By Village Missionary Movement
Sunday, 22-Sep-2024ಧೈನಂದಿನ ಧ್ಯಾನ(Kannada) – 22.09.2024 (Kids Special)
ಅಧಿಕವಾಗಿ ಮಾಡುವಾತನು
"ನೀವು ನಂಬುವವ ರಾಗಿ ಪ್ರಾರ್ಥನೆಯಲ್ಲಿ ಏನೇನೂ ಕೇಳುವಿರೋ ಅವುಗಳನ್ನೆಲ್ಲಾ ಹೊಂದುವಿರಿ ಅಂದನು" - ಮತ್ತಾಯ 21:22
ಪುಟಾಣಿಗಳೇ ಇಂದು ನಾವು ಒಂದು ನಿಜವಾದ ಕಥೆಯನ್ನು ಕೇಳೋಣ್ವಾ? ಇದು ಪ್ರಾರ್ಥನೆಯ ಕುರಿತಾದ ಘಟನೆ. ನೀವು ಕೇಳಲು ಸಿದ್ಧರಿದ್ದೀರಾ? ಬಿಲ್ ಬ್ರೈಟ್ ಅಮೆರಿಕ ದೇಶದಲ್ಲಿರುವ ಒಂದು ಉದ್ಯಮಿ. ತನ್ನ ವ್ಯವಹಾರದ ಮಧ್ಯೆಯೂ, ಆಗಾಗ್ಗೆ ಪ್ರತ್ಯೇಕವಾಗಿ ಹೋಗಿ ಪ್ರಾರ್ಥಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅವರ ವ್ಯಾಪಾರವೂ ತುಂಬಾ ಬ್ಯುಸಿಯಾಗಿತ್ತು. ಆದರೂ ಅವರು ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಲಿಲ್ಲ "ದೇವರೇ ಒಂದು ಆತ್ಮವನನ್ನಾದರೂ ರಕ್ಷಣೆಯ ಕಡೆಗೆ ಕರೆದೊಯ್ಯಲು ಸಹಾಯ ಮಾಡಿ" ಎಂದು. ಹೀಗೆ ಪ್ರಾರ್ಥನೆ ಮಾಡಿಬಿಟ್ಟು ಸುಮ್ಮನೆ ಇರದೆ ಸಮಯ ಸಿಕ್ಕಾಗಲೆಲ್ಲಾ ಬೀದಿ ಬೀದಿಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದರು. ನಂತರ ಅವರು ಯೇಸುವಿನ ಬಗ್ಗೆ ಬೋಧಿಸಲು ಆಸಕ್ತಿಯಾಗಿ ಇದ್ದುದರಿಂದ ಕೆಲಸದ ದಿನಗಳಲ್ಲೂ ಶಾಲಾ ಕಾಲೇಜುಗಳಿಗೆ ಹೋಗಿ ನಿಮ್ಮಂತಹ ವಿದ್ಯಾರ್ಥಿಗಳಿಗೆ ಸುವಾರ್ತೆಯನ್ನು ಬೋಧಿಸಿದರು. ಅನೇಕರು ಅವರನ್ನು ಅಂಗೀಕರಿಸಿದರು. ಮತ್ತು ಅನೇಕರು ಇವರೊಂದಿಗೆ ಸೇರಿ ಸೇವೆ ಮಾಡಲು ಇವರೊಂದಿಗೆ ಸೇರಿಕೊಂಡರು. ತಕ್ಷಣವೇ "ಕ್ಯಾಂಪಸ್ ಕ್ರುಸೇಡ್" ಎಂಬ ಚಳುವಳಿಯನ್ನು ಪ್ರಾರಂಭಿಸಿದರು.
ಜನರು ಯೇಸುವನ್ನು ಸುಲಭವಾಗಿ ತಿಳಿದುಕೊಳ್ಳಲು ನಾಲ್ಕು ಕಾನೂನುಗಳು ಎಂಬ ಶೀರ್ಷಿಕೆಯಲ್ಲಿ ಹಸ್ತಪ್ರತಿಯನ್ನು ಮುದ್ರಿಸಿದರು ಮತ್ತು ಪ್ರಕಟಿಸಿದರು. ಇದು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುವ ಹಾಗೆ ಇದ್ದುದರಿಂದ ಅನೇಕ ಭಾಷೆಗಳಲ್ಲಿ ಇದನ್ನು ಮುದ್ರಿಸಲಾಯಿತು 250 ಕೋಟಿಗೂ ಹೆಚ್ಚು ಪ್ರತಿಗಳನ್ನು ಮುದ್ರಿಸಿ ಅನೇಕ ದೇಶಗಳಲ್ಲಿ ವಿತರಿಸಲಾಯಿತು. ಅವರ ಸಂಸ್ಥೆಯು 17,000 ಪೂರ್ಣ ಸಮಯದ ಸೇವಕರನ್ನು ಮತ್ತು 2 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಜನರಿಗೆ ಇನ್ನೂ ಸುಲಭವಾದ ಮಾರ್ಗದಲ್ಲಿ ಅವಿದ್ಯಾವಂತರೂ ಸಹ ಯೇಸುವನ್ನು ಅರಿತುಕೊಳ್ಳಲು ಯೇಸು ಎಂಬ ಸಿನಿಮಾವನ್ನು ಹಲವು ಭಾಷೆಗಳಲ್ಲಿ ಭಾಷಾಂತರಿಸಿ 45 ದಶಲಕ್ಷಕ್ಕೂ ಹೆಚ್ಚು ಜನರು ಈ ಚಲನಚಿತ್ರವನ್ನು ವೀಕ್ಷಿಸುವಂತೆ ಮಾಡಿದ್ದಾರೆ. ಇದು ಅನೇಕರು ದೇವರನ್ನು ಅಂಗೀಕರಿಸಲು ಉಪಯೋಗವಾಗುತ್ತಿದೆ. ಬಿಲ್ ಬ್ರೈಟ್ ಅವರ ಪ್ರಾರ್ಥನೆ ಒಂದು ಆತ್ಮವನ್ನು ಮುನ್ನಡೆಸಬೇಕು ಎಂಬುದು, ಆದರೆ ಲಕ್ಷಾಂತರ ಜನರು ಇವರ ಮೂಲಕ ಯೇಸುವನ್ನು ತಿಳಿದುಕೊಂಡಿದ್ದಾರೆ. ಪುಟಾಣಿಗಳೇ, ಇದೇ ರೀತಿಯಲ್ಲಿ, ನೀವು ಸಹ ತುಂಬಾ ಇಷ್ಟಪಟ್ಟು ದೇವರ ಬಳಿ ಪ್ರಾರ್ಥಿಸುವ ಪ್ರಾರ್ಥನೆಗೆ ದೇವರು ನೀವು ಕೇಳುವುದಕ್ಕಿಂತ ಹೆಚ್ಚಾಗಿ ಮಾಡುತ್ತಾರೆ. ಆತನು ಸರ್ವಶಕ್ತನಾದ ದೇವರು. ನಂಬಿಕೆಯಿಂದ ಕೇಳಿರಿ. ಸಂಪೂರ್ಣ ಉತ್ತರವನ್ನು ಪಡೆದು ಆನಂದಿಸಿರಿ.
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482