಿರುಸುತ್ತಿದ್ದಳು. ಕೆಲವೊಮ್ಮೆ ಮಾತನಾಡುವ, ಗಲಾಟೆ ಮಾಡುವ ಮಕ್ಕಳ ಹೆಸರನ್ನು ಬರೆದು ಟೀಚರ್ ಬಂದಾಗ ಕೊಡುತ್ತಿದ್ದಳು. ನೀವು ಸಹ ಅದೇ ರೀತಿ ಮಾಡುತ್ತೀರಾ? ಹೀಗೆ ಎಲ್ಲದರಲ್ಲೂ ಸೂಪರ್ ಅಂತಾ ಅನಿಸಿಕೊಳ್ಳುತ್ತಿದ್ದ ಕಯಲ್ ಗೆ ರೋಜರ್ ಬಳಿಯಿದ್ದ ದುಬಾರಿ ಪೆನ್ನು ನೋಡಿ ಹೊಟ್ಟೆಕಿಚ್ಚು ಬಂದುಬಿಟ್ಟಿತು. ನನ್ನ ಮಾಮ ವಿದೇಶದಿಂದ ತಂದರು. ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದರು. ಎಷ್ಟು ಸೂಪರ್ ಆಗಿ ಬರೆಯುತ್ತದೋ ನೋಡು. ಹೀಗೆ ತನ್ನ ಸ್ನೇಹಿತ ಗೋಪಾಲ್‌ಗೆ ಹೇಳುತ್ತಿರುವುದನ್ನು ಕೇಳಿ ಕಯಲ್ ತುಂಬಾ ಅಸಹ್ಯಪಟ್ಟಳು.

 

ಚೆನ್ನಾಗಿ ಓದಲು ಬರದ ಇವಳಿಗೆ ದುಬಾರಿ ಪೆನ್ನಾ? ಹಾಗಾಗಬಾರದು, ನನಗೂ ಕೂಡ ಸಿಗಲಿಲ್ಲವಲ್ಲಾ ಎಂದು ಮನದಲ್ಲೇ ಅಂದುಕೊಂಡಳು. ಏನು ಪುಟಾಣಿಗಳೇ, ಮನಸ್ಸಿನಲ್ಲಿ ಅಂದುಕೊಂಡದ್ದು ನನಗೆ ಹೇಗೆ ಗೊತ್ತಾಯ್ತು ಅಂತಾ ಯೋಚಿಸುತ್ತಾ ಇದ್ದೀರಾ? Jesus ಗೆ ಎಲ್ಲಾ ಗೊತ್ತು ಅಲ್ವಾ. ವಿರಾಮದ ಸಮಯದಲ್ಲಿ, ಕಯಲ್ ಧಾವಿಸಿ ರೋಜರ್‌ನ ಪೆನ್ನು ತೆಗೆದುಕೊಂಡು ಢಮಾರ್ ಎಂದು ಗೋಡೆಗೆ ಎಸೆದಳು. ಎರಡಾಗಿ ಮುರಿದುಹೋಯಿತು. ಇದನ್ನು ಕಂಡ ಮಿಸ್ ಕಯಲ್ ಹೀಗಾ ಎಂದು ತುಂಬಾ ಆಶ್ಚರ್ಯಪಟ್ಟರು. ತಲೆ ಬೊಗ್ಗಿಸಿದ ಕಯಲ್ ನ ಕಣ್ಣಲ್ಲಿ ನೀರು, ಮಿಸ್ ಏನು ಮಾಡುತ್ತಾರೋ ಎಂಬ ಭಯ. ಆದರೆ ಮಿಸ್ ಕಯಲ್ ನ ಭುಜದ ಮೇಲೆ ಕೈಯಿಟ್ಟು ಆತ್ಮೀಯವಾಗಿ ಮಾತನಾಡಿದರು. ಹೊಟ್ಟೆಕಿಚ್ಚು ಎಷ್ಟು ದುಷ್ಟ ಕೇಡನ್ನು ಮತ್ತು ಪಾಪವನ್ನು ಮಾಡಿಸುತ್ತದೆ ನೋಡಿದ್ಯಾ? ಆರಂಭದಲ್ಲಿಯೇ ಹೊಟ್ಟೆಕಿಚ್ಚನ್ನು ಕಿತ್ತು ಬಿಸಾಡು. ಯೇಸು ನಿನಗೆ ಸಹಾಯ ಮಾಡುತ್ತಾರೆ ಎಂಬ ಶಿಕ್ಷಕರ ಕರುಣಾಭರಿತ ಮಾತುಗಳು ಕಯಲ್ ಮನಸ್ಸನ್ನು ಬದಲಾಯಿಸಿತು.  

 

ಮುದ್ದು ಪುಟಾಣಿಗಳೇ! ನೀವು ಯಾರ ಮೇಲೆ ಹೊಟ್ಟೆಕಿಚ್ಚು ಪಡುತ್ತೀರೋ ಅವರನ್ನು ಹೊಗಳಲು ಕಲಿಯಿರಿ. ಸ್ವಲ್ಪಮಟ್ಟಿಗೆ ಹೊಟ್ಟೆಕಿಚ್ಚು ಬದಲಾಗುತ್ತದೆ. ನಮ್ಮೊಳಗೆ ಅಡಗಿರುವ ಹೊಟ್ಟೆಕಿಚ್ಚನ್ನು ಹೋಗಲಾಡಿಸಿ ಯೇಸುವಿನ ಸಹಾಯದಿಂದ ಯಶಸ್ವಿ ಜೀವನ ನಡೆಸಲು ನನ್ನ ಶುಭ ಹಾರೈಕೆಗಳು.   

- Mrs. ರೂಬಿ ಅರುಣ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al