By Village Missionary Movement
Friday, 20-Sep-2024ಧೈನಂದಿನ ಧ್ಯಾನ(Kannada) – 20.09.2024
ನಿಧಾನವೇ ಪ್ರಧಾನ
"…ಆದರೆ ಒಳ್ಳೇ ದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿ ದ್ದರೆ ಇದು ದೇವರಿಗೆ ಅಂಗೀಕೃತವಾಗಿದೆ" - 1 ಪೇತ್ರ 2:20
ಕ್ರಿಸ್ತನಲ್ಲಿ ಪ್ರಿಯರೇ! ಒಬ್ಬ ಮಾನಸಿಕ ಅಸ್ವಸ್ಥನ ಮೇಲೆ ಕನಿಕರ ತೋರಿದ ವ್ಯಕ್ತಿ ಆತನನ್ನು ತನ್ನ ಮನೆಗೆ ಕರೆದೊಯ್ದನು. ಅವನ ತಂದೆ ಅವನನ್ನು ಒಂದು ಮೂಲೆಯಲ್ಲಿ ಕೂರಿಸಿ ಹತ್ತಿರದಲ್ಲಿ ಆಹಾರ ಮತ್ತು ನೀರನ್ನು ಇಡಲು ಹೇಳಿದರು. ಆದರೆ ನೀನು ಅವರಿಗೆ ಯಾವ ಉಪಕಾರವನ್ನೂ ಮಾಡಬೇಡ ಎಂದರು. ಅವರಿಗೆ ಹಸಿವಾಗಿದ್ದರೆ, ಅವರೇ ಆಹಾರವನ್ನು ತೆಗೆದುಕೊಂಡು ತಿನ್ನಲಿ. ಅವನು ಸಹ ಹಾಗೆಯೇ ಮಾಡಿದನು. ಆ ಮಾನಸಿಕ ಅಸ್ವಸ್ಥನು ಕೂಗಾಡುತ್ತಾ ಕಲ್ಲು ಎಸೆದರೂ ಮನೆಯಲ್ಲಿ ಯಾರೂ ಕಂಡುಕೊಳ್ಳುತ್ತಿರಲಿಲ್ಲ. ದಿನಗಳು ಕಳೆದಂತೆ ಆ ಮನುಷ್ಯ ತನ್ನ ಕಾರ್ಯಗಳಿಗೆ ಪ್ರತಿಕ್ರಿಯಿಸಲು ಯಾರೂ ಇಲ್ಲದ ಕಾರಣ ಸ್ವಲ್ಪ ಸ್ವಲ್ಪ ಬದಲಾಗುತ್ತಿದ್ದ. ಈಗ ಅವನು ಕೂಗಾಡುವುದಿಲ್ಲ ಮತ್ತು ಕಲ್ಲುಗಳನ್ನು ಎಸೆಯುತ್ತಿಲ್ಲ. ಅದನ್ನು ನೋಡಿದ ತಂದೆ ಪ್ರತಿಕ್ರಿಯಿಸಲು ಯಾರೂ ಇಲ್ಲದ್ದರಿಂದ ಅವರ ಸ್ವಭಾವವು ಬದಲಾಯಿತು ಎಂದರು. ಹಾಗೆಯೇ ನಾವು ಸಹ ವಾದಮಾಡುವವರ ವಿರುದ್ಧ ವಾದ ಮಾಡದಿದ್ದರೆ ಜಗಳ ಉಂಟಾಗಲು ಅವಕಾಶವೇ ಇಲ್ಲ. ಯೇಸು ಕ್ರಿಸ್ತನು ಸಹ ತನ್ನ ಶಿಷ್ಯರಿಗೆ ಕೆಟ್ಟದ್ದನ್ನು ವಿರೋಧಿಸಬಾರದೆಂದು ಹೇಳಿದರು; ಯಾರಾದರೂ ನಿಮ್ಮ ಬಲ ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆಯನ್ನು ಸಹ ಅವನಿಗೆ ತಿರುಗಿಸಿ. ನಿಮ್ಮ ಬಟ್ಟೆಗಳನ್ನು ತೆಗೆದುಕೊಳ್ಳಲು ಹೋರಾಡುವವನಿಗೆ ನಿಮ್ಮ ಮೇಲಂಗಿಯನ್ನು ಸಹ ನೀಡಿ. ಯಾರಾದರೂ ನಿಮ್ಮನ್ನು ಒಂದು ಮೈಲಿ ನಡೆಯಲು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ಹೋಗಿ ಎಂದು ಆಲೋಚನೆ ಹೇಳಿದರು.
ಹೌದು ಪ್ರಿಯರೇ! ನಮ್ಮ ಸುತ್ತಲಿರುವವರಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಅದರ ಬಗ್ಗೆ ಯೋಚಿಸೋಣ. ಯಾರಾದರೂ ನಮ್ಮ ಬಗ್ಗೆ ಏನಾದರೂ ಹೇಳಿದಾಗ ನಾವು ತಾಳ್ಮೆ ಕಳೆದುಕೊಂಡು ಅವರನ್ನು ಗದ್ದಿಸುತ್ತೇವೆ ಅಲ್ವಾ? ನಾವು ಹಾಗೆ ಮಾಡದೇ ಸ್ವಲ್ಪ ತಾಳ್ಮೆಯಿಂದಿರೋಣ. ನಮ್ಮ ದೇವರು ನಮ್ಮನ್ನು ಘನಪಡಿಸುತ್ತಾರೆ. ದೇವರ ಮನುಷ್ಯನಾದ ಮೋಶೆಯು ಇದನ್ನೇ ಮಾಡಿದರು. ಮೋಶೆಯ ಸಹೋದರರು ಅವನ ಹೆಂಡತಿಯ ಮೇಲಿದ್ದ ಭಿನ್ನಾಭಿಪ್ರಾಯಗಳಿಂದ ಆತನನ್ನು ಆರೋಪಿಸಿದಾಗ, ಅವರೋ ತನ್ನನ್ನು ಸಮರ್ಥಿಸಿಕೊಳ್ಳಲು ಏನನ್ನೂ ಹೇಳಲಿಲ್ಲ. ಮೋಶೆ ಮಾತಾಡಿದ್ದರೆ ಅದು ಜಗಳವಾಗಿ ಮಾರ್ಪಡುತ್ತಿತ್ತು. ಅವರು ನಿಧಾನವನ್ನು ಕಾಪಾಡಿಕೊಂಡರು. ದೇವರೇ ಅವರ ಪರವಾಗಿ ಮಾತನಾಡಿದರು. ನಾವೂ ಇದನ್ನು ಅನುಸರಿಸೋಣ. ದೇವರಿಂದ ಘನತೆಯನ್ನು ಪಡೆಯೋಣ.
- Mrs. ದಿವ್ಯಾ ಅಲೆಕ್ಸ್
ಪ್ರಾರ್ಥನಾ ಅಂಶ:
ನಮ್ಮ ಚಿಕ್ಕಮಕ್ಕಳ ಪಾಲುದಾರಿಕೆ ಯೋಜನೆಯಲ್ಲಿ ಸೇರಿರುವ ಮಕ್ಕಳು ದೇವರಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482