By Village Missionary Movement
Monday, 23-Sep-2024ಧೈನಂದಿನ ಧ್ಯಾನ(Kannada) – 23.09.2024
ಎಷ್ಟು ಹೊತ್ತು
"…ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ ಅಂದನು" - ಲೂಕ 21:36
ಜಾರ್ಜ್ ಮುಲ್ಲರ್ ಎಂಬ ಒಬ್ಬ ಶ್ರೇಷ್ಠ ದೇವ ಮನುಷ್ಯನ ಬಳಿ, "ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಪ್ರಾರ್ಥಿಸುತ್ತೀರಿ?" ಎಂಬ ಪ್ರಶ್ನೆ ಕೇಳಿದಾಗ ಅವರು ಹೇಳಿದ ಉತ್ತರ ಏನು ಗೊತ್ತಾ? “ಹಲವು ಗಂಟೆಗಳ ಕಾಲ, ಮಾತ್ರವಲ್ಲ, ನಾನು ಪ್ರತಿ ನಿಮಿಷವೂ ಪ್ರಾರ್ಥನೆಯ ಚಿಂತನೆಯೊಂದಿಗೇನೆ ಬದುಕುತ್ತಿದ್ದೇನೆ. ನಾನು ನಡೆಯುವಾಗಲೂ, ಕುಳಿತುಕೊಳ್ಳುವಾಗಲೂ, ಎದ್ದೇಳುವಾಗಲೂ ಪ್ರಾರ್ಥಿಸುತ್ತೇನೆ. "ನಾನು ನನ್ನ ಜೀವನಶೈಲಿಯನ್ನು ಪ್ರಾರ್ಥನೆಯಾಗಿ ಬದಲಾಯಿಸಿದ್ದೇನೆ" ಎಂದು ಅವರು ಹೇಳಿದರಂತೆ. ನಾವು ಯಾವಾಗಲೂ ಪ್ರಾರ್ಥಿಸುತ್ತಲೇ ಇರಬೇಕೆಂದು ಸತ್ಯವೇದವು ನಮಗೆ ಸಲಹೆ ನೀಡುತ್ತಿದೆ. ಯಾವಾಗಲೂ ಪ್ರಾರ್ಥಿಸುತ್ತಿರಬೇಕು ಎಂಬುದಕ್ಕಾಗಿ ಕೆಲಸ ಮಾಡುತ್ತಲೇ ಪ್ರಾರ್ಥಿಸಿದರೆ ಸಾಕು ಎಂದು ಭಾವಿಸಿ, ದಿನವೂ ನಿರ್ದಿಷ್ಟ ಸಮಯದಲ್ಲಿ ದೇವರ ಸಮ್ಮುಖದಲ್ಲಿ ಕುಳಿತುಕೊಳ್ಳುವುದನ್ನು ನಿರ್ಲಕ್ಷಿಸಬಾರದು. ನಾವು ಎಷ್ಟು ಸಮಯ ಪ್ರಾರ್ಥಿಸಿದರೂ ಆ ಪ್ರಾರ್ಥನೆ ಆಸಕ್ತಿಯಿಂದ ಎಲೀಯ ಪ್ರಾರ್ಥಿಸಿದಂತೆ ಉತ್ತರ ಪಡೆದುಕೊಳ್ಳುವಂತಹ ಪ್ರಾರ್ಥನೆಯಾಗಿರಬೇಕು.
1. ಆಸಕ್ತಿಯಿಂದ ಪ್ರಾರ್ಥಿಸಬೇಕು. -ಯಾಕೋಬ 5:17
2. ಎಚ್ಚರವಾಗಿದ್ದು ಪ್ರಾರ್ಥಿಸಬೇಕು. -ಮತ್ತಾಯ 26:41
3. ಬೇಸರಗೊಳ್ಳದೆ ಪ್ರಾರ್ಥಿಸಬೇಕು. - ಲೂಕ 18:1
4. ನಂಬಿಕೆಯುಳ್ಳವರಾಗಿ ಪ್ರಾರ್ಥಿಸಬೇಕು - ಮತ್ತಾಯ 21:22
5. ಸ್ತುತಿ ಗೀತೆಯನ್ನು ಹಾಡಿ ಪ್ರಾರ್ಥಿಸಬೇಕು - ನೆಹೆಮಿಯ 11:17
6. ಬಹಳ ಉತ್ಸಾಹದಿಂದ ಪ್ರಾರ್ಥಿಸಬೇಕು - ಯಾಕೋಬ 5:16
7. ಉಪವಾಸವಿದ್ದು ಪ್ರಾರ್ಥಿಸಬೇಕು - ಮಾರ್ಕನು 9:29
8. ಎಡೆಬಿಡದೆ ಪ್ರಾರ್ಥಿಸಬೇಕು - ಕೊಲೊ 4:2
9. ಪವಿತ್ರಾತ್ಮದಲ್ಲಿ ಪ್ರಾರ್ಥಿಸಬೇಕು - ಯೂದ 20
10. ಕೋಣೆಯ ಬಾಗಲನ್ನು ಮುಚ್ಚಿಕೊಂಡು ಪ್ರಾರ್ಥಿಸಬೇಕು - ಮತ್ತಾಯ 6:6
ಮೇಲೆ ಹೇಳಿದಂತೆಯೇ, ನಾವು ಪ್ರಾರ್ಥನೆ ಮಾಡುವಾಗ ಯಾವ ಯಾವ ಕಾರ್ಯಗಳು ನಡೆಯುತ್ತವೆ ಎಂದು ನೋಡೋಣ.
1. ಪ್ರಾರ್ಥಿಸಿದಂತಹ ಕಾರ್ಯಕ್ಕೆ ಉತ್ತರ ಸಿಗುತ್ತದೆ.
2. ಶೋಧನೆಯಿಂದ ತಪ್ಪಿಸಿಕೊಳ್ಳಬಹುದು.
3. ನಮ್ಮೊಳಗೆ ನಂಬಿಕೆ ಹೆಚ್ಚಾಗುತ್ತದೆ.
4. ನಾವು ಕೇಳುವದನ್ನು ಪಡೆದುಕೊಳ್ಳುತ್ತೇವೆ.
5. ದೇವರ ಪ್ರಸನ್ನತೆಯನ್ನು ಅನುಭವಿಸಬಹುದು.
6. ನಮ್ಮ ಆಂತರಿಕ ಮನುಷ್ಯನಲ್ಲಿ ಬಲ ಉಂಟಾಗುತ್ತದೆ.
7. ವಿಜಯಶಾಲಿ ಕ್ರೈಸ್ತ ಜೀವನವನ್ನು ನಡೆಸಬಹುದು.
8. ದೇವರೊಂದಿಗೆ ನಡೆಯಬಹುದು.
9. ದೇವರ ಚಿತ್ತವನ್ನು ಪೂರೈಸಬಹುದು.
10. ರಹಸ್ಯವಾಗಿ ಪ್ರಾರ್ಥಿಸಿದ ವಿಷಯಗಳಿಗೆ ಬಹಿರಂಗವಾಗಿ ಉತ್ತರ ಸಿಗುತ್ತದೆ.
ಪ್ರಿಯರೇ, ನಾವು ನಮ್ಮ ವೈಯಕ್ತಿಕ ಪ್ರಾರ್ಥನೆಯನ್ನು ಇನ್ನೂ ಹೆಚ್ಚಿಸೋಣ ಮತ್ತು ದೇವರಿಗಾಗಿ ಮಹತ್ತರವಾದ ಕಾರ್ಯಗಳನ್ನು ಮಾಡೋಣ.
- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್
ಪ್ರಾರ್ಥನಾ ಅಂಶ:
ಹಸಿದವರಿಗೆ ಅನ್ನ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆಯುತ್ತಿರುವವರು ದೇವರ ಪ್ರೀತಿಯನ್ನು ಅರಿತುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482