By Village Missionary Movement
Tuesday, 01-Oct-2024ಧೈನಂದಿನ ಧ್ಯಾನ(Kannada) – 01.10.2024
ಅಬೀಗೈಲಳು
"ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು" - ಜ್ಞಾನೋಕ್ತಿ 15:1
ಬೆಳಗಾಗುವ ಮೊದಲು ನಾಬಾಲನನ್ನು ಅವನಿಗಿದ್ದ ಎಲ್ಲವನ್ನೂ ಸಂಪೂರ್ಣವಾಗಿ ನಾಶಮಾಡಬೇಕೆಂದು ಬಹು ಕೋಪದಿಂದ ಹೊರಟ ದಾವೀದನನ್ನು ತಡೆಯಲು ಯಾರಿಂದ ಸಾಧ್ಯ? ದಾವೀದನು ಮಾತ್ರವೇನಾ? ದಾವೀದನೊಂದಿಗೆ ಬಂದ 400 ಜನರಿರುವ ದೊಡ್ಡ ಗುಂಪಿನೊಂದಿಗೆ ಬಂದ ಪ್ರತಿಯೊಬ್ಬರನ್ನು ಹೇಗೆ ಸಮಾಧಾನ ಪಡಿಸುವುದು? ಅಬೀಗೈಲಳೆಂಬ ಮಹಿಳೆ ಒಬ್ಬಂಟಿಯಾಗಿ ಅವರನ್ನು ಸಮಾಧಾನಪಡಿಸಿದಳು ಎಂದು ಓದುವಾಗ ಆಶ್ಚರ್ಯವಾಗಿದೆಯಲ್ಲವೇ? ಇಂದಿನ ಸಂದೇಶದಲ್ಲಿ ದೇವರು ತನ್ನ ಕ್ಷೇತ್ರದಲ್ಲಿ ದೊಡ್ಡ ಕಾರ್ಯಗಳನ್ನು ಮಾಡಲು ದುರ್ಬಲ ಪಾತ್ರೆಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನೋಡಬಹುದು.
ಅಬೀಗೈಲಳು ಈ ಹೆಸರಿನ ಅರ್ಥ "ಸಂತೋಷಕ್ಕೆ ಪಾತ್ರರು" ಎಂಬುದಾಗಿದೆ. ಆದರೆ ಅವಳ ದುಷ್ಟ ಪತಿ ನಾಬಾಲನಿಂದಾಗಿ ಅವಳು ಸಂತೋಷವಿಲ್ಲದೇ ಇದ್ದಿರಬಹುದು. ಆದರೆ ಆಕೆ ಬುದ್ಧಿಯುಳ್ಳ ಸ್ತ್ರೀಯಾಗಿ ಕಾಣಲ್ಪಟ್ಟಳು. ತನ್ನ ಪತಿ ನಾಬಾಲನು ದಾವೀದನಿಗೆ ಮಾಡಿದ್ದನ್ನು ತಿಳಿದುಕೊಂಡ ಅಬೀಗೈಲಳು ಗಾಬರಿಗೊಂಡು ದಾವೀದನೊಂದಿಗೆ ಸಮಾಧಾನಕ್ಕಾಗಿ ತ್ವರಿತವಾಗಿ ಕಾರ್ಯ ಮಾಡಿದಳು. ಮೊದಲಿಗೆ ಅವಳು ಆತಿಥ್ಯದ ಮನೋಭಾವದಲ್ಲಿ ಸೇವಕರನ್ನು ತನ್ನ ಮುಂದೆ ಕಳುಹಿಸುವ ಮೂಲಕ ದಾವೀದನನ್ನು ಭೇಟಿಯಾಗುತ್ತಾಳೆ, ಅಂದರೆ ದಾರಿಯಲ್ಲಿ ಔತಣ. ಕತ್ತೆಗಳಿಂದ ಬಂದವರು ಯಾರು? ಯಾಕೆ ತನಗೆ ಆಹಾರ ಮತ್ತು ಸಾಮಾನುಗಳನ್ನು ನೀಡುತ್ತಿದ್ದಾರೆ ಎಂದು ದಾವೀದನು ಯೋಚಿಸುತ್ತಿರುವಾಗಲೇ, ಅಬಿಗೈಲಳು ದಾವೀದನ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದಳು. ತನ್ನ ಮುಂದೆ ಸಾಷ್ಟಾಂಗವಾಗಿ ಬಿದ್ದ ಮಹಿಳೆ ನಾಬಾಲನ ಹೆಂಡತಿ ಅಬಿಗೈಲಳು ಎಂದು ಗುರುತಿಸಿಕೊಳ್ಳುವ ಮೊದಲೇ ಅಬಿಗೈಲಳು ತನ್ನ ನಿಧಾನವಾದ, ಸೌಮ್ಯವಾದ ಮಾತುಗಳಿಂದ ದಾವೀದನ ಕಠಿಣ ಹೃದಯವನ್ನು ಮೃದುಗೊಳಿಸಿದಳು, ಅವಳ ಮಾತುಗಳು ಕೇವಲ ಪದಗಳಲ್ಲ. ಅದರಲ್ಲಿ ದೇವರ ಸತ್ಯ ಮತ್ತು ಕೃಪೆ ಕಂಡುಬಂದಿತು. ಅಬೀಗೈಲಳ ನಡವಳಿಕೆ ದಾವೀದನನ್ನು ಮಾತ್ರವಲ್ಲದೆ ಜೊತೆಯಲ್ಲಿ ಬಂದ ಎಲ್ಲರನ್ನೂ ಶಾಂತಗೊಳಿಸಿತು ಎಂದು ಹೇಳಿದರೂ ಸಾಲುವುದಿಲ್ಲ. ಪ್ರೀತಿಯಿಂದ ಕೂಡಿದ ಆತಿಥ್ಯ, ವಿನಯದಿಂದ ತುಂಬಿದ ಹೃದಯ, ಮತ್ತು ಸೌಮ್ಯತೆಯಿಂದ ತುಂಬಿದ ನಿಧಾನ ಮಾತುಗಳು, ಇವೆಲ್ಲವೂ ದಾವೀದನಲ್ಲಿ ಕಂಡುಬಂದ ಪ್ರತೀಕಾರ ರಕ್ತ ಸುರಿಸಲು ಬಯಸುವ ಕೊಲೆಯ ಪ್ರೇರೇಪಣೆಯಂತಹ ದೊಡ್ಡ ಗೋಡೆಯನ್ನು ಉರುಳಿಸಿತು. ಹೌದು, ಅಬೀಗೈಲಳು ತನ್ನ ಸ್ವಭಾವದಿಂದ ಕಷ್ಟಕರ ಸಂದರ್ಭಗಳನ್ನು ನಿವಾರಿಸಿದಳು. ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು.(ಜ್ಞಾನೋ. 14:1) ಹಲ್ಲೇಲೂಯಾ!
ಅಬೀಗೈಲಳ ಕುಟುಂಬದಲ್ಲಿ ಕಾಣಲ್ಪಟ್ಟ ರೀತಿಯಲ್ಲಿ ಸಮಸ್ಯೆ ನಿಮಗೂ ಇದ್ದರೆ, ಇಂದಿನ ಸಂದೇಶವು ನಿಮಗೆ ತುಂಬಾ ಸಹಾಯಕವಾಗಿದೆ ಎಂದು ನಾನು ನಂಬುತ್ತೇನೆ. ಸಮಸ್ಯೆಗಳ ಬಗ್ಗೆ ಯೋಚಿಸುವ ಮತ್ತು ಅಳುವ ಬದಲು, ದೇವರ ಸಹಾಯದಿಂದ ಪ್ರಾರ್ಥಿಸಿ ಮತ್ತು ವರ್ತಿಸಿ. ಅಬೀಗೈಲಳಿಗೆ ಹಿತವಾಗುವಂತೆ ಮಾರ್ಗದರ್ಶನ ನೀಡಿದ ದೇವರು ನಿಮ್ಮನ್ನೂ ನಡೆಸಲಿ! ಅತಿ ಶೀಘ್ರದಲ್ಲೇ ನೀಗುತ್ತದೆ ನಮ್ಮ ಈ ಲಘುವಾದ ಉಪದ್ರವ ತುಂಬಾ ಅಧಿಕವಾದ ಶಾಶ್ವತ ಘನಮಹಿಮೆಯನ್ನು ಉಂಟುಮಾಡುತ್ತದೆ. ಆಮೆನ್.
- Bro. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಈ ತಿಂಗಳ ಸೇವೆಗಾಗಿ ಮತ್ತು ಸೇವಕರ ಸುರಕ್ಷತೆಗಾಗಿ ಪ್ರಾರ್ಥಿಸೋಣ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482