Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.10.2024
Share:

By Village Missionary Movement

Saturday, 19-Oct-2024

ಧೈನಂದಿನ ಧ್ಯಾನ(Kannada) – 19.10.2024

 

ತಮ್ಮ ಕೈಲಾದಷ್ಟು ಮಾಡಿದರು

 

"ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ;…" - ಮಾರ್ಕ 14:8

  

ನನ್ನ ಸಂಬಂಧಿಕರಲ್ಲಿ ಒಬ್ಬ ಹುಡುಗ ದೈಹಿಕವಾಗಿ ದುರ್ಬಲನಾಗಿದ್ದನು. ಸ್ವಲ್ಪ ದೂರ ನಡೆದು ಹೋದರೇನೇ ಅವನಿಗೆ ಹೆಚ್ಚು ಆಯಾಸವಾಗಿಬಿಡುತ್ತಿತ್ತು. ಒಮ್ಮೆ ಊರಿನಲ್ಲಿರುವ ನಮ್ಮ ತೋಟಕ್ಕೆ ಹೋಗಿ ಹಿಂತಿರುಗಿ ಬರುವ ದಾರಿಯಲ್ಲಿ, ಅವನನ್ನು ಕಷ್ಟಪಟ್ಟು ಅವರ ಅಕ್ಕ ಬೆನ್ನು ಮೇಲೆ ಹೊತ್ತುಕೊಂಡು ಬಂದರು. ಅದನ್ನು ನೋಡಿ ಕರುಣೆಯಿಂದ ನಾನು ಅವನನ್ನು ನನ್ನ ಬೆನ್ನ ಮೇಲೆ ಹೊತ್ತುಕೊಂಡು ಮನೆಗೆ ಬಂದೆ. ಆಗ ನಾನು ಸಹ ಚಿಕ್ಕ ಹುಡುಗನಾಗಿದ್ದೆ. ಎಷ್ಟೋ ವರ್ಷಗಳ ಹಿಂದೆ ನಾನು ಅವರಿಗೆ ಮಾಡಿದ ಸಹಾಯವನ್ನು ಇಂದಿಗೂ ಅವರು ಮರೆತಿಲ್ಲ. ನೋಡಿ, ಮನುಷ್ಯರೇ ತಮಗೆ ಮತ್ತೊಬ್ಬರು ಮಾಡಿದ ಸಹಾಯವನ್ನು ಕೃತಜ್ಞತೆಯನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರುವಾಗ, ಇಡೀ ವಿಶ್ವವನ್ನು ಸೃಷ್ಟಿಸಿದ ದೇವರು ತನಗಾಗಿ ನಾವು ಮಾಡಿದ್ದನ್ನು ಮರೆತುಬಿಡುತ್ತಾರೆಯೇ! "ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ." (ಇಬ್ರಿಯ 6:10)

     

ಪರಿಶುದ್ಧ ಗ್ರಂಥದಲ್ಲಿ, (ಮಾರ್ಕ 14 ರಲ್ಲಿ) ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಆ ಭರಣಿಯನ್ನು ಒಡೆದು ತೈಲವನ್ನು ಆತನ ತಲೆಯ ಮೇಲೆ ಹೊಯಿದಳು. ಆದರೆ ಕೆಲವರು ತಮ್ಮೊಳಗೆ ಕೋಪಗೊಂಡು ಆಕೆಯ ಮೇಲೆ ಗುಣುಗುಟ್ಟಿದರು. ಆದರೆ ಯೇಸು ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ; ಈಕೆಯು ಮುಂದಾಗಿ ನನ್ನ ಉತ್ತರಕ್ರಿಯೆಗೋಸ್ಕರ ನನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ." ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. ನೋಡಿ! ಅಂದು ನಡೆದ ಆ ಘಟನೆಯನ್ನು ಇಂದು ನಾವು ನೆನಪಿಸಿಕೊಳ್ಳುತ್ತೇವೆ. ಹೌದು ವಾಗ್ದಾನ ಮಾಡಿದಾತನು ಮಾತು ತಪ್ಪದವರು. 

 

ಪ್ರವಾದಿಯಾದ ಎಲೀಯನಿಗೆ ಒಂದು ಸಣ್ಣ ರೊಟ್ಟಿಯನ್ನು ಮಾಡಿಕೊಟ್ಟ ಚಾರೆಪ್ತಾ ವಿಧವೆ, ಸಿರಿಯಾದ ರಾಜನಾದ ಸೇನಾಪತಿಯಾದ ನಾಮಾನನ ಕುಷ್ಠರೋಗವು ಗುಣವಾಗಲು ಪ್ರವಾದಿಯಾದ ಎಲೀಷನ ಬಳಿಗೆ ಹೋಗುವಂತೆ ಹೇಳಿದ ಆ ಪುಟ್ಟ ಹುಡುಗಿ, ತನ್ನ ಜೀವನಕ್ಕಾಗಿ ಇದ್ದ ಎರಡು ನಾಣ್ಯಗಳನ್ನು ಅಂದರೆ ತನ್ನ ಜೀವನವನ್ನೇ ಕಾಣಿಕೆಯಾಗಿ ಅರ್ಪಿಸಿದ ಬಡ ವಿಧವೆ, ಪುರುಷರು ಮಾತ್ರವೇ ಸುಮಾರು 5000 ಜನರು ತಿಂದು ಉಳಿದದ್ದನ್ನು 12 ಬುಟ್ಟಿಗಳಲ್ಲಿ ಎತ್ತಿಕೊಳ್ಳಲು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಯೇಸುವಿನ ಕೈಗಳಲ್ಲಿ ಕೊಟ್ಟ ಆ ಹುಡುಗ ಹೀಗೆ ಹೇಳಿಕೊಂಡೇ ಹೋಗಬಹುದು. ಇವರೆಲ್ಲರೂ ದೇವರ ಮೇಲಿನ ಪ್ರೀತಿಯಿಂದ ತಮ್ಮ ಕೈಲಾದಷ್ಟು ಕೊಟ್ಟರು. ಇಂದಿನವರೆಗೂ ಅವರ ಬಗ್ಗೆ ಮಾತನಾಡಲಾಗುತ್ತಿದೆ.

     

ಇದನ್ನು ಓದುತ್ತಿರುವ ಮತ್ತು ಕೇಳುತ್ತಿರುವ ನೀವು ಏಕೆ ನಿಮ್ಮ ಸಮಯ, ಹಣ, ವಸ್ತು ಮತ್ತು ದೈಹಿಕ ಶ್ರಮವನ್ನು ದೇವರಿಗಾಗಿ ಕೊಡಬಾರದು? ಎಷ್ಟೋ ಅಗತ್ಯಗಳೊಂದಿಗಿರುವ ಸೇವೆಗಳು, ಮಿಷನರಿ ಸಂಸ್ಥೆಗಳು ಮತ್ತು ಬಡವರು, ನಿರ್ಗತಿಕರಿಗೆ ಸಹಾಯ ಮಾಡಿ. ದೇವರ ಪ್ರೀತಿಯ ಬಗ್ಗೆ ಇತರರಿಗೆ ತಿಳಿಸಿ. 1ಕೊರಿಂಥ 15 : 58 ರಲ್ಲಿ ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ. ಯೇಸುವಿಗಾಗಿ ತಮ್ಮ ಕೈಲಾದಷ್ಟು ಮಾಡಿದರು; ಇಂದಿನವರೆಗೂ ಅವರ ಬಗ್ಗೆ ಮಾತನಾಡಲಾಗುತ್ತಿದೆ. ಇಂದು ನಾವು ಏನು ಮಾಡುತ್ತಿದ್ದೇವೆ ಯೇಸುವಿಗಾಗಿ... ಯೋಚಿಸೋಣ! ಕಾರ್ಯಮಾಡೋಣ.

- Bro. ಸಿಮಿಯೋನ್

 

ಪ್ರಾರ್ಥನಾ ಅಂಶ:

ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಶಿಬಿರಗಳನ್ನು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin