Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.10.2024
Share:

By Village Missionary Movement

Thursday, 03-Oct-2024

ಧೈನಂದಿನ ಧ್ಯಾನ(Kannada) – 03.10.2024

 

ತ್ರಿಯೇಕ ದೇವರ ಆಶೀರ್ವಾದ

 

"ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ" - 2 ಕೊರಿಂಥ 13:14

  

ಸತ್ಯವೇದದ ಪ್ರಕಾರ, "ಒಂದೇ ದೇವರು" ಎಂಬ ಪದವು ತಂದೆ, ಮಗ ಮತ್ತು ಪವಿತ್ರಾತ್ಮವನ್ನು ಪ್ರತ್ಯೇಕವಾಗಿ ಸೂಚಿಸುತ್ತದೆ. ಆದ್ದರಿಂದ ನಮ್ಮ ದೇವರನ್ನು ತ್ರಿಯೇಕ ಎಂದು ಕರೆಯುತ್ತಾರೆ. ಮೇಲಿನ ವಾಕ್ಯವನ್ನು ಪ್ರಪಂಚದಾದ್ಯಂತ ಪ್ರತಿ ಆರಾಧನೆ ಮತ್ತು ಪ್ರಾರ್ಥನಾ ಕೂಟದ ಕೊನೆಯಲ್ಲಿ ತ್ರಿಯೇಕ ದೇವರ ಆಶೀರ್ವಾದ ಪ್ರಾರ್ಥನೆಯಾಗಿ ಪಠಿಸಲಾಗುತ್ತದೆ. ಅನೇಕರು ಈ ಆಶೀರ್ವಾದದ ಪ್ರಾರ್ಥನೆಯನ್ನು ನಿರ್ಲಕ್ಷಿಸುತ್ತಾರೆ ಮತ್ತು ಹೊರಡುವುದರ ಮೇಲೆಯೇ ಗಮನಹರಿಸುತ್ತಾರೆ. ನಾವು ಇದನ್ನು ಸರಿಪಡಿಸಬೇಕಾಗಿದೆ. ನಾವು ತ್ರಿಯೇಕ ದೇವರನ್ನು ನಂಬುತ್ತೇವೆ ಎಂಬುದನ್ನು ಅರಿಕೆ ಮಾಡಿ ಮತ್ತು ತ್ರಿಯೇಕ ದೇವರ ಆಶೀರ್ವಾದವನ್ನು ಪಡೆದುಕೊಂಡು ಹೋಗುವುದರಲ್ಲಿ ಜಾಗರೂಕರಾಗಿರೋಣ.  

  

ದೇವರು ನಮ್ಮ ಪರಮತಂದೆ. ಅವರು ತನ್ನ ಮಕ್ಕಳಿಗೆ ಎಲ್ಲಾ ಒಳ್ಳೆಯದನ್ನು ಮತ್ತು ಅಗತ್ಯವಿರುವ ಎಲ್ಲವನ್ನೂ ಕೊಡುತ್ತಾರೆ. ಕರುಣಿಸುತ್ತಾರೆ, ಕಾಪಾಡುತ್ತಾರೆ, ಮುನ್ನಡೆಸುತ್ತಾರೆ, ಹೊರುತ್ತಾರೆ, ನಿರ್ವಹಿಸುತ್ತಾರೆ, ತಪ್ಪಿಸುತ್ತಾರೆ, ತಮ್ಮ ರಾಜ್ಯವನ್ನು ನೀಡಲು ಸಿದ್ಧವಾಗಿದ್ದಾರೆ. ಈ ದೇವರ ಪ್ರೀತಿ ಎಷ್ಟು ದೊಡ್ಡದು! ನಾವು ಅದನ್ನು ನಿರ್ಲಕ್ಷಿಸಬಹುದೇ? ಮಗನಾದ ಯೇಸು ಕ್ರಿಸ್ತನ ಕೃಪೆಯ ಮೂಲಕ ರಕ್ಷಣೆಯು ಸಿಗುತ್ತದೆ. ಆತನ ಕೃಪೆಯಿಂದ ಮಾತ್ರವೇ ನಾವು ರಕ್ಷಣೆಯಲ್ಲಿ ಕೊನೆಯವರೆಗೂ ನೆಲೆಗೊಳ್ಳಲು ಸಾಧ್ಯ. ಆದುದರಿಂದ ಅನಂತವಾದ ಆತನ ಕೃಪೆಯು ಜೀವಕ್ಕಿಂತ ದೊಡ್ಡದು. ನಾವು ಈ ಕೃಪೆಯನ್ನು ಕಳೆದುಕೊಳ್ಳಬಹುದೇ? 

  

ನಂತರ, ರಕ್ಷಣೆಗೆ ನೇರವಾಗಿ ನಮ್ಮನ್ನು ಮುನ್ನಡೆಸುವವರು ಪವಿತ್ರಾತ್ಮನು. ನಮ್ಮನ್ನು ಪವಿತ್ರಗೊಳಿಸುವವರು, ನಮಗೆ ಬೋಧಿಸುವವರು, ಬುದ್ಧಿವಂತಿಕೆ, ತಿಳುವಳಿಕೆ, ಸಲಹೆ, ಶಕ್ತಿ, ಜ್ಞಾನ ಮತ್ತು ದೇವರ ಭಯವನ್ನು ದಯಪಾಲಿಸುವವರು. ನಮ್ಮನ್ನು ಶುದ್ಧೀಕರಿಸುವ ಮತ್ತು ನಮ್ಮನ್ನು ಪವಿತ್ರರನ್ನಾಗಿ ಮಾಡುವವರು. ನಮ್ಮೊಂದಿಗೆ ಮಾತನಾಡುವವರು, ಸೇವೆ ಮಾಡಲು ನಮ್ಮನ್ನು ಬಲಪಡಿಸುವವರು, ನಮಗೆ ವರಗಳು ಮತ್ತು ಶಕ್ತಿಯನ್ನು ನೀಡುವವರು. ಮುನ್ನಡೆಸುವವರು. ಆತನ ಪ್ರಸನ್ನತೆ ನಮಗೆ ಎಷ್ಟು ಅಗತ್ಯ?

 

ಪ್ರಿಯರೇ! ಮುಂದಿನ ದಿನಗಳಲ್ಲಿ ಈ ಆಶೀರ್ವಾದ ಪ್ರಾರ್ಥನೆಯನ್ನು ಸಲ್ಲಿಸುವಾಗಲೆಲ್ಲಾ, ನಾವು ಉದಾಸೀನ ಮಾಡದೆ ಪ್ರಾರ್ಥಿಸೋಣ "ತ್ರಿಯೇಕ ದೇವರೇ, ನಿಮ್ಮ ಪ್ರೀತಿ, ಕೃಪೆ ಮತ್ತು ಐಕ್ಯತೆ ಎಂಬ ಆಶೀರ್ವಾದಗಳು ಯಾವಾಗಲೂ ನನ್ನೊಂದಿಗೆ ಇರಲಿ" ಎಂದು ಆಸಕ್ತಿಯಿಂದ ಪ್ರಾರ್ಥಿಸಿ ಹೊರಡೋಣ. ತ್ರಿಯೇಕ ದೇವರ ಆಶೀರ್ವಾದವು ನಮ್ಮನ್ನು ತುಂಬಿಸಿ ಮುನ್ನಡೆಸಲಿ. ಆಮೆನ್.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

25,000 ಹಳ್ಳಿಗಳಲ್ಲಿ ಸುವಾರ್ತೆ ಸಾರಲು ಹೋಗುವ ಸೇವಕರ ಪ್ರಯಾಣದ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş