Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.09.2024
Share:

By Village Missionary Movement

Thursday, 19-Sep-2024

ಧೈನಂದಿನ ಧ್ಯಾನ(Kannada) – 19.09.2024

 

ಕುಂಬಾರನ ಕೈ

 

"…ನಾನು ಒಡೆದ ಬೋಕಿಯ ಹಾಗೆ ಇದ್ದೆನೆ" - ಕೀರ್ತನೆ 31:12

  

ಜಪಾನಿನಲ್ಲಿ ತಮ್ಮ ಮಕ್ಕಳು ತಿಳಿಯದೆ ಬೆಲೆಬಾಳುವ ಗಾಜು, ಮಣ್ಣಿನ ಪಾತ್ರೆಗಳನ್ನು ನೆಲದ ಮೇಲೆ ಒಡೆದು ಹಾಕಿದರೆ ಮಕ್ಕಳನ್ನು ಬೈಯುವುದಾಗಲಿ, ಒಡೆದ ಚೂರುಗಳನ್ನು ಕಸದ ಬುಟ್ಟಿಗೆ ಹಾಕುವುದಾಗಲಿ ಮಾಡುವುದಿಲ್ಲ. ಪ್ರತಿಯೊಂದು ಮುರಿದ ತುಂಡನ್ನು ಎಚ್ಚರಿಕೆಯಿಂದ ಎತ್ತಿಕೊಂಡು ಕಲಾವಿದನ ಬಳಿಗೆ ಕೊಂಡೊಯ್ಯಲಾಗುತ್ತದೆ, ಅವರು ಮುರಿದ ಮಡಕೆಗಳನ್ನು ಮೂಲದಂತೆ ಉತ್ತಮವಾದ ಕಲಾಕೃತಿಗಳಾಗಿ ಮರು-ಅಂಟಿಸುತ್ತಾರೆ. ಈ ಕಲೆಯನ್ನು "ಕಿಂಟ್ಸುಕಿ" ಎಂದು ಕರೆಯಲಾಗುತ್ತದೆ. ಕಲಾವಿದ ಒಡೆದ ಮಡಕೆಗೆ ಮತ್ತೆ ಮೆರುಗೆಣ್ಣೆ ಹಚ್ಚಿ, ಅದರ ಹಳೆಯ ಆಕಾರವನ್ನು ಅಂಟಿಸಿ, ಮೆರುಗೆಣ್ಣೆ ಇರುವ ಜಾಗಗಳಲ್ಲಿ ಯಾವುದಾದರೊಂದು ಪೌಡರ್ ತುಂಬಿ, ಮೂಲದಂತೆ ಅಂಟಿಸುತ್ತಾನೆ. ಅಂಟಿಕೊಂಡಿರುವ ಮಡಕೆಗಳು ಎಂದಿಗಿಂತಲೂ ಹೆಚ್ಚು ಸುಂದರ ಮತ್ತು ಹೆಚ್ಚು ಮೌಲ್ಯಯುತವಾಗಿರುತ್ತವೆ ಅವರು ತಮ್ಮ ಮನೆಯಲ್ಲಿ ಮಡಕೆಯನ್ನು ಬಹಳ ವಿಶೇಷವಾದ ಸ್ಥಳದಲ್ಲಿ ಇಡುತ್ತಾರೆ.   

  

ಯೆರೆಮಿಯ 18 ನೇ ಅಧ್ಯಾಯದಲ್ಲಿ ಕುಂಬಾರನ ಕೈ ಮಣ್ಣಿನ ಪಾತ್ರೆಯನ್ನು ಕೆಡಿಸಿತು. ಕುಂಬಾರನು ಮಡಕೆಯನ್ನು ಇನ್ನೊಂದು ವಸ್ತುವನ್ನಾಗಿ ಮಾಡಿದನು. ಇಂದಿಗೂ ಇದನ್ನು ಓದುತ್ತಿರುವ ನನ್ನ ಪ್ರೀತಿಯ ದೇವರ ಮಕ್ಕಳೇ, ನನ್ನ ಜೀವನ ಮುಗಿದುಹೋಯಿತು ಎಂದು ನಿಮಗೆ ಅನಿಸಬಹುದು. ನನ್ನ ದಾಂಪತ್ಯ ಮುರಿದುಬಿದ್ದಿದೆ, ನನ್ನ ಓದಿನಲ್ಲಿ ನಿರೀಕ್ಷಿತ ಅಂಕಗಳಿಲ್ಲದೆ ಸಿಕ್ಕಿಹಾಕಿಕೊಂಡಿದ್ದೇನೆ, ನಾನು ಸರ್ಕಾರಿ ಕೆಲಸ ಮತ್ತು ವಿದೇಶಿ ಉದ್ಯೋಗಗಳಿಗಾಗಿ ಅನೇಕ ಬಾರಿ ಪ್ರಯತ್ನಿಸಿದ್ದೇನೆ ಮತ್ತು ನಾನು ಮುರಿದುಹೋಗಿದ್ದೇನೆ. ನನ್ನ ಭವಿಷ್ಯವೇನು? ನಾನು ಇನ್ನು ಬದುಕಲು ಸಾಧ್ಯವಾ? ಜೀವನದಲ್ಲಿ ಮುನ್ನಡೆಯಲು ಸಾಧ್ಯವಾ? ಎಂದು ಮುರಿದ ಹೃದಯ, ಕಣ್ಣುಗಳಲ್ಲಿ ಕಣ್ಣೀರು ಮತ್ತು ಭಾರವಾದ ಹೃದಯದಿಂದ ಇರಬಹುದು. ಚಿಂತಿಸಬೇಡಿ, ದೇವರ ಕೈಗಳಲ್ಲಿ ನಿಮ್ಮನ್ನು ಸಮರ್ಪಿಸಿಕೊಳ್ಳಿ.  

  

ಇದನ್ನು ಓದುತ್ತಿರುವ ದೇವರ ಮಕ್ಕಳೇ! ನಿಮ್ಮ ಜೀವನವನ್ನು ದೇವರ ಕೈಗಳಲ್ಲಿ ಒಪ್ಪಿಸಿಕೊಡಿ. ಕಲಾವಿದ 'ಕಿಂಟ್ಸುಕಿ' ಕೈಯಲ್ಲಿ ಮುರಿದ ವಸ್ತುವು ಅತ್ಯಂತ ಸುಂದರವಾದ, ಅಮೂಲ್ಯ ಮತ್ತು ಉಪಯುಕ್ತ ವಸ್ತುವಾಗಿ ಮಾರ್ಪಟ್ಟಿತು. ಅದೇ ರೀತಿಯಲ್ಲಿ, ನಾವು ನಮ್ಮ ಮುರಿದ ಜೀವನವನ್ನು ಪರಮ ತಂದೆಯ ಕೈಗೆ ಒಪ್ಪಿಸಿದಾಗ, ಅವರು ನಮ್ಮನ್ನು ಸುಂದರವಾಗಿ ಮತ್ತು ಉನ್ನತ ಆಶ್ರಯದಲ್ಲಿ ಇರಿಸುತ್ತಾರೆ. ಆದ್ದರಿಂದ ಚಿಂತಿಸಬೇಡಿ, ವಿಳಂಬ ಮಾಡಬೇಡಿ ಗಂಭೀರವಾಗಿ ದೇವರ ಬಳಿಗೆ ಹೋಗಿ ಮತ್ತು ನಿಮ್ಮ ಜೀವನವನ್ನು ಅರ್ಪಿಸಿ. "ಕರ್ತನೇ, ನಾನು ಮುರಿದುಹೋಗಿದ್ದೇನೆ. ನನ್ನ ಜೀವನವನ್ನು ಸರಿಪಡಿಸಲು ಯಾವ ಮನುಷ್ಯನಿಗೂ ಸಾಧ್ಯವಿಲ್ಲ, ನನ್ನಿಂದಲೂ ಸಾಧ್ಯವಿಲ್ಲ. ನೀವು ಮಾತ್ರವೇ ಅದನ್ನು ಮಾಡಿ ಮುಗಿಸಲು ಸಾಧ್ಯ. ನನ್ನನ್ನು ಕೊಡುತ್ತೇನೆ" ಎಂದು ಪ್ರಾರ್ಥಿಸಿ ನೋಡಿ. ಅದ್ಬುತವನ್ನು ನೋಡುತ್ತೀರಿ.

- Mrs. ತವಮಣಿ ವೈರವೇಲ್ 

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯನ್ನು ಬೆಂಬಲಿಸುವ ಪಾಲುದಾರರ ಕುಟುಂಬದ ಭದ್ರತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al