Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.10.2024
Share:

By Village Missionary Movement

Friday, 11-Oct-2024

ಧೈನಂದಿನ ಧ್ಯಾನ(Kannada) – 11.10.2024

 

ಪ್ರಾರ್ಥನೆಯ ಶ್ರೇಷ್ಠತೆ

 

"ಆದರೆ ನಾವು ಪ್ರಾರ್ಥನೆಯಲ್ಲಿಯೂ ವಾಕ್ಯೋಪದೇಶದಲ್ಲಿಯೂ ನಿರತರಾಗಿರುವಂತೆ ನಮ್ಮನ್ನು ಒಪ್ಪಿಸಿಕೊಡುವೆವು ಎಂದು ಹೇಳಿದನು" - ಅಪೊಸ್ತಲ 6:4

 

ಇಬ್ಬರು ದೇವರ ಸೇವಕರು ಸೇವೆ ಮಾಡಲು ವಿದೇಶಕ್ಕೆ ಹೋದರು. ಯಾವುದೇ ಊರಿಗೆ ಹೋದರೂ ಅಲ್ಲಿಯೇ ಇದ್ದು ಸೇವೆ ಮಾಡುವುದು ಅವರ ವಾಡಿಕೆ. ಅವರಲ್ಲಿ ಒಬ್ಬರು ಐದು ನಿಮಿಷಗಳ ಕಾಲ ಪ್ರಾರ್ಥಿಸಿ ಮಲಗುತ್ತಾರೆ. ಇನ್ನೊಬ್ಬರು ರಾತ್ರಿಯಿಡೀ ಪ್ರಾರ್ಥಿಸುತ್ತಾರೆ. ಇದು ಪ್ರತಿದಿನ ನಡೆಯುತ್ತಿತ್ತು. ಒಂದು ದಿನ ಐದು ನಿಮಿಷಗಳ ಕಾಲ ಪ್ರಾರ್ಥಿಸುವವರು ರಾತ್ರಿಯಿಡೀ ಪ್ರಾರ್ಥಿಸುವವರ ಬಳಿ ನಾನು ಪ್ರಾರ್ಥಿಸಿ ತಕ್ಷಣ ನಿದ್ರಿಸುತ್ತೇನೆ, ಆದರೆ ನೀವು ರಾತ್ರಿಯಿಡೀ ಮಂಡಿಯೂರಿ ಪ್ರಾರ್ಥಿಸುವುದನ್ನು ನಾನು ನೋಡುತ್ತೇನೆ. ಹಾಗೆ ನೀವು ಏನು ಪ್ರಾರ್ಥಿಸುತ್ತೀರಿ ಯಾವುದಕ್ಕಾಗಿ ಪ್ರಾರ್ಥಿಸುತ್ತೀರಿ? ಎಂದು ಕೇಳಿದರು. ಅದಕ್ಕೆ ಅವರು ನಾನು ನನ್ನ ಒಳ್ಳೆಯ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಹಾಗಾಗಿ ನನ್ನ ಭಾವಿ ಪತ್ನಿ ಇದನ್ನು ಅರ್ಥಮಾಡಿಕೊಂಡು, ನನ್ನೊಂದಿಗೆ ಒಟ್ಟಾಗಿ ಸೇರಿ ಸೇವೆ ಮಾಡುವವಳಾಗಿ, ದೇವರ ಚಿತ್ತದ ಪ್ರಕಾರ ಒಟ್ಟಿಗೆ ಓಡುವವಳಾಗಿರಬೇಕು ಎಂದು ಪ್ರಾರ್ಥಿಸುತ್ತೇನೆ ಎಂದರು.  

  

ಅಂತೆಯೇ, ಸತ್ಯವೇದದಲ್ಲಿ, ದೇವರ ಮನುಷ್ಯನಾದ ಯಾಕೋಬನು ತನ್ನ ಸಹೋದರನಾದ ಏಶಾವನಿಂದ ಆಪತ್ತು ಬರಬಹುದು ಎಂದು ಹೆದರಿ, ರಾತ್ರಿಯಿಡೀ ದೇವರೊಂದಿಗೆ ಹೋರಾಡಿ ಪ್ರಾರ್ಥಿಸಿದರು. "ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು" (ಆದಿಕಾಂಡ 32:26) ಎಂದು ದೇವರೊಂದಿಗೆ ಹೋರಾಡಿ ಆಶೀರ್ವಾದವನ್ನು ಪಡೆದುಕೊಂಡರು. ಯೋಹಾನ 14:14 ರಲ್ಲಿ "ನೀವು ನನ್ನ ಹೆಸರಿನಲ್ಲಿ ಏನಾದರೂ ಕೇಳಿಕೊಂಡರೆ ನಾನು ಅದನ್ನು ಮಾಡುವೆನು", ಎಂಬ ವಾಕ್ಯದ ಪ್ರಕಾರ ಪ್ರಿಯರೇ, ಅವರು ರಾತ್ರಿಯಿಡೀ ಯಾವುದಕ್ಕಾಗಿ ಪ್ರಾರ್ಥಿಸಿದರೋ ಅದನ್ನು ಅವರ ಮನಸ್ಸಿನ ಇಚ್ಛೆಯಂತೆಯೇ ದೇವರು ಕೊಟ್ಟರು.  

 

ಹೌದು, ಪ್ರಿಯರೇ! ನಾವು ಏನೇ ಕೇಳಿದರೂ ದೇವರು ನಮ್ಮ ಜೀವನದಲ್ಲಿ ಖಂಡಿತ ಮಾಡುತ್ತಾರೆ. ಆದರೆ ನಾವು ರಾತ್ರಿಯಿಡೀ ಪ್ರಾರ್ಥಿಸುತ್ತೇವೆಯೇ? ನಾವು ಪ್ರಾರ್ಥನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತೇವೆಯೇ? ನಾವು ಎಂತವರಾಗಿದ್ದೇವೆ. ನಾವು ಪ್ರಾರ್ಥನೆಯಲ್ಲಿ ಕಳೆಯುವ ಸಮಯ ಕಡಿಮೆಯಿದ್ದರೆ, ನಾವು ದೇವರಿಂದ ದೊಡ್ಡ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. “ಇದು ಮನುಷ್ಯರಿಗೆ ಅಸಾಧ್ಯ ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂಬ ವಾಕ್ಯದ ಪ್ರಕಾರ ನಾವು ಪ್ರಾರ್ಥಿಸುವ ಮಕ್ಕಳಾಗಿ ಮಾರ್ಪಡೋಣ. ಅದ್ಭುತಗಳನ್ನು ನೋಡೋಣ. ದೇವರು ನಮಗೆ ಕೊಟ್ಟಿರುವ ವಾಗ್ದಾನಗಳನ್ನು ಹಿಡಿದುಕೊಂಡು ಪ್ರಾರ್ಥನೆಯಲ್ಲಿ ನಿರತರಾಗಿದ್ದರೆ ಪ್ರಾರ್ಥನೆಯ ಶ್ರೇಷ್ಠತೆಯನ್ನು ನಾವು ಕಾಣಬಹುದು. ದೇವರು ನಿಮ್ಮನ್ನು ಆಶೀರ್ವದಿಸಲಿ.

- Bro. ರೂಬನ್ ಕ್ರಿಸ್ಟಿ

 

ಪ್ರಾರ್ಥನಾ ಅಂಶ:

ನಮ್ಮ ಡೇ ಕೇರ್ ಮಕ್ಕಳನ್ನು ಬೆಂಬಲಿಸುವ ಕುಟುಂಬಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel