Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.04.2021
Share:

By Village Missionary Movement

Wednesday, 28-Apr-2021

ಧೈನಂದಿನ ಧ್ಯಾನ(Kannada) – 28.04.2021

ಪ್ರಕಾಶಿಸು

"...ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ!..." - ಯೆಶಾಯ 52:1

ಫ್ರಾನ್ಸ್ ದೇಶಕ್ಕೆ ಸೇರಿದ ಸಹೋದರಿ ಭಾರತದ ಕುರಿತು ಭಾರವುಳ್ಳವಳಾಗಿ ದೇವರ ಪ್ರೇರೇಪಣೆಯಿಂದ ಬಿಹಾರ್ ನಲ್ಲಿರುವ ಜೇಮ್ಸ್ ಮಿಷಿನರಿ ಸ್ಥಳದಲ್ಲಿ ಸೇವೆ ಮಾಡುವಂತೆ ಬಂದರು. ಅವರಿಗೆ ಫ್ರೆಂಚ್ ಭಾಷೆ ಹೊರತು ಬೇರೆ ಯಾವ ಭಾಷೆಯೂ ತಿಳಿಯದ ಕಾರಣದಿಂದ ಅವರು ಬೇರೆ ಯಾವ ಸೇವೆಯನ್ನೂ ಮಾಡಲಾಗಲಿಲ್ಲ. ಆದರೂ ಸತತವಾಗಿ ಪ್ರಾರ್ಥಿಸುತ್ತಲೇ ಇದ್ದರು ಒಂದು ದಿನ ಆ ಮಿಷನ್ ಕಚೇರಿಯಲ್ಲಿರುವ ಎಲ್ಲಾ ಶೌಚಾಲಯಗಳನ್ನು ತೊಳಿಯುವಂತಹ ಜವಾಬ್ದಾರಿಯನ್ನು ತಾನೇ ತೆಗೆದುಕೊಳ್ಳುತ್ತೇನೆ ಎಂದು ಹೇಳಲು, ಅದಕ್ಕೆ ಅಲ್ಲಿರುವವರು ವಿರೋಧವನ್ನು ವ್ಯಕ್ತ ಪಡಿಸಲು, ಕರ್ತನಿಗಾಗಿ ಈ ಸೇವೆಯನ್ನಾದರೂ ನಾನು ಮಾಡುತ್ತೇನೆ ಎಂದು ಇಷ್ಟ ಪೂರ್ವಕವಾಗಿ ಅದನ್ನು ಮಾಡಿದರು.

 

ಒಂದು ಬಾರಿ ಅಲ್ಲಿರುವ ಬೆಟ್ಟಗಳ ಗ್ರಾಮಗಳಿಗೆ ಗುಂಪಾಗಿ ಸೇವೆ ಮಾಡಲು ಹೋದಾಗ ಅವರೊಂದಿಗೆ ಈ ಸಹೋದರಿಯು ಹೋದರು, ರಾತ್ರಿ ಗ್ರಾಮದ ಹೊರಗೆ ಒಣಹುಲ್ಲಿನ ಮೇಲೆ ಮಲಗಿ ಕೊಳ್ಳುವಂತಹ ಪರಿಸ್ಥಿತಿ ಏರ್ಪಟ್ಟಿತು. ಮುಂಜಾನೆ ಎದ್ದ ಕೂಡಲೇ ನಾನು ಫ್ರಾನ್ಸ್ ದೇಶದಲ್ಲಿ ಇದ್ದಾಗ ಕರ್ತನು ನನಗೆ ತೋರಿಸಿದ ಸ್ಥಳ ಇದುವೇ ಎಂದು ಹೇಳಿ ಆ ಬೆಟ್ಟದ ಗ್ರಾಮದಲ್ಲೇ ಉಳಿದು ಸೇವೆ ಮಾಡಲು ಪ್ರಾರಂಭಿಸಿದರು. ಅಲ್ಲಿ ಸ್ನಾನ ಮಾಡಲು, ಕುಡಿಯಲು ಒಂದೇ ಒಂದು ನಲ್ಲಿಯ ನೀರು ಮಾತ್ರವೇ ಇತ್ತು. ಅಲ್ಲಿರುವ ನೀರು ಪರಿಸ್ಥಿತಿಯು ಸರಿಹೋಗದೆ, ಒಂದು ವಾರದೊಳಗೆ ರೋಗದಿಂದ ಸತ್ತು ಹೋದರು. ಅವರ ಬಗ್ಗೆ ಹೇಳಲ್ಪಟ್ಟ ಸಾಕ್ಷಿ ಏನಂದರೆ, ಮಿಷನ್ ಕಚೇರಿಯಲ್ಲಿ ಎಲ್ಲರೂ ಕುಳಿತುಕೊಂಡು ಕೆಲಸಮಾಡುತ್ತಿರುವಾಗ, ಧಿಡೀರ್ ಎಂದು ದೇವರ ಪ್ರಸನ್ನತೆಯು ದೇವರ ಮಹಿಮೆಯು ಅವರನ್ನು ಆವರಿಸುತ್ತಿತ್ತು. ಕಾರಣವೇನಂದರೆ ಈ ಸಹೋದರಿ ಅಲ್ಲಿ ಬರುತ್ತಿದ್ದರಂತೆ. ಹೀಗೆ ದೇವರ ಮಹಿಮೆಯು, ದೇವರ ಪ್ರಸನ್ನತೆಯನ್ನು ಹೊತ್ತುಕೊಂಡು, ದೇವರ ಮೇಲಿರುವ ಪ್ರೀತಿಯಿಂದ ತನ್ನ ದೇಶವನ್ನು ಬಿಟ್ಟು, ದೇವರು ತೋರಿಸಿದ ಸ್ಥಳಕ್ಕೆ ಬಂದು ಗೋಧಿ ಕಾಳಿನ ಹಾಗೆ ಬಿತ್ತಲ್ಪಟ್ಟರು.

 

ಮೋಶೆ 40 ದಿನಗಳು ದೇವರ ಸನ್ನಿಧಿಯಲ್ಲಿ ಕಾದಿದ್ದು ದೇವರ ಯೋಜನೆಗಳನ್ನು ಪಡೆದುಕೊಂಡು ಬಂದಾಗ ಅವನ ಮುಖವು ದೇವರ ಮಹಿಮೆಯಿಂದ ಪ್ರಕಾಶಿಸಿತು. ಅದರಂತೆ "ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದದರಿಂದ ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರವರ ರೋಗಗಳು ವಾಸಿಯಾದವು, ದೆವ್ವಗಳೂ ಬಿಟ್ಟುಹೋದವು. ." (ಅಪೊಸ್ತಲ.19:11,12) ಕಾರಣವೇನು? ಇವರು ದೇವರ ಮಹಿಮೆಯನ್ನು, ದೇವರ ಪ್ರಸನ್ನತೆಯನ್ನು ಹೊತ್ತುಕೊಂಡಿರುವವರಾಗಿಯು, ಮತ್ತೊಬ್ಬರ ಬಳಿ ಅದನ್ನು ಕಳುಹಿಸುವವರಾಗಿಯು ಕಾಣಲ್ಪಟ್ಟರು.

 

ನಾವು ಹೇಗೆ ಕಾಣಲ್ಪಡುತ್ತಿದ್ದೇವೆ? ಹಲವು ವಿಧವಾದ ಸಮಸ್ಯೆಗಳನ್ನು, ಚಿಂತೆಗಳನ್ನು ಹೊತ್ತುಕೊಂಡು, ನಾಳೆ ಏನು ಮಾಡೋಣ ಎಂದು ತತ್ತರಿಸುತ್ತಿರುವ ಮನಸ್ಸಿನೊಂದಿಗೆ ತವಕಿಸುತ್ತಾ ಕಾಣುತ್ತಿದ್ದೇವಾ? ದೇವರ ಸನ್ನಿಧಿಯಲ್ಲಿ ನಾವು ನಮ್ಮ ಭಾರಗಳನ್ನು ಇಳಿಸಿ ಬಿಟ್ಟು ದೇವರ ಬಲವನ್ನು ಹೊಂದಿದವರಾಗಿ, ನಮ್ಮಿಂದ ಸಾಧ್ಯವಾದಷ್ಟು ದೇವರಿಗಾಗಿ ಮಾಡಿ ಅವರ ಪ್ರಸನ್ನತೆಯನ್ನು ಹೊತ್ತು ತಿರುಗುವವರಾಗಿ ಜೀವಿಸೋಣ.

- Mrs. ವಸಂತಿ ರಾಜ್ ಮೋಹನ್

 

ಪ್ರಾರ್ಥನಾ ಅಂಶ:-

ಪ್ರತಿದಿನವೂ ಮುಂಜಾನೆ 5 ಗಂಟೆಗೆ jio meet app ಮೂಲಕವಾಗಿ ನಡೆಯುತ್ತಿರುವ Online prayer ನಲ್ಲಿ ಅನೇಕರು ಭಾಗವಹಿಸುವಂತೆ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino