Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.10.2024
Share:

By Village Missionary Movement

Friday, 04-Oct-2024

ಧೈನಂದಿನ ಧ್ಯಾನ(Kannada) – 04.10.2024

 

Call ಮಾಡಿ

 

"ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ" - ಕೀರ್ತನೆ 50:15

  

ಸ್ಯಾಮ್ ತನ್ನ ನಾಲ್ಕು ವರ್ಷದ ಮಗಳು ಸಾರಾಗೆ ಪ್ರತಿ ರಾತ್ರಿ ಮಲಗುವ ಮೊದಲು ಸ್ವಾರಸ್ಯವಾಗಿ ಬೈಬಲ್ ಕಥೆಗಳನ್ನು ಹೇಳುವುದುಂಟು, ಸಾರಾ ಕಥೆಯನ್ನು ಕೇಳುತ್ತಾ ನಿದ್ರಿಸುತ್ತಾಳೆ. ಅದೇ ದಿನ, ಸ್ಯಾಮ್ ಯೋಸೇಫನ ಜೀವನದ ಘಟನೆಗಳನ್ನು ವಿವರಿಸಲು ಪ್ರಾರಂಭಿಸಿದರು. “ಯೋಸೆಫನು ತನ್ನ ತಂದೆಗೆ ಮುದ್ದು ಮಗ. ಹತ್ತು ಮಂದಿ ಸಹೋದರರು ಮತ್ತು ಒಬ್ಬ ಕಿರಿಯ ಸಹೋದರ ಇದ್ದನು. ಅವನು ತನ್ನ ತಂದೆಗೆ ವಿಧೇಯನಾಗುತ್ತಿದ್ದ. ದೇವರಿಗೆ ಭಯಪಡುವವನಾಗಿದ್ದನು. ಅಣ್ಣಂದಿರು ಏನೇ ತಪ್ಪು ಮಾಡಿದರೂ, ಯೋಸೇಫನು ಹಾಗೆಯೇ ಅದನ್ನು ತನ್ನ ತಂದೆಗೆ ಹೇಳಿಬಿಡುತ್ತಿದ್ದದರಿಂದ ಎಲ್ಲರೂ ಯೋಸೇಫನನ್ನು ದ್ವೇಷಿಸುತ್ತಿದ್ದರು. ಒಂದು ದಿನ ತನ್ನ ಸಹೋದರರನ್ನು ಮತ್ತು ಕುರಿಗಳ ಹಿಂಡನ್ನು ನೋಡಿಕೊಂಡು ಬರಲು ದೂರದ ಪಟ್ಟಣಕ್ಕೆ ಕಳುಹಿಸಿದರು. ಅಸೂಯೆ ಪಟ್ಟ ಸಹೋದರರು ಅವನನ್ನು ಹೊಡೆದು ನೀರಿಲ್ಲದ ಆಳವಾದ ಗುಂಡಿಯಲ್ಲಿ ಹಾಕಿಬಿಟ್ಟು ಹೊರಟುಹೋದರು". ಎಂದಾಗ ಸಾರಾ “ಅಪ್ಪಾ ಯೋಸೇಫನು ಯಾಕೆ ತಕ್ಷಣ ತನ್ನ ತಂದೆಗೆ ಕಾಲ್ ಮಾಡಿ ಹೇಳಲಿಲ್ಲ? ಎಂದು ಪ್ರಶ್ನಿಸಿದಾಗ ಆ ಪ್ರಶ್ನೆಗೆ ಸ್ಯಾಮ್‌ನ ಕಣ್ಣುಗಳು ಆಶ್ಚರ್ಯದಿಂದ ಅರಳಿದವು. ಅವನು ಹುಬ್ಬು ಮೇಲಕ್ಕೆತ್ತಿ ತನ್ನ ಮಗಳ ಬುದ್ಧಿವಂತಿಕೆಗೆ ಆಶ್ಚರ್ಯಚಕಿತನಾದನು.   

  

ಹೌದು! ಸಾರಾಳ ಪ್ರಶ್ನೆಗೆ ಅರ್ಥ ಇದೆ. ಅದು ನೂರಕ್ಕೆ ನೂರು ಸತ್ಯ ಅಲ್ಲವೇ! ಯಾವ ಮಗುವಾದರೂ ತನಗೆ ಆಪತ್ತು ಸಂಭವಿಸುವ ಕ್ಷಣದಲ್ಲಿ ಗಟ್ಟಿಯಾಗಿ ತನ್ನ ತಂದೆಯನ್ನು ಕರೆಯುವ ಹಕ್ಕನ್ನು ಪಡೆದಿದೆ ಎಂಬ ಪ್ರಜ್ಞೆ ಮತ್ತು ಸತ್ಯ ನಮ್ಮನ್ನು ಬೆರಗುಗೊಳಿಸುತ್ತದಲ್ಲವೇ! ಹೌದು, ನಮಗೆ ಒಬ್ಬ ಪರಮ ತಂದೆಯಾದ ಯೇಸು ಇದ್ದಾರಲ್ಲವೇ, ಅವರು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಆತನನ್ನು ಕರೆಯುವ ಹಕ್ಕನ್ನು ನಮಗೆ ನೀಡಿದ್ದಾರೆ. ಕೀರ್ತನೆಗಳು 91:15 ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು" ಎಂದು ಬರೆಯಲ್ಪಟ್ಟಿರುವ ಮಾತು ನಮ್ಮನ್ನು ಬಲಪಡಿಸುತ್ತದಲ್ಲವೇ! ಫಿಲಿಪ್ಪಿಯವರಿಗೆ 4:6 ರಲ್ಲಿ "ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ". ಎಂದು ನಾವು ತಿಳಿಯಬಹುದು.

 

ಪ್ರಿಯರೇ! ನನಗೆ ಯಾರೂ ಇಲ್ಲ ಎಂದು ಬೇಸರಗೊಂಡು, ಚಿಂತಿಸುತ್ತಿದ್ದೀರಾ? ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಗಟ್ಟಿಯಾಗಿ ಕೂಗಿದ ಬಾರ್ತಿಮಾಯನೆಂಬ ಹುಟ್ಟು ಕುರುಡನ ಬಳಿ, ನಿನಗೆ ಏನು ಬೇಕು? ಎಂದು ಕೇಳಿದ ಯೇಸುವಿನ ಬಳಿ, ಆತನು ಕೇಳಿದ ವಿಷಯ ನಮ್ಮನ್ನು ಬೆರಗುಗೊಳಿಸುತ್ತದೆ. ಹೌದು! ಅವನು "ನನಗೆ ಕಣ್ಣು ಬರುವಂತೆ ಮಾಡಬೇಕು" ಎಂದನು. ಯೇಸು, "ನಿನಗೆ ಕಣ್ಣು ಬರಲಿ" ಎಂದು ಹೇಳಿದರು. ಅವನು ದೊಡ್ಡ ಕಾರ್ಯವನ್ನು ಕೇಳಿದನು. ಆತನಿಗೆ ದೃಷ್ಟಿ ಕೊಡಲು ಸಾಧ್ಯ ಎಂದು ನಂಬಿಕೆಯಿಂದ ಕೇಳಿದನು. ಪಡೆದುಕೊಂಡನು. (ಲೂಕ 18: 41, 42) ಆತನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ; "ಕೇಳಿರಿ ನಿಮಗೆ ಕೊಡಲ್ಪಡುವುದು." ಕರೆಯಿರಿ. ಉತ್ತರಿಸುವರು. ದೇವರಿಗೆ ಮಹಿಮೆ! ಆಮೆನ್!!

- Mrs. ಎಮೀಮಾ ಸೌಂದರ್ ರಾಜನ್ 

 

ಪ್ರಾರ್ಥನಾ ಅಂಶ:

25,000 ಹಳ್ಳಿಗಳಲ್ಲಿ ಸುವಾರ್ತೆ ಸಾರಲು ಅಗತ್ಯವಿರುವ ಹಸ್ತಪ್ರತಿಗಳು ಮತ್ತು ಸಂಪೂರ್ಣ ಬೈಬಲ್‌ಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino