Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.10.2024
Share:

By Village Missionary Movement

Friday, 18-Oct-2024

ಧೈನಂದಿನ ಧ್ಯಾನ(Kannada) – 18.10.2024

 

ಕೋಪ ಅದು ಶೋಖ

 

"ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ" - ಪ್ರಸಂಗಿ 7:9

 

ಯಾರು ಹೇಗೆ ವರ್ತಿಸಿದರೂ ಸಿಟ್ಟು ಮಾಡಿಕೊಳ್ಳದ ಒಬ್ಬ ಮನುಷ್ಯ ಇದ್ದರು. ಅವರನ್ನು ಯಾರು ಅವಮಾನಿಸಿದರೂ ಕಂಡುಕೊಳ್ಳುತ್ತಿರಲಿಲ್ಲ. ಅನೇಕರು ಅವರನ್ನು ಕೋಪಗೊಳಿಸಲು ಪ್ರಯತ್ನಿಸಿ ವಿಫಲರಾದರು. ಹೇಗೆ ಇವರಿಂದ ಹೀಗೆ ಕೋಪಗೊಳ್ಳದೇ ಇರಲು ಸಾಧ್ಯವಾಗುತ್ತಿದೆ ಎಂದು ತಿಳಿದುಕೊಳ್ಳಲು ಬಯಸಿದರು ಅವರ ಸ್ನೇಹಿತರೊಬ್ಬರು. ಅವರು ಆ ವ್ಯಕ್ತಿಯ ಬಳಿಗೆ ಹೋಗಿ ನೀವು ಹೇಗೆ ಈರೀತಿ ಕೋಪಿಸಿಕೊಳ್ಳದೇ ಇರಲು ಸಾಧ್ಯವಾಗುತ್ತಿದೆ ಎಂದು ಕೇಳಿದರು. ಆಗ ಆ ವ್ಯಕ್ತಿ ಆ ರಹಸ್ಯವನ್ನು ಹೇಳಿದರು. ಒಂದು ಸರೋವರದ ಮೇಲೆ ಖಾಲಿ ದೋಣಿಯಲ್ಲಿ ಮಲಗುವುದು ನನ್ನ ಅಭ್ಯಾಸ. ಒಮ್ಮೆ ಮಲಗಿದ್ದಾಗ ದೋಣಿಯೊಂದು ಬಂದು ನಾನು ಮಲಗಿದ್ದ ದೋಣಿಗೆ ಅಪ್ಪಳಿಸಿತು. ನನ್ನ ನಿದ್ದೆಯನ್ನು ಕೆಡಿಸಿ ಅಜಾಗರೂಕತೆಯಿಂದ ದೋಣಿಯನ್ನು ಅಪ್ಪಳಿಸಿದವರು ಯಾರು? ಎಂದು ಸಿಟ್ಟಿನಿಂದ ಕಣ್ಣು ತೆರೆದು ನೋಡಿದರೆ, ಅದೊಂದು ಖಾಲಿ ದೋಣಿ. ಗಾಳಿಗೆ ತೂಗಾಡುತ್ತಾ ನಾನು ಮಲಗಿದ್ದ ದೋಣಿಗೆ ಅಪ್ಪಳಿಸಿತು. ಆ ದೋಣಿಯ ಮೇಲೆ ನನ್ನ ಕೋಪವನ್ನು ತೋರಿಸಿದರೆ ಏನು ಪ್ರಯೋಜನ? ಅದರ ನಂತರ ನನ್ನನ್ನು ಯಾರಾದರೂ ಸಿಟ್ಟುಗೊಳಿಸಿದರೆ ನನಗೆ ಆ ಘಟನೆಯೇ ನೆನಪಾಗುತ್ತದೆ. ಇದೂ ಕೂಡ ಖಾಲಿ ದೋಣಿಯೇ ಎಂದುಕೊಂಡು ಸುಮ್ಮನಾಗುತ್ತೇನೆ ಎಂದರು. ಗೆಳೆಯನೂ ಅದಕ್ಕೆ ಮನಸೋತಿದ್ದ.

 

ಸತ್ಯವೇದದಲ್ಲಿಯೂ ಸಹ ನಾಬಾಲ್ ಎಂಬವನ ಕೋಪ ತುಂಬಿದ, ಮೋಸವಾದ ಗುಣದಿಂದ ಬಾಧಿಸಲ್ಪಟ್ಟವರು ದಾವೀದನು. ಇದರಿಂದಾಗಿ ದಾವೀದನು ತನ್ನ ಸೇನೆಯೊಂದಿಗೆ ನಾಬಾಲನನ್ನು ಕೊಲೆ ಮಾಡಲು ಬರುತ್ತಾರೆ. ಆಗ ನಾಬಾಲನ ಹೆಂಡತಿ ಬುದ್ಧಿವಂತಿಕೆಯಿಂದ ಕಾರ್ಯ ಮಾಡಿ ದಾವೀದನ ಕೋಪವನ್ನು ಕಡಿಮೆ ಮಾಡಿದರು. ಇದರಿಂದ ದೊಡ್ಡ ರಕ್ತಾಪರಾಧದಿಂದ ದಾವೀದನು ತಪ್ಪಿಸಲ್ಪಟ್ಟರು ಎಂದು ನೋಡುತ್ತೇವೆ.

 

ಹೌದು, ಪ್ರಿಯರೇ! ಅನೇಕ ಬಾರಿ ನಾವು ಕೋಪದಿಂದ ನಮ್ಮ ಆಶೀರ್ವಾದವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ, ಜನರು ತಮ್ಮ ಮಾತುಗಳಿಂದ ನಮ್ಮನ್ನು ಅವಮಾನಿಸಿದರೆ ಮತ್ತು ನೋಯಿಸಿದರೆ, ನಾವು ಕ್ರಿಸ್ತನ ಬೋಧನೆಯ ಪ್ರಕಾರ ತಾಳ್ಮೆಯಿಂದಿರಬೇಕು. ಸತ್ಯವೇದವು ಹೇಳುತ್ತದೆ, "ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ ಎಂದು. ಹೌದು, ನಮ್ಮ ಮುಂಗೋಪದಿಂದಾಗಿ ನಾವು ಅನೇಕ ಸ್ನೇಹಿತರನ್ನು ಕಳೆದುಕೊಂಡಿರಬಹುದು. ನಮ್ಮ ಕೋಪ ಗುಣವನ್ನು ಬದಲಾಯಿಸಲು ದೇವರ ಸಹಾಯವನ್ನು ಪಡೆಯೋಣ. ನಿಮ್ಮ ಶತ್ರುಗಳನ್ನು ಪ್ರೀತಿಸಿರಿ ಎಂದು ಯೇಸು ಹೇಳಿದರಲ್ಲಾ. ಇದುವೇ ಯೇಸು ತೋರಿದ ಮಾದರಿ. ಆತನಿಂದ ಆರಿಸಲ್ಪಟ್ಟ ನಾವು ಆತನ ಮಾದರಿಯನ್ನೇ ಅನುಸರಿಸಬೇಕು. ಆದ್ದರಿಂದ ನಾವು ನಮ್ಮನ್ನು ಪರೀಕ್ಷಿಸಿ ತಿಳಿದುಕೊಳ್ಳೋಣ. ದೇವರ ಮುಂದೆ ದೋಷರಹಿತರಾಗಿ ಮತ್ತು ಕೊರತೆಯಿಲ್ಲದವರಾಗಿ ಕಾಣಲ್ಪಡೋಣ. ಆಮೆನ್!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ನಮ್ಮ ಮಕ್ಕಳ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಕರ್ತನಲ್ಲಿ ನೆಲೆಗೊಂಡಿರಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş