Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.09.2024
Share:

By Village Missionary Movement

Thursday, 26-Sep-2024

ಧೈನಂದಿನ ಧ್ಯಾನ(Kannada) – 26.09.2024

 

ಜೀವವೂ ಜೀವಾಧಿಪತಿಯೂ

 

"ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು;" - ಯೆಶಾಯ 41:10

 

ಜಾನ್ ಫ್ರೆಂಟೆಸ್ ಎಂಬ ಬೋಧಕರು, ಮಾರ್ಟಿನ್ ಲೂಥರ್‌ನ ಸ್ನೇಹಿತ ಐದನೆಯ ಚಾರ್ಲ್ಸ್ಎಂಬ ಅರಾಜಕ ಅರಸನು, ಬೋಧಕ ಜಾನ್ ವಾಸಿಸುತ್ತಿದ್ದ ಪಟ್ಟಣಕ್ಕೆ ಸೈನ್ಯವನ್ನು ಕಳುಹಿಸಿ ಬೋಧಕರನ್ನು ಬಂಧಿಸಿ ಅವರನ್ನು ಶಿಕ್ಷಿಸಲು ಯೋಜಿಸಿದನು. ಬೋಧಕರು ತನ್ನ ಜೀವಕ್ಕಾಗಿ ಪ್ರಾರ್ಥಿಸಿದರು. ಕರ್ತನು ಅವರಿಗೆ, “ರೊಟ್ಟಿ ಮತ್ತು ನೀರನ್ನು ತೆಗೆದುಕೊಂಡು ಮುಂದಿನ ಬೀದಿಗೆ ಹೋಗು, ತೆರೆದ ಮನೆಯನ್ನು ಕಾಣುತ್ತೀಯ. ಅಲ್ಲಿಗೆ ಹೋಗಿ, ಛಾವಣಿಗೆ ಸ್ವಲ್ಪ ಕೆಳಗಿರುವ ಸ್ಥಳದಲ್ಲಿ ಹೋಗಿ ಮಲಗಿಕೋ" ಎಂದು ಹೇಳಿದರು. ಅದರಂತೆಯೇ ಬೋಧಕರು ಹೋಗಿ ಮಲಗಿಕೊಂಡರು. ಪ್ರತಿ ದಿನವೂ ಒಂದು ಕೋಳಿ ಅಲ್ಲಿಗೆ ಬಂದು ಮೊಟ್ಟೆ ಇಟ್ಟು ಹೋಗುತ್ತಿತ್ತು. 14 ದಿನಗಳು ಮೊಟ್ಟೆ ಸಿಕ್ಕಿತು. 15 ನೇ ದಿನ ಕೋಳಿ ಬರಲಿಲ್ಲ "ಸೇನೆಯು ಹೊರಟುಹೋಯಿತು" ಎಂದು ಜನರು ಮಾತನಾಡುವುದನ್ನು ಕೇಳಿಸಿಕೊಂಡರು. ಹೊರಗೆ ಬಂದರು. ತನ್ನ ಜೀವವನ್ನು ದೇವರು ಎಷ್ಟು ಚೆನ್ನಾಗಿ ಕಾಪಾಡಿದರು ಎಂದು ಭಾವಿಸಿ ದೇವರನ್ನು ಸ್ತುತಿಸಿದರು. ನಮ್ಮಲ್ಲಿ ಕೆಲವರು ವ್ಯಾಧಿಯಿಂದ ವೇದನೆಪಡುತ್ತಿರಬಹುದು. ವೈದ್ಯರು ಮತ್ತು ವೈದ್ಯಕೀಯ ಕೈಬಿಟ್ಟಿರಬವುದು ಚಿಂತಿಸಬೇಡಿ. "ಆತನ (ಕ್ರಿಸ್ತನ) ಬಾಸುಂಡೆಗಳಿಂದ ಗುಣವಾದಿರಿ" ಎಂದು ಸತ್ಯವೇದವು ಹೇಳುವುದನ್ನು ನಂಬಿ ಅದರಂತೆ ಪ್ರಾರ್ಥಿಸಿರಿ. ಗುಣಹೊಂದುತ್ತೀರಿ. ಸಾಲದ ಬಾಧೆಯಿಂದ ಒತ್ತಡಕ್ಕೆ ಗುರಿಯಾಗಿ, ಅದರಿಂದ ನಿಂದೆಯನ್ನು ಅನುಭವಿಸಿ, ಸಾಲವನ್ನು ತೀರಿಸಲು ದಾರಿ ಗೊತ್ತಾಗದೇ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದೀರಾ? 2 ಅರಸರು 4:1-7 ನೇ ವಚನಗಳಲ್ಲಿರುವ ಕಾರ್ಯವನ್ನು ನೋಡಿ. ವಿಧವೆಯಾದ ಪ್ರವಾದಿಯ ಹೆಂಡತಿಯು ಸಾಲ ತೀರಿಸಲು ದಾರಿ ತಿಳಿಯದೇ ಪ್ರವಾದಿಯಾದ ಎಲೀಷನನ್ನು ಹುಡುಕಿ ಬರುತ್ತಾಳೆ. ಸಾಲ ಕೊಟ್ಟವನು ತನ್ನ ಇಬ್ಬರು ಗಂಡು ಮಕ್ಕಳನ್ನು ಗುಲಾಮರಾಗಿ ತೆಗೆದುಕೊಳ್ಳಲು ಬಂದನು. ತಾಯಿಯ ಹೃದಯವು ಕಂಪಿಸಿತು. ಅವಳು ಸಂಬಂಧಗಳನ್ನು ಅಥವಾ ಸ್ನೇಹಿತರನ್ನು ಹುಡುಕಲಿಲ್ಲ. ದೇವರಿಗೆ ಶರಣಾಗಲು ಪ್ರವಾದಿಯನ್ನು ಹುಡುಕಿದಳು. ಪರಿಣಾಮ... ಅವರ ಮಾತಿನಂತೆ ನಡೆದಳು, ಸಾಲ ತೀರಿಸಲು ಸಹ ದಾರಿ ತೆರೆಯಿತು, ಬದುಕುವ ದಾರಿಯೂ ಬಯಲಾಯಿತು.

 

ಪ್ರಿಯರೇ, ನೀವು ಸೇವೆ ಮಾಡುವ ಸ್ಥಳದಲ್ಲಿ ಹೆಚ್ಚಿನ ವಿರೋಧವಿದೆಯೇ? ಕೊಲೆ ಬೆದರಿಕೆ ಬರುತ್ತಿದೆಯೇ? ಭಯಪಡಬೇಡಿರಿ. ತಾಯಿಗಿಂತ ಹೆಚ್ಚಾಗಿ ನಮ್ಮನ್ನು ಪ್ರೀತಿಸುವ ದೇವರು ನಮ್ಮನ್ನು ಕಾಪಾಡುತ್ತಾರೆ. ಲೂಕ 12:7 ಹೇಳುತ್ತದೆ ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು. ದೇವರ ಚಿತ್ತವಿಲ್ಲದೆ ನಮ್ಮ ಜೀವನದಲ್ಲಿ ಏನೂ ನಡೆಯುವುದಿಲ್ಲ. ನಮ್ಮ ಜೀವ, ಜೀವಕ್ಕೆ ಅಧಿಪತಿಯಾದ ಜೀವಾಧಿಪತಿಯ ಬಳಿಯಿದೆ. ಆದ್ದರಿಂದ ಭಯಪಡಬೇಡಿ. ಭೀತಿಗೊಳಗಾಗಬೇಡಿ. ದೇವರು ನಮ್ಮೊಂದಿಗಿದ್ದಾರೆ!

- Mrs. ವನಜಾ ಪಾಲ್ ರಾಜ್

 

ಪ್ರಾರ್ಥನಾ ಅಂಶ:

ಪ್ರತಿ ಗುರುವಾರ ನಡೆಯುವ ಆಸ್ಪತ್ರೆ ಸೇವೆಯಲ್ಲಿ ಭೇಟಿಯಾಗುವ ಜನರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş