By Village Missionary Movement
Sunday, 29-Sep-2024ಧೈನಂದಿನ ಧ್ಯಾನ(Kannada) – 29.09.2024 (Kids Special)
ಗುಬ್ಬಚ್ಚಿ
"ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ;… ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ…" - ಮತ್ತಾಯ. 6:26
ಊರ ಹೊರಗಿನ ಅರಣ್ಯ ಪ್ರದೇಶದಲ್ಲಿ ರಾಜನ್ ಎಂಬವರು ಕುಟುಂಬ ಸಮೇತವಾಗಿ ವಾಸವಾಗಿದ್ದರು. ಕುಟುಂಬ ಅಗತ್ಯಗಳನ್ನು ಪಟ್ಟಣಕ್ಕೆ ಬಂದರೆ ಮಾತ್ರ ಖರೀದಿಸಬಹುದು. ಅಲ್ಲಿ ಮರಗಳನ್ನು ಕಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಸುಂದರ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಆ ಕಾಡಿನಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದವು. ಈ ಗುಬ್ಬಚ್ಚಿಗಳು ಬೇಗ ಎದ್ದು ತಮ್ಮ ಭಾಷೆಗಳಲ್ಲಿ ದೇವರನ್ನು ಸ್ತುತಿಸುತ್ತಿದ್ದವು. ಈ ಗುಬ್ಬಚ್ಚಿಗಳ ಶಬ್ದ ಕೇಳಿಯೇ ರಾಜನ್ ಕುಟುಂಬದವರು ಎದ್ದೇಳುತ್ತಿದ್ದರು. ಪ್ರತಿ ದಿನವೂ ತಾಯಿ ಗುಬ್ಬಚ್ಚಿಗಳು ಹಗಲಿನಲ್ಲಿ ಆಹಾರಕ್ಕಾಗಿ ಹೊರಗೆ ಹೋಗುವುದನ್ನು ಮತ್ತು ಮುಸ್ಸಂಜೆಯಲ್ಲಿ ತಮ್ಮ ಮರಿಗಳಿಗೆ ಆಹಾರವನ್ನು ನೀಡುವುದನ್ನು ನೋಡಿ ಅವರು ಆನಂದಿಸುತ್ತಿದ್ದರು.
ಒಂದು ದಿನ ಆ ಕಾಡಿನಲ್ಲಿ ಭಯಂಕರವಾದ ಗಾಳಿ ಸಹಿತ ಮಳೆಯಾಯಿತು. ಗುಬ್ಬಚ್ಚಿಗಳ ಗೂಡುಗಳೆಲ್ಲ ಬಿದ್ದುಹೋದವು. ಎಲ್ಲೂ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ರಾಜನ್ ಗೆ ಮರ ಕಡಿಯಲೂ ಆಗಲಿಲ್ಲ. ಮರುದಿನಕ್ಕೆ ಏನು ಮಾಡೋಣ ಎಂಬ ಚಿಂತೆಯೂ ಬಂದುಬಿಟ್ಟಿತು. ಮರುದಿನ ಬೆಳಿಗ್ಗೆ, ರಾಜನ್ ತನ್ನ ಹಿತ್ತಲಿನಲ್ಲಿ ತನ್ನ ಎರಡು ಕೈಗಳನ್ನು ಕೆನ್ನೆಯ ಮೇಲೆ ಇಟ್ಟುಕೊಂಡು ಆತಂಕದಿಂದ ಕುಳಿತನು. ಆಗ ಗುಬ್ಬಚ್ಚಿಗಳು ಎಂದಿನಂತೆ ಹಾರಿ ಸಂತೋಷದಿಂದ ಹಾಡಿದವು. ತಕ್ಷಣ ರಾಜನ್ ಗೆ ಒಂದು ಅನುಮಾನ ಬಂತು. ಈ ಗುಬ್ಬಚ್ಚಿಗಳಿಗೆ ಗೂಡು ಕೂಡ ಇಲ್ಲ. ತಿನ್ನಲು ಆಹಾರವೂ ಇಲ್ಲ. ಹೀಗಿದ್ದರೂ ಹೇಗೆ ಇಷ್ಟೊಂದು ಸಂತೋಷವಾಗಿವೆ ಎಂದು ಆಶ್ಚರ್ಯಪಟ್ಟರು. ಈ ಮಳೆಗಾಲದಲ್ಲಿಯೂ ಪ್ರಭು ಯೇಸು ಅವರನ್ನು ಪೋಷಿಸುತ್ತಿದ್ದಾರೆ ಮತ್ತು ಕಾಳಜಿ ವಹಿಸುತ್ತಿದ್ದಾರೆ. ಹೀಗಿರುವಾಗ ನಾನು ಅವುಗಳಿಗಿಂತ ವಿಶೇಷವಾದವನಲ್ಲವೇ? ಹಾಗಾದರೆ ಈ ಚಿಕ್ಕ ಗುಬ್ಬಚ್ಚಿಗಳಿಗೆ ಆಹಾರ ನೀಡುವ ದೇವರು ನನಗೆ ಆಹಾರವನ್ನು ನೀಡುವುದಿಲ್ಲವೇ? ಸತ್ಯವೇದವನ್ನು ತಿಳಿದ ಮೇಲೂ ಮೂರ್ಖನಾಗಿದ್ದೇನಲ್ಲಾ ಎಂದು ಭಾವಿಸಿ ನಂಬಿಕೆಯಿಂದ ಮನೆ ಪ್ರವೇಶಿಸಿದರು.
ಪ್ರೀತಿಯ ತಮ್ಮ- ತಂಗಿ ನೀನು ಕೂಡ ನಿನ್ನ ಕುಟುಂಬದ ಕಾರ್ಯಗಳ ಬಗ್ಗೆ ಚಿಂತಿಸುತ್ತಿದ್ದೀಯ ಅಲ್ವಾ? ಚಿಂತೆ ಮಾಡುವುದರಿಂದ ದೇಹಕ್ಕೆ ಒಂದು ಮೊಳವನ್ನು ಸೇರಿಸಬಹುದಾ ಏನು? ಹೀಗೆ ಚಿಂತೆ ಬರುವಾಗೆಲ್ಲಾ ಆಕಾಶದಲ್ಲಿ ಹಾರುವ ಪಕ್ಷಿಗಳನ್ನು ನೋಡು. ಅರಳುತ್ತಿರುವ ಹೂವುಗಳನ್ನು ನೋಡು. ಅವುಗಳಿಗೆ ಸುಂದರವಾಗಿ ಡ್ರೆಸ್ ಮಾಡಿ ಉಣಬಡಿಸುವವರು ನಿನ್ನನ್ನೂ ಯಾವ ಕೊರತೆ ಇಲ್ಲದೆ ನಡೆಸುತ್ತಾರೆ, ಚಿಂತಿಸಬೇಡ. ಓದಲು ಬರುತ್ತಿಲ್ಲವಲ್ಲಾ, ನೆನಪಿನ ಶಕ್ತಿ ಇಲ್ಲವಲ್ಲಾ ಎಂದು ಕೊರಗುತ್ತಿದ್ದೀಯಾ? ನಂಬಿಕೆಯಿಂದ ಯೇಸುವನ್ನು ಕೇಳು ಅವರು ನಿನಗೆ ಎಲ್ಲವನ್ನೂ ಕೊಡುತ್ತಾರೆ.
- Mrs. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482