Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.10.2024
Share:

By Village Missionary Movement

Wednesday, 09-Oct-2024

ಧೈನಂದಿನ ಧ್ಯಾನ(Kannada) – 09.10.2024

 

ತಂದೆ

 

"…ನಿಮ್ಮ ದೇವರಾದ ಕರ್ತನು, ನಿಮ್ಮನ್ನು ತಂದೆ ಮಗನನ್ನು ಹೊತ್ತು ಕೊಳ್ಳುವ ಪ್ರಕಾರ ನೀವು ಹೋದ ಮಾರ್ಗದಲ್ಲೆಲ್ಲಾ ಈ ಸ್ಥಳಕ್ಕೆ ಬರುವ ಪರ್ಯಂತರ ಹೊತ್ತುಕೊಂಡನೆಂದು ನೋಡಿದ್ದೀರಲ್ಲಾ" - ಧರ್ಮೋಪದೇಶಕಾಂಡ 1:31

  

ಒಬ್ಬ ತಂದೆ ತನ್ನ ಮಗನೊಂದಿಗೆ ರಜೆಗಾಗಿ ಒಂದು ಸ್ಥಳಕ್ಕೆ ಹೋಗಿದ್ದರು. ಮಗನ ಜೊತೆ ಅಂಗಡಿ ಬೀದಿಗಳನ್ನೆಲ್ಲ ಸುತ್ತಿ ತನಗೆ ಬೇಕಾದ್ದನ್ನು ಖರೀದಿಸಿ ಊರಾಚೆ ಹೋಗಿ ಪ್ರಕೃತಿಯನ್ನು ಸವಿಯತೊಡಗಿದರು. ಮಗ ಮೋಡವನ್ನು ನೋಡಿ ಕುರಿಯಂತಿದೆ ಡೈನೋಸಾರ್ ಎಂದು ತುಂಬಾ ಇಷ್ಟವಾಗಿ ನೋಡುತ್ತಿದ್ದನು. ನಂತರ ಅವರು ಒಂದು ಸಣ್ಣ ಬೆಟ್ಟವನ್ನು ನೋಡಿ ಅದನ್ನು ಏರಲು ಪ್ರಾರಂಭಿಸಿದರು. ಅವನು ಹಠಾತ್ತನೆ ತಿರುಗಿ, "ಅಪ್ಪಾ ನನ್ನನ್ನು ಹಿಡಿಯಿರಿ" ಎಂದು ಕೈಗಳನ್ನು ಚಾಚಿ ಕೆಳಗೆ ಬಿದ್ದನು. ಇದನ್ನು ಊಹಿಸಿರದ ತಂದೆ ಓಡಿ ಬಂದು ಮಗನನ್ನು ಹಿಡಿದರು. ಆದರೆ ಇಬ್ಬರೂ ಕೆಳಗೆ ಬಿದ್ದರು. ಅಪ್ಪ, ಯಾಕೆ ಹೀಗೆ ಮಾಡಿದೆ? ಎಂದರು. ತಕ್ಷಣ ಮಗ ಹೇಗಾದರೂ ನೀವು ನನ್ನನ್ನು ಹಿಡಿದುಕೊಳ್ಳುತ್ತೀರ ಎಂದು ನನಗೆ ಗೊತ್ತು ಎಂದನು. ಇಗೋ ಏನೂ ಏಟು ಕೂಡ ಬಿದ್ದಿಲ್ಲ ಎನ್ನುತ್ತಾ ನಡೆದನು. 

  

ಹಾಗೆಯೇ ನಮ್ಮ ಪರಲೋಕದ ದೇವರು ಕೂಡ, ಆತನಲ್ಲಿ ನಾವು ಪೂರ್ಣವಾಗಿ ಭರವಸೆಯಿಡಬಹುದು. ಹೌದು, ಆತನು ನಮ್ಮ ಅಗತ್ಯಗಳು ಮತ್ತು ಸಂದರ್ಭಗಳನ್ನು ತಿಳಿದಿದ್ದಾರೆ. ಆದ್ದರಿಂದ ಅವರು ಸರಿಯಾದ ಸಮಯದಲ್ಲಿ ಸರಿಯಾದದ್ದನ್ನು ನೀಡುತ್ತಾರೆ. ನಾವು ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆ. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮಗಾಗಿ ತನ್ನ ಜೀವವನ್ನು ಕೊಟ್ಟು ನಮ್ಮನ್ನು ಪ್ರೀತಿಸಿದರು. ತಂದೆಯು ತನ್ನ ಮಗುವನ್ನು ಹೆಗಲ ಮೇಲೆ ಹೊತ್ತುಕೊಳ್ಳುವಂತೆ, ನಮ್ಮ ದೇವರು ನಮ್ಮನ್ನು ಹೊತ್ತುಕೊಳ್ಳುತ್ತಾರೆ. ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು ಎಂದು ಯೆಶಾಯ 46:4 ರಲ್ಲಿ ಹೇಳುತ್ತಾರೆ. ಹಾಗೆಯೇ ನಾವು ಸಾವಿನ ಅಂಚಿಗೆ ತಲುಪಿದಾಗಲೂ ಆತನ ಕೈ ನಮ್ಮನ್ನು ಮೇಲಕ್ಕೆತ್ತಿ ಸಾವಿನಿಂದ ತಪ್ಪಿಸಿ ಕಾಪಾಡಿದೆ. ಆತನು ನಮ್ಮನ್ನು ತನ್ನ ಕಣ್ಣಿನ ಗುಡ್ಡೆಯಂತೆ ಕಾಪಾಡುತ್ತಾರೆ. ಹಗಲು ರಾತ್ರಿ ಎಂದೆಲ್ಲಾ ನೋಡದೇ ತೂಕಡಿಸದೆ ಕಾಪಾಡುತ್ತಾರೆ. ಅಂತೆಯೇ, ಅರಣ್ಯದಲ್ಲಿ ನಲವತ್ತು ವರ್ಷಗಳ ಕಾಲ ಇಸ್ರಾಯೇಲ್ ಜನರನ್ನು ಕಾಪಾಡುತ್ತಾ ಬಂದರು. ಅವರ ಬಟ್ಟೆಗಳು ಹಳೆಯದಾಗಲೂ ಇಲ್ಲ, ಅವರ ಕಾಲಿನ ಚಪ್ಪಲಿಗಳು ಸವೆಯಲೂ ಇಲ್ಲ. ಹೀಗೆ ದೇವರು ಅವರನ್ನು ಚೆನ್ನಾಗಿ ಕಾಪಾಡುತ್ತಾ ಬಂದರು.

 

ಇದನ್ನು ಓದುತ್ತಿರುವ ಸ್ನೇಹಿತರೇ! ದೇವರು ನಮಗೆ ಅಪ್ಪಾ ತಂದೆಯೇ ಎಂದು ಕರೆಯುವಂತಹ ಪುತ್ರ ಸ್ವೀಕಾರವನ್ನು ಕೊಟ್ಟಿದ್ದಾರೆ. ಆದುದರಿಂದ ಆತನ ಹೆಸರಿನಲ್ಲಿ ನಂಬಿಕೆಯುಳ್ಳವರಾಗಿ ನಾವು ಆತನನ್ನು ತಂದೆಯಾಗಿ ಸ್ವೀಕರಿಸುವಾಗ ಆತನೂ ಸಹ ನಮ್ಮನ್ನು ತನ್ನ ಮಗುವಾಗಿ ಸ್ವೀಕರಿಸುತ್ತಾರೆ. ಸ್ವೀಕರಿಸುವುದು ಮಾತ್ರವಲ್ಲ, ಅಂದಿನಿಂದ ನಮ್ಮನ್ನು ಬಹಳ ಕಾಳಜಿಯಿಂದ ಅಕ್ಕರೆಯಾಗಿ ನಮ್ಮ ಎಲ್ಲಾ ವ್ಯವಹಾರಗಳನ್ನು ಅವರ ಮೇಲೆ ಹೊತ್ತುಕೊಳ್ಳುತ್ತಾರೆ. ನಮ್ಮ ಅಗತ್ಯಗಳನ್ನು ಪೂರೈಸಿ ನಮ್ಮೊಂದಿಗೇ ಇರುತ್ತಾರೆ. ನಮ್ಮನ್ನು ಪರಲೋಕಕ್ಕೆ ಸೇರಿಸುವ ತನಕ ಜೊತೆಗಿದ್ದು ನಡೆಸುತ್ತಾರೆ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ನಮ್ಮ ಡೇ ಕೇರ್ ಸೆಂಟರ್ ನಲ್ಲಿ ಓದುತ್ತಿರುವ ಆದಿವಾಸಿ ಮಕ್ಕಳ ರಕ್ಷಣೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel