Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.04.2021
Share:

By Village Missionary Movement

Thursday, 29-Apr-2021

ಧೈನಂದಿನ ಧ್ಯಾನ(Kannada) – 29.04.2021

ಮಾತಿನಲ್ಲಲ್ಲ ಕ್ರಿಯೆಯಲ್ಲಿ

"ದೇವರ ರಾಜ್ಯವು ಮಾತಿನಲ್ಲಿ ಇಲ್ಲ, ಶಕ್ತಿಯಲ್ಲಿಯೇ ಆಧಾರಗೊಂಡಿದೆ." - 1ಕೊರಿಂಥ 4:20

ಒಂದು ಗ್ರಾಮದಲ್ಲಿ ಜೀವಿಸುತ್ತಿದ್ದ ಭಕ್ತಿಯುಳ್ಳ ಸಹೋದರರೊಬ್ಬರು ದೇವರಿಗಾಗಿ ಸಾಕ್ಷಿಯಾಗಿ ಜೀವಿಸುವ ವಿಧವಾಗಿ ತನ್ನ ಶರ್ಟ್ ನ ಮುಂದೆ ಹಿಂದೆ ವಾಕ್ಯಗಳನ್ನು ನೇತಾಕಿಕೊಂಡು ರಸ್ತೆಯ ಮೇಲೆ ನಡೆಯುತ್ತಾ ಹೋಗುತ್ತಿದ್ದನು. ಅದರ ನಿಮಿತ್ತ ವಾಗಿ ಗ್ರಾಮದಲ್ಲಿ ಅನೇಕರು ಆತನನ್ನು ಹುಚ್ಚ ಎಂದು ಕರೆಯುತ್ತಿದ್ದರು. ಕೆಲ ವರ್ಷಗಳ ನಂತರ ವಾಕ್ಯಕ್ಕೆ ಬದಲಾಗಿ ತನ್ನ ವಸ್ತ್ರದ  ಮುಂಭಾಗದಲ್ಲಿ ನಾನು ಕ್ರಿಸ್ತನಿಗಾಗಿ ಹುಚ್ಚನು ಎಂದು ದೊಡ್ಡದಾಗಿ ಬರೆದಿದ್ದರು. ತನ್ನ ವಸ್ತ್ರದ ಹಿಂಭಾಗದಲ್ಲಿ ನೀವು ಯಾರಿಗಾಗಿ ಹುಚ್ಚರಾಗಿ ಇದ್ದೀರ ಎಂದು ದೊಡ್ಡದಾಗಿ ಬರೆದಿದ್ದರು. ಈಗ ಆತನನ್ನು ಗೇಲಿ ಮಾಡಿದವರು ಆ ಪ್ರಶ್ನೆಗೆ ಉತ್ತರವನ್ನು ಆಲೋಚಿಸಲು ಪ್ರಾರಂಭಿಸಿದರು. ಆತನು ತನ್ನ ಶರ್ಟ್ ಗೆ ನೇತಾಕಿಕೊಂಡಿದ್ದ ವಾಕ್ಯಕ್ಕೆ ಅನುಗುಣವಾಗಿ ಜೀವಿಸುತ್ತಿರುವುದನ್ನು ಅನೇಕರು ನೋಡಿ ಆತನ ಮೂಲಕ ಯೇಸುಕ್ರಿಸ್ತನನ್ನು ನಂಬಿದರು.

ಪೌಲನು ದೇವರ ಬಗ್ಗೆ ಪ್ರಕಟಿಸಿದಾಗ ಕೆಲವು ಸ್ಥಳಗಳಲ್ಲಿ ಆತನನ್ನು ಹುಚ್ಚ ಎಂದು ಕರೆದರು ಆತನು ಮಾತ್ರ ದುಃಖಿಸಲಿಲ್ಲ. ಪೌಲನು ಯಾವ ರೀತಿಯಾಗಿ ಜನರಿಗೆ ಪ್ರಕಟಿಸಿದರೋ ಅದೇ ಪ್ರಕಾರವಾಗಿ ಅವರೂ ಜೀವಿಸಿದರು. ಆದ್ದರಿಂದ ಆತನು ಅನೇಕ ಪತ್ರಿಕೆಗಳನ್ನು ಬರೆದು ಅನೇಕ ಪ್ರಾಂತ್ಯಗಳಲ್ಲಿ ಸುವಾರ್ತೆಯನ್ನು ಪ್ರಕಟಿಸಲು ಸಾಧ್ಯವಾಯಿತು. ಹಾಗೆಯೇ ಸಮುವೇಲನು ಕೂಡ ದೇವರ ಮಾತಿನಂತೆಯೇ ಜೀವಿಸುತ್ತಿದ್ದರು. ಆತನು ದೊಡ್ಡ ಪ್ರವಾದಿಯಾಗಿ ಇಸ್ರಾಯೇಲ್ ಜನರಿಗೆ ಸಲಹೆಗಳನ್ನು ಹೇಳುತ್ತಾ ನಡೆಸುತ್ತಿದ್ದರು. ಆತನ ವೃದ್ಧಾಪ್ಯ ಸ್ಥಿತಿಯಲ್ಲಿಯೂ ಅನ್ಯಾಯ ಮಾಡಲಿಲ್ಲ, ಯಾವ ಕೇಡು ಮಾಡಲಿಲ್ಲ, ಯಾವುದೇ ರೀತಿಯ ಅಪರಾಧವನ್ನು ಮಾಡಲಿಲ್ಲ ಎಂದು ಇಸ್ರಾಯೇಲ್ ಜನರು ಸಮುವೇಲನ ಬಗ್ಗೆ ಒಳ್ಳೆಯ ಸಾಕ್ಷಿಯನ್ನು ಕೊಟ್ಟರು. ಆತನ ಜೀವನವನ್ನು ನೋಡಿದ ಇಸ್ರಾಯೇಲ್ ಜನರು, ಅರಸರು   ಆತನ ಮಾತುಗಳಿಗೆ ವಿಧೇಯರಾಗಿ ನಡೆದುಕೊಂಡರು. ಸಮುವೇಲನ ಮಾತು ದೇವರ ಮಾತಾಗಿ  ಜನರು ನಂಬಿದರು.

ಪ್ರಿಯರೇ! ಮಾತಿಗಿಂತ ಕ್ರಿಯೆಯು ಬಹು ಬೆಲೆಯುಳ್ಳದ್ದು. ನೀವು ಮಾತನಾಡುವವರಾಗಿ ಮಾತ್ರ ಇರದೆ ಕ್ರಿಯೆಮಾಡುತ್ತಾ ಜೀವಿಸುವವರಾಗಿ ಕಾಣಿಸಿರಿ. ಶಿಷ್ಯರು ಕ್ರಿಸ್ತನಂತೆ ಜೀವಿಸಲು ಪ್ರಾರಂಭಿಸಿದಾಗಲೇ ತಾವು ಕ್ರೈಸ್ತರೆಂಬ ಹೆಸರು ಬಂತು. ಯೇಸು ಕೂಡ ಮಾತನಾಡುವವರಾಗಿ ಮಾತ್ರವಲ್ಲ, ಮೂಲ ಮಾದರಿಯಾಗಿ ಜೀವಿಸಿ ತೋರಿಸಿ ಹೋದರು. ನಿಮ್ಮ ಜೀವನವನ್ನು ನೋಡಿ ಅಕ್ಕಪಕ್ಕದವರು, ನಿಮ್ಮ ಕುಟುಂಬದಲ್ಲಿ ಇರುವವರು ನೀವು ಕ್ರೈಸ್ತರೆಂದು ಸಾಕ್ಷಿ ಕೊಡುತ್ತಾರಾ? ಯೋಚಿಸೋಣ. ಪರಲೋಕದಲ್ಲಿ ನಮ್ಮ ಕ್ರಿಯೆಗಳಿಗೇ ಫಲ, ನಮ್ಮ ಕ್ರಿಯೆಗಳೇ ಮಾತನಾಡುತ್ತದೆ. ನಮ್ಮ ನಡತೆಯಲ್ಲಿ ಗಮನವುಳ್ಳವರಾಗಿ ಇರೋಣ. ನಮ್ಮನ್ನು ನೋಡುವ ಕಣ್ಣುಗಳು ನಮ್ಮಲ್ಲಿ ಕ್ರಿಸ್ತನನ್ನು ನೋಡಲಿ. 
-    Y. ಗುಣಶೀಲನ್

ಪ್ರಾರ್ಥನಾ ಅಂಶ:-
ಅನೇಕ ಕಾರ್ಯಗಳಲ್ಲಿ ದಾಸತ್ವಕ್ಕೆ ಗುರಿಯಾಗಿರುವವರು peace centre ನ ಮೂಲಕ  ಬಿಡುಗಡೆ ಹೊಂದಿಕೊಂಡು ಹೋಗುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet