Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.09.2024
Share:

By Village Missionary Movement

Monday, 16-Sep-2024

ಧೈನಂದಿನ ಧ್ಯಾನ(Kannada) – 16.09.2024

 

ಜಯ

 

"ಕ್ರಿಸ್ತನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವ ದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನ ವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ" - 2 ಕೊರಿಂಥ 2:14

  

ಯುದ್ಧದಲ್ಲಿ ಸೋತ ರಾಜಕುಮಾರನಿಗೆ, ವಿಜಯಶಾಲಿ ಚಕ್ರವರ್ತಿ ಒಂದು ಷರತ್ತು ವಿಧಿಸಿದರು. ಯುದ್ಧದಲ್ಲಿ ಸೋತ ರಾಜಕುಮಾರನು ಕೈಯಲ್ಲಿ ನೀರು ತುಂಬಿದ ಬಟ್ಟಲನ್ನು ಹಿಡಿದು, ಒಂದು ಹನಿಯೂ ಚೆಲ್ಲದೆ ಅದನ್ನು ಹೊತ್ತುಕೊಂಡು ಒಂದು ಮೈಲಿ ದೂರದ ಚಕ್ರವರ್ತಿಗೆ ಕೊಟ್ಟುಬಿಟ್ಟರೆ ಬಿಡುಗಡೆ ಎಂಬುದೇ ಆ ನಿಬಂಧನೆ. 

  

ರಾಜಕುಮಾರನು ಬಟ್ಟಲನ್ನು ಎತ್ತಿಕೊಂಡು ಹೋಗುತ್ತಿರುವಾಗ ಒಂದು ಹನಿ ನೀರು ಚೆಲ್ಲಿದರೂ ಇಬ್ಬರು ಸೇವಕರು ಅವನನ್ನು ಕತ್ತಿಗಳಿಂದ ಕತ್ತರಿಸಲು ಅವನನ್ನು ಹಿಂಬಾಲಿಸಿದರು. ಆದರೆ ದಾರಿಯುದ್ದಕ್ಕೂ ಚಕ್ರವರ್ತಿಯು ರಾಜಕುಮಾರನನ್ನು ಹುರಿದುಂಬಿಸಲು ಒಂದು ಗುಂಪನ್ನು ಮತ್ತು ಅವನನ್ನು ಗದರಿಸಲು ಒಂದು ಗುಂಪನ್ನು ನಿಲ್ಲಿಸಿದ್ದರು. ಆದರೆ ರಾಜಕುಮಾರ, ಬಲ ಅಥವಾ ಎಡಕ್ಕೆ ನೋಡದೆ, ಬಟ್ಟಲಿನ ಮೇಲೆ ತನ್ನ ಸಂಪೂರ್ಣ ಗಮನವನ್ನು ಇಟ್ಟುಕೊಂಡು ಕೊನೆಯಲ್ಲಿ ತನ್ನ ಬಿಡುಗಡೆಯನ್ನು ಗಳಿಸಿದನು. ರಾಜಕುಮಾರನನ್ನು ನೋಡಿ, "ನಿನ್ನ ಯಶಸ್ಸಿಗೆ ಕಾರಣವೇನು?" ಎಂದು ಕೇಳಿದಾಗ ನಾನು ನನ್ನನ್ನು ಹೊಗಳುವವರನ್ನೂ ಗಮನಿಸಲಿಲ್ಲ ಮತ್ತು ನನ್ನನ್ನು ನಿಂದಿಸುವವರನ್ನೂ ಗಮನಿಸಲಿಲ್ಲ. ನನ್ನ ಮನಸ್ಸು ಬಟ್ಟಲಿನಲ್ಲಿದ್ದ ನೀರಿನ ಮೇಲೆಯೇ ಇತ್ತು. ನಾನು ತುಂಬಾ ತುಂಬಾ ಜಾಗರೂಕನಾಗಿದ್ದೆ ಎಂದು ಹೇಳಿದನು.   

  

ಸತ್ಯವೇದದಲ್ಲಿ, ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಜೀವನದಲ್ಲಿ ಯಾವುದೇ ಹೊಗಳಿಕೆ ಮತ್ತು ತಿರಸ್ಕಾರವನ್ನು ಸಮಾನವಾಗಿ ತೆಗೆದುಕೊಂಡರು. ಅವರ ಸಂಪೂರ್ಣ ಗಮನವು ತಂದೆಯ ಚಿತ್ತವನ್ನು ಮಾಡುವುದರಲ್ಲೇ ಇತ್ತು! ಆದುದರಿಂದಲೇ ಒಂದು ಗುಂಪು ಅವರನ್ನು ರಾಜನನ್ನಾಗಿ ಮಾಡಲು ಪ್ರಯತ್ನಿಸಿದರೂ ಇನ್ನೊಂದು ಗುಂಪು ಅವರನ್ನು ಕೊಲ್ಲಲು ಪ್ರಯತ್ನಿಸಿದರೂ, ಅವರು ನನ್ನ ರಾಜ್ಯವು ಈ ಲೋಕಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟವಾಗಿ ಬದುಕಿ ದೇವರ ಚಿತ್ತವನ್ನು ಪೂರೈಸಿದರು.

 

ಪ್ರಿಯರೇ, ನಮ್ಮ ಜೀವನದಲ್ಲಿ ಅನೇಕ ವೈಫಲ್ಯಗಳು, ಜಾರುವಿಕೆಗಳು, ನಾಚಿಕೆಗಳು ಮತ್ತು ಅವಮಾನಗಳು ಬರುತ್ತವೆ. ಅವುಗಳಿಂದ ದಣಿಯದೆ ಧೈರ್ಯದಿಂದ ಪ್ರಯಾಣ ಮುಂದುವರಿಸಬೇಕು. ಸೈತಾನನು, ನಮ್ಮನ್ನು ಕೆಳಗೆ ತಳ್ಳಲು ಮತ್ತು ಹಿಂಜಾರಿ ಹೋಗುವಂತೆ ಮಾಡಲು ಮತ್ತು ಯೇಸುವನ್ನು ತಿರಸ್ಕರಿಸುವಂತೆ ಮಾಡಲು ಅನೇಕ ಅಡೆತಡೆಗಳನ್ನು ತಂದರೂ, ನಾವು ಅವುಗಳನ್ನು ಯೇಸುಕ್ರಿಸ್ತನ ಹೆಸರಿನಲ್ಲಿ ಜಯಿಸಬೇಕು. ನಾನು ಯೇಸುವಿನ ಮಗು ನಾನು ಯೇಸುಕ್ರಿಸ್ತನ ರಕ್ತದಿಂದ ತೊಳೆಯಲ್ಪಟ್ಟವನು (ಳು)ಎಂಬ ಭಾವನೆಯಿಂದ ಯಾರು ಗೇಲಿ ಮಾಡಿದರೂ ಮತ್ತು ಅಪಹಾಸ್ಯ ಮಾಡಿದರೂ ಇದು ಯಾವುದಕ್ಕೂ ಗಮನ ಕೊಡದೆ ಶಿಲುಬೆಯಲ್ಲಿ ವಿಜಯಶಾಲಿಯಾದ ಯೇಸು ಕ್ರಿಸ್ತನ ಮೇಲೆ ನಮ್ಮೆಲ್ಲರ ಗಮನವಿರಲಿ. ಯೇಸುವನ್ನು ಮುಂದಿಡಿ. ಜಯವು ನಿಮ್ಮದೇ. ಆಮೆನ್! ಆಮೆನ್!  

- Mrs. ಹೆಪ್ಸಿಬಾ ರವಿಚಂದ್ರನ್

 

ಪ್ರಾರ್ಥನಾ ಅಂಶ: 

ತರಬೇತಿಯಲ್ಲಿರುವ ನಮ್ಮ ಯುವ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al