By Village Missionary Movement
Saturday, 05-Oct-2024ಧೈನಂದಿನ ಧ್ಯಾನ(Kannada) – 05.10.2024
ತೀರ್ಮಾನ ಎಂಥದ್ದು?
"ದಾನಿಯೇಲನು… ತನ್ನನ್ನು ಅಶುದ್ಧಪಡಿಸಿಕೊಳ್ಳುವದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು;…" - ದಾನಿಯೇಲ 1:8
ಪ್ರೀತಿಯ ದೇವರ ಮಕ್ಕಳೇ, ಒಂದು ಮಂಗವು ಅರಣ್ಯದಲ್ಲಿನ ಒಂದು ಮರದ ಹಣ್ಣನ್ನು ತಿಂದಿತು. ಕೆಲವು ಗಂಟೆಗಳ ನಂತರ, ಕೋತಿಗೆ ಹೊಟ್ಟೆನೋವು ಉಂಟಾಗಿ, ಆತಂಕಕಾರಿಯಾಗಿ ಶೋಚನೀಯವಾಯಿತು. ಆಗ ಅದು ಒಂದು ನಿರ್ಧಾರ ತೆಗೆದುಕೊಂಡಿತು. ನಾನು ಈ ಕಡೆಗೂ ಬರುವುದಿಲ್ಲ. ಈ ಹಣ್ಣನ್ನೂ ತಿನ್ನುವುದಿಲ್ಲ ಎಂದು. ಕೆಲವು ದಿನಗಳು ಕಳೆದವು. ಮಂಗ ಆ ಕಡೆ ಹೋದರೆ ಏನು? ಆ ಹಣ್ಣನ್ನು ಸ್ವಲ್ಪ ತಿಂದರೆ ಏನು? ಎಂದು ಯೋಚಿಸುತ್ತಾ ಆ ಹಣ್ಣನ್ನು ಸ್ವಲ್ಪ ತಿಂದಿತು. ಯಾವ ತೊಂದರೆಯೂ ಆಗಲಿಲ್ಲ. ಆ ದಿನ ಬೇರೆ ಏನೋ ತಿಂದುಬಿಟ್ಟು ಈ ಹಣ್ಣನ್ನು ತಿಂದಿರಬಹುದು ಅದಕ್ಕೇ ಹಾಗಾಯಿತು. ಇವತ್ತು ಈ ಹಣ್ಣನ್ನು ಮಾತ್ರ ತಿನ್ನುತ್ತೇನೆ ಎಂದು ತಿಂದಿತು. ಏನು ನಡೆಯಿತು ಗೊತ್ತಾ? ಕೆಲವೇ ಗಂಟೆಗಳಲ್ಲಿ ಹೊಟ್ಟೆನೋವು ಹೆಚ್ಚಾಗಿ ತುಂಬಾ ಅಪಾಯಕಾರಿ ಸ್ಥಿತಿಗೆ ಹೋಗಿ ನಂತರ ಸತ್ತುಹೋಯಿತು. ಏಕೆಂದರೆ ಅದೊಂದು ವಿಷಪೂರಿತ ಹಣ್ಣಾಗಿತ್ತು.
ಇಲ್ಲಿ ರೂತಳು ಎಂಬ ಮೋವಾಬ್ ಸ್ತ್ರೀಯು ಒಂದು ತೀರ್ಮಾನವನ್ನು ಮಾಡಿದಳು. ರೂತಳು 1:14 - 17 ರಲ್ಲಿ ಎಲ್ಲವನ್ನೂ ಕಳೆದುಕೊಂಡಿರುವ ತನ್ನ ಅತ್ತೆಯೊಂದಿಗೆ ಬರಲು ಒಂದು ತೀರ್ಮಾನ ಮಾಡಿದಳು. ಆ ತೀರ್ಮಾನ ಏನೆಂದರೆ, ಹಿಂತಿರುಗುವುದರ ಬಗ್ಗೆ ಮಾತನಾಡಬಾರದು. ನೀನು ಉಳಿಯುವ ಸ್ಥಳವೇ ನಾನು ಸಹ ಉಳಿಯುವ ಸ್ಥಳ, ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು, ಮರಣವು ಮಾತ್ರ ನಮ್ಮನ್ನು ಅಗಲಿಸದ ಹೊರತು ಬೇರೇನೂ ನಮ್ಮನ್ನು ಅಗಲಿಸಲು ಬಿಡುವುದಿಲ್ಲ ಅಂದಳು. ಇವಳು ತನ್ನ ತೀರ್ಮಾನದ ಪ್ರಕಾರವೇ ಬದುಕಿದಳು. ಸಮೃದ್ಧ ಜೀವನವನ್ನು ಪಡೆದುಕೊಂಡಳು. ಮಾರ್ಕನು 13:13 ರಲ್ಲಿ, "ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು".
ಪ್ರೀತಿಯ ದೇವರ ಮಕ್ಕಳೇ, ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ನಾವು ಮಾಡಿದ ತೀರ್ಮಾನವು ಇಂದು ಯಾವ ಸ್ಥಿತಿಯಲ್ಲಿದೆ. ಬಲವುಳ್ಳದ್ದಾಗಿದೆಯಾ? ಬಲಹೀನಪಡಿಸುವಂಥದ್ದಾಗಿದೆಯಾ? ನಮ್ಮನ್ನು ಯಾವಾಗ ನುಂಗಿಬಿಡೋಣ ಎಂದು ಘರ್ಜಿಸುತ್ತಿರುವ ಸಿಂಹದಂತೆ, ಶತ್ರುವಾಗಿರುವ ಸೈತಾನನು ಪ್ರತಿದಿನ ಗಿಡುಗನಂತೆ ನಮ್ಮ ಸುತ್ತಲೂ ಸುತ್ತುತ್ತಿದ್ದಾನೆ. ಕೋತಿಗೆ, ಆರಂಭಿಕ ತೀರ್ಮಾನವು ಖಚಿತವಾಗಿತ್ತು. ಕಾಲಾನಂತರದಲ್ಲಿ ತೀರ್ಮಾನವು ಬಲಹೀನವಾಗಿ ಮಾರ್ಪಟ್ಟಿತು? ಅಂತ್ಯವೋ ಅದಕ್ಕೆ ದುಃಖವನ್ನು ಉಂಟುಮಾಡಿತು. ಆದರೆ ರೂತಳ ತೀರ್ಮಾನವು ಆರಂಭದಿಂದ ಕೊನೆಯವರೆಗೂ ದೃಢವಾಗಿತ್ತು. ಇಂದು ನಮ್ಮಲ್ಲಿ ಪ್ರತಿಯೊಬ್ಬರ ತೀರ್ಮಾನವೂ ದೃಢವಾಗಿದೆಯಾ? ಖಂಡಿತವಾಗಿಯೂ, ಯೇಸು ಕ್ರಿಸ್ತನಿಂದ ನಮಗೆ ಹೆಚ್ಚು ಪ್ರತಿಫಲ ಉಂಟಾಗುತ್ತದೆ. ಕೊಡಲ್ಪಟ್ಟ ಸೇವೆಯೋ, ಉದ್ಯೋಗವೋ, ವ್ಯಾಪಾರವೋ ಅಥವಾ ಕುಟುಂಬವೋ ದೇವರ ತೀರ್ಮಾದಂತೆ ನಡೆದರೆ ಯಶಸ್ಸು ನಿಶ್ಚಿತ ಮತ್ತು ಬಿಡುಗಡೆ ನಿಜ. ದೇವರಿಗೆ ಮಹಿಮೆಯುಂಟಾಗಲಿ. ಆಮೆನ್.
- Pr. S.A..ಇಮ್ಮಾನುವೇಲ್
ಪ್ರಾರ್ಥನಾ ಅಂಶ:
25,000 ಗ್ರಾಮಗಳಲ್ಲಿ ಸುವಾರ್ತೆ ಸಾರುವ ಯೋಜನೆಗಾಗಿ ಪ್ರಾರ್ಥಿಸುವ ಪ್ರಾರ್ಥನಾ ಗುಂಪುಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482