By Village Missionary Movement
Wednesday, 02-Oct-2024ಧೈನಂದಿನ ಧ್ಯಾನ(Kannada) – 02.10.2024
ಮದಲಿಂಗನು ಬಂದುಬಿಟ್ಟರು.
"ಅವರು ಕೊಂಡುಕೊಳ್ಳಲಿಕ್ಕೆ ಹೋದಾಗ ಮದಲಿಂಗನು ಬಂದನು;…" – ಮತ್ತಾಯ 25:10
ಒಂದು ಉದ್ಯೋಗ ಸಂದರ್ಶನಕ್ಕೆ ಹೋಗಬೇಕಾದರೆ ಸ್ವಲ್ಪ ತಯಾರಿ ಬೇಕಾಗುತ್ತದೆ. ಅಧ್ಯಯನ ಮಾಡಿದ ದಾಖಲೆಗಳು, ಫೋಟೊಕಾಪಿಗಳು, ಗುರುತಿನ ಚೀಟಿ ಮುಂತಾದ ವಿವಿಧ ಫೈಲ್‌ಗಳನ್ನು ಒಯ್ಯುವುದು ಬಹಳ ಮುಖ್ಯ. ಮತ್ತು ನೀವು ಪ್ರಮುಖ ವ್ಯಕ್ತಿಯನ್ನು ಭೇಟಿಯಾಗಲು ಬಯಸಿದರೆ, ನೀವು ಆ ವ್ಯಕ್ತಿಯನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದಿದ್ದರೂ, ಅವರ ಕೆಳಗಿನ ಜನರನ್ನು ಸಂಪರ್ಕಿಸುವುದು ವಾಡಿಕೆಯಾಗಿದೆ, ಮತ್ತು ಆ ವ್ಯಕ್ತಿಯನ್ನು ಭೇಟಿ ಮಾಡಲು ಸ್ಥಳ, ಸಮಯ ಮತ್ತು ಅವಧಿಯಂತಹ ಎಲ್ಲವನ್ನೂ ಪಟ್ಟಿ ಮಾಡಿ ಸಿದ್ಧವಾಗುವುದು ಸಹಜ. ಇದು ಸಾಮಾನ್ಯವಾಗಿ ಜಗತ್ತಿನಲ್ಲಿ ನಡೆಯುವ ಪೂರ್ವಸಿದ್ಧತಾ ಕೆಲಸ. ಅಂತೆಯೇ, ಒಂದು ದಿನ ನಾವು ಖಂಡಿತವಾಗಿಯೂ ತನ್ನ ವಾಕ್ಯದಿಂದ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರನ್ನು ಭೇಟಿಯಾಗುತ್ತೇವೆ.
ಸತ್ಯವೇದದಲ್ಲಿ ಮದಲಿಂಗನನ್ನು ಭೇಟಿಯಾಗಲು ಎರಡು ರೀತಿಯ ಜನರಿದ್ದರು. ಗುಂಪಿನಲ್ಲಿ 5 ಜನರು ಬುದ್ಧಿವಂತರು ಮತ್ತು ಇತರ 5 ಜನರು ಬುದ್ಧಿಹೀನರು. ಬುದ್ಧಿವಂತರು ತಮ್ಮ ದೀಪಗಳೊಂದಿಗೆ ತಮ್ಮ ಪಾತ್ರೆಗಳಲ್ಲಿ ಎಣ್ಣೆಯನ್ನು ತೆಗೆದುಕೊಂಡರು. ಬುದ್ಧಿಯಿಲ್ಲದವರು ತಮ್ಮ ದೀಪಗಳನ್ನು ಮಾತ್ರ ತೆಗೆದುಕೊಂಡು ಹೋದರು. ಅವರು ಎಣ್ಣೆಯನ್ನು ಸಹ ಒಯ್ಯಲಿಲ್ಲ. ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು. ಆ ಸಮಯದಲ್ಲಿ ಬುದ್ಧಿಹೀನರು ಬುದ್ಧಿವಂತೆಯರಿಗೆ-- ನಿಮ್ಮ ಎಣ್ಣೆಯಲ್ಲಿ ನಮಗೆ ಕೊಡಿರಿ; ಯಾಕಂದರೆ ನಮ್ಮ ದೀಪಗಳು ಆರಿಹೋಗಿವೆ ಅಂದರು. ಬುದ್ಧಿವಂತೆಯರು ಪ್ರತ್ಯುತ್ತರ ವಾಗಿ ನೀವು ಮಾರು ವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡು ಕೊಳ್ಳಿರಿ ಅಂದರು. ಸಿದ್ಧವಾಗಿ ದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೋದರು.
ಪ್ರಿಯರೇ! ಈ ಎರಡು ರೀತಿಯ ಕೂಟಗಳಲ್ಲಿ ನಾವು ಯಾರಂತೆ ಇದ್ದೇವೆ? ನಾವು ಸಿದ್ಧರಾಗಿ ಪವಿತ್ರರಾಗಿ ಕಾಣಲ್ಪಟ್ಟರೆ , ಮದಲಿಂಗನೊಂದಿಗೆ ಹೋಗುತ್ತೇವೆ. ಅಥವಾ ನಾಳೆಗೆ ಎಂದು ಪವಿತ್ರತೆಯನ್ನು ಮುಂದೂಡಿ, ನಾನು ಯಾರು ಗೊತ್ತಾ? ನಾನು 50 ವರ್ಷದ ವಿಶ್ವಾಸಿ, ನಾನು ಸೇವಕ, ಚರ್ಚ್‌ಗೆ ಅಧಿಕ ಕಾಣಿಕೆ ಕೊಡುವುದರಲ್ಲಿ ನಾನೇ ಮೊದಲು, ನಾನು ಚರ್ಚ್‌ನಲ್ಲಿ ದೊಡ್ಡ ಸ್ಥಾನವನ್ನು ಹೊಂದಿದ್ದೇನೆ ಎಂದೆಲ್ಲಾ ಹೇಳಿ ಸಿದ್ಧವಾಗಿಬಿಡಲು ಸಾಧ್ಯವಿಲ್ಲ. ಆದರೆ ನಾವು ಪವಿತ್ರರಾಗಿದ್ದರೆ ಮಾತ್ರವೇ ಮದಲಿಂಗನು ಬರುವಾಗ ಅವರ ಜೊತೆ ಹೋಗಬಹುದು. ಆದ್ದರಿಂದ ನಾವು ಪ್ರತಿದಿನವೂ ಪವಿತ್ರವಾಗಿರೋಣ. ಪರಿಶುದ್ಧರೊಂದಿಗೆ ಪರಲೋಕಕ್ಕೆ ಹೋಗೋಣ. ಹಲ್ಲೇಲೂಯಾ!
- Bro. ವಿಲಿಯಮ್ಸ್
ಪ್ರಾರ್ಥನಾ ಅಂಶ:
25,000 ಹಳ್ಳಿಗಳಲ್ಲಿ ಸುವಾರ್ತೆ ಸಾರಲು ದೇವರು ತೆರೆದ ಬಾಗಿಲನ್ನು ಆಜ್ಞಾಪಿಸಲಿ ಎಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482