Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.10.2024
Share:

By Village Missionary Movement

Thursday, 10-Oct-2024

ಧೈನಂದಿನ ಧ್ಯಾನ(Kannada) – 10.10.2024

 

ದೊಡ್ಡ ಕೆಲಸ

 

"…ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು…" - ಯೆಶಾಯ 6:8

  

ಸ್ಟ್ಯಾಂಡರ್ಡ್ ಆಯಿಲ್ ಕಂಪನಿಯು ತಮ್ಮ ಇಂಡೋನೇಷ್ಯಾ ಶಾಖೆಗೆ ಒಂದು ಕಾರ್ಯನಿರ್ವಾಹಕರನ್ನು ಹುಡುಕುತ್ತಿದ್ದರು. ಅವರು ಸಮಗ್ರತೆ ಮತ್ತು ಪ್ರತಿಭೆಯಿಂದ ತುಂಬಿದ ವ್ಯಕ್ತಿಯನ್ನು ಹುಡುಕುತ್ತಿದ್ದರು. ಒಂದು ಮಿಷನರಿಗೆ ಕರೆಯುವಿಕೆಯನ್ನು ನೀಡಿದರು. ತನ್ನ ಸೇವೆಯಲ್ಲಿ ನಂಬಿಗಸ್ತನಾಗಿದ್ದ ಮಿಷನರಿ ತೈಲ ಕಂಪನಿಯ ಕಾರ್ಯನಿರ್ವಾಹಕನಾಗಲು ನಿರಾಕರಿಸಿದರು. ಮೂವತ್ತು ಡಾಲರ್ ಸಂಬಳ ಕೊಡುತ್ತೇನೆ ಎಂದು ಆ ಕಂಪನಿಯ ಬಾಸ್ ಹೇಳಿದರು. ಆ ಮಿಷನರಿ ಅದನ್ನೂ ಸಹ ನಿರಾಕರಿಸಿದ್ದರಿಂದ ನೀವು ಎಷ್ಟು ಕೇಳಿದರೂ ಕೊಡುತ್ತೇವೆ ಎಂದು ಹೇಳಿದರು. ಅದಕ್ಕೆ ಅವರು ನಾನು ಈಗ ನೋಡುತ್ತಿರುವ ಕೆಲಸಕ್ಕೆ ಹೋಲಿಸಿದರೆ ನೀವು ಕರೆಯುವ ಕೆಲಸವು ಚಿಕ್ಕ ಕೆಲಸವಾಗಿದೆ ಎಂದು ಹೇಳಿದರು.  

 

ನಾವು ಮಿಷನರಿಗಳು ಎಂದರೆ ಕಷ್ಟಪಡುವವರೆಂದು, ಸಾಮಾನ್ಯರೆಂದು ಭಾವಿಸುತ್ತೇವೆ. ಆದರೆ ಇದು ದೇವರ ಕೆಲಸ, ಪರಾತ್ಪರನ ರಾಜ್ಯಕ್ಕಾಗಿ ಮಾಡುವ ಕೆಲಸ. ಇದರಲ್ಲಿ ಕೆಲಸ ಮಾಡುವಾಗ ಎಂದಿಗೂ ಇಕ್ಕಟ್ಟಿಗೊಳಗಾಗುವುದೂ ಇಲ್ಲ ಒಡೆದುಹೋಗುವುದೂ ಇಲ್ಲ ಎಂದು ಪೌಲನು ಹೇಳುತ್ತಾರೆ. ಅವರ ದೇಹದಲ್ಲೂ ತುಂಬಾ ಪಾಡು ಪಟ್ಟರು. ಸುವಾರ್ತೆಗಾಗಿ ಅನೇಕ ಕಷ್ಟಗಳನ್ನೂ ಅನುಭವಿಸಿದರು. ಆದರೂ ಪೌಲನು ತೊಂದರೆಗೀಡಾದರೂ ಎದೆಗುಂದಲಿಲ್ಲ. ಏಕೆಂದರೆ ದೇವರು ಸರ್ವಶಕ್ತನು, ನಮ್ಮನ್ನು ಬಲಪಡಿಸುವಾತನು, ಸಮಾಧಾನ ಕಾರಣನು ಜೊತೆಯಿದ್ದು ನಮಗೆ ಬಲವನ್ನು ಕೊಟ್ಟು ಯಾವ ಹಾನಿಯೂ ಸಂಭವಿಸದಂತೆ ಕಾಪಾಡಿ ನಡೆಸುತ್ತಾರೆ. ಪೌಲನನ್ನು ವಿಷಕಾರಿ ಕೀಟವು ಕಚ್ಚಿದರೂ ವಿಷ ಏರದಂತೆ, ಹಾನಿಗೊಳಗಾಗದಂತೆ ಕಾಪಾಡಿದರು. ಕೆಲವು ಪಟ್ಟಣಗಳಲ್ಲಿ ಪೌಲನನ್ನು ಹೊಡೆಯಲು ದೇವರು ಅನುಮತಿಸಿದರೂ, ತಕ್ಷಣವೇ ಎದ್ದು ಹೋಗುವಂತಹ ಶಕ್ತಿ ಮತ್ತು ಧೈರ್ಯವನ್ನು ದೇವರೇ ಕೊಟ್ಟರು. ದೇವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ನಾವು ಪ್ರತಿದಿನ ಯೇಸು ಕ್ರಿಸ್ತನ ಪುನರುತ್ಥಾನದ ಶಕ್ತಿಯನ್ನು ಸವಿಯಬಹುದು. ನೆಹೆಮಿಯ ದೊಡ್ಡ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರೂ, ಅವರು ಅದನ್ನು ದೊಡ್ಡ ಕೆಲಸವೆಂದು ಭಾವಿಸಲಿಲ್ಲ, ಆದರೆ ಅವರು ದೇವರಿಗಾಗಿ ಮಾಡುವ ಕೆಲಸವೇ ದೊಡ್ಡದು ಎನ್ನುತ್ತಾರೆ.

 

ಪ್ರಿಯರೇ! ನಿಮ್ಮ ಜೀವನದ ಶ್ರೇಷ್ಠ ಗುರಿಯಾಗಿ ಪರಲೋಕ ರಾಜ್ಯವನ್ನು ಹೊಂದುವ ಕೆಲಸದಲ್ಲಿ ನಿಮ್ಮನ್ನು ಹೊಂದಿಸಿಕೊಳ್ಳಿ. ಯಾವ ಕೆಲಸವನ್ನು ಮಾಡಿದರೂ ಅದರ ಮಧ್ಯದಲ್ಲಿ, ದೇವರ ಕೊನೆಯ ಆಜ್ಞೆಯಾದ ಹೊರಟುಹೋಗಿರಿ; ಸುವಾರ್ತೆಯನ್ನು ಸಾರಿರಿ ಎಂಬ ಉನ್ನತವಾದ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ದೇವರ ರಾಜ್ಯವನ್ನು ಕಟ್ಟಲು ನಿಮ್ಮ ಮಕ್ಕಳನ್ನು ಸಂಪೂರ್ಣವಾಗಿ ಕಳುಹಿಸಿಕೊಡಿ ದೇವರ ಆಶೀರ್ವಾದವನ್ನು ಪಡೆಯಿರಿ.

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ನಮ್ಮ ಮಿಷನರಿಗಳನ್ನು ಬೆಂಬಲಿಸುವ ಕುಟುಂಬಗಳು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel