Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.04.2021
Share:

By Village Missionary Movement

Tuesday, 27-Apr-2021

ಧೈನಂದಿನ ಧ್ಯಾನ(Kannada) – 27.04.2021

ಬಚ್ಚಿಡಬೇಡ

"ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು." - ಜ್ಞಾನೋಕ್ತಿಗಳು 28:13

ತಮ್ಮ ಮನೆಯಲ್ಲಿದ್ದ 10 ಬಾತು ಕೋಳಿಗಳನ್ನು ಮೇಯಿಸುವುದು ಕಲಾ ಮತ್ತು ಅವಳ ತಮ್ಮ ಸುಂದರ್ ಇವರಿಬ್ಬರ ಜವಾಬ್ದಾರಿಯಾಗಿತ್ತು. ಒಂದು ದಿನ ಸುಂದರ್ ಕಲ್ಲನ್ನು ತೆಗೆದುಕೊಂಡು ಹುಡುಗಾಟ ವಾಗಿ ಎಸೆಯಲು, ಅದು ಒಂದು ಬಾತುಕೋಳಿ ತಲೆ ಮೇಲೆ ಬಿದ್ದು ಸತ್ತು ಹೋಯಿತು. ಅಯ್ಯೋ! ತಂದೆಗೆ ಗೊತ್ತಾದರೆ ಹೊಡೆಯುತ್ತಾರೆ ಎಂದು ಸುಂದರ್ ಕಲಾ ಬಳಿ, "ಅಕ್ಕ ನೀನು ಅಪ್ಪನ ಬಳಿ ಹೇಳಬೇಡ" ಎಂದು ಹೇಳಿದನು. ಕಲಾ, "ನಾನು ಹೇಳುವುದನ್ನೆಲ್ಲಾ ಮಾಡಿದರೆ ನಾನು ಹೇಳುವುದಿಲ್ಲ" ಎಂದಳು. ಮರುದಿನ ಮನೆಯಲ್ಲಿ ತನ್ನ ಕೆಲಸವಾಗಿದ್ದ ಬಟ್ಟೆ ಒಗೆಯುವುದನ್ನು ಸುಂದರ್ ಮಾಡುವಂತೆ ಹೇಳಿದಳು. ನಾನು ಮಾಡುವುದಿಲ್ಲ ಎಂದು ಸುಂದರ್ ಹೇಳಿದಾಗ ಕಲಾ, "ಲೋ ಬಾತುಕೋಳಿ" ಎಂದು ಭಯ ಪಡಿಸಿದಳು. ಹೀಗೆ ತನ್ನ ಎಲ್ಲಾ ಕೆಲಸಗಳನ್ನು ಸುಂದರ್ ಮೂಲಕ ಮಾಡಿ ಮುಗಿಸಿದಳು. ಸುಂದರ್ ತನ್ನ ತಪ್ಪನ್ನು ಬಚ್ಚಿಟ್ಟು, ಬಚ್ಚಿಟ್ಟು ಅನೇಕ ಕೆಲಸಗಳನ್ನು ಮಾಡುತ್ತಿದ್ದರಿಂದ ಜ್ವರವೇ ಬಂದುಬಿಟ್ಟಿತು. ಕಡೆಯದಾಗಿ ಸುಂದರ್ ನಡೆದದ್ದನ್ನು ತಂದೆಗೆ ಹೇಳಿದಾಗ ಇಷ್ಟೇನಾ ನನ್ನ ಬಳಿ ಹೇಳಿರಬಹುದೇ ಎಂದು ಅವನನ್ನು ಕ್ಷಮಿಸಿದರು. ಇದನ್ನು ಅರಿಯದ ಕಲಾ, "ಲೋ ಬಾತುಕೋಳಿ, ನೋಡಿಕೋ" ಎಂದು ಹೇಳಲು ಸುಂದರ್, "ಬಾತುಕೋಳಿ ಎಲ್ಲಾ ನಿನ್ನೆಯವರೆಗೂ" ಎಂದು ಹೇಳಿಬಿಟ್ಟು ಸಂತೋಷದಿಂದ ಆಟವಾಡಲು ಹೋಗಿಬಿಟ್ಟನು. ಹೌದು, ನಾವು ಮಾಡುವ ತಪ್ಪುಗಳನ್ನು ಯೇಸಪ್ಪನ ಬಳಿ ಹರಕೆ ಮಾಡಿದರೆ ಒಳ್ಳೆಯದು. ಬಚ್ಚಿಟ್ಟರೆ ಆಪತ್ತು. ಹರಕೆ ಮಾಡುವಾಗ ಬಿಟ್ಟುಬಿಡಬೇಕು ಎಂಬ ಆಲೋಚನೆ ನಮ್ಮೊಳಗೆ ಖಂಡಿತವಾಗಿ ಬರುತ್ತದೆ.

 

ದಾವೀದನು ತಾನು ಮಾಡಿದ ಪಾಪಗಳನ್ನೆಲ್ಲ ಗ್ರಹಿಸಿ ಕೂಡಲೇ ಅದನ್ನು ಬಚ್ಚಿಡದೆ ಹಾಗೆಯೇ ಹರಕೆ ಮಾಡುವುದನ್ನು ಇಂದಿನ ಸತ್ಯವೇದ ಭಾಗದಲ್ಲಿ ಓದುತ್ತೇವೆ. ರಾಜ ಎಂಬ ತನ್ನ ಬಿರುದಿನಿಂದ ಅವನು ಮಾಡಿದ ತಪ್ಪುಗಳನ್ನೆಲ್ಲಾ ಹಾಗೆಯೇ ಇರುವುದನ್ನು ಇರುವ ಹಾಗೆ ಹೇಳಿ ದೇವರ ಬಳಿ ಹರಕೆ ಮಾಡುತ್ತಾರೆ. ದೇವರು ಮಾತ್ರವೇ ಪಾಪದಿಂದ ಬಿಡುಗಡೆ ಕೊಡಲು ಸಾಧ್ಯ ಎಂದು ಗ್ರಹಿಸಿ ದಾವೀದನು "ನೀನು ನನ್ನನ್ನು ತೊಳೆದು ಶುದ್ಧೀಕರಿಸು" ಎಂದು ಹರಕೆ ಮಾಡಿದರು. ಕರ್ತನೇ ನಿಮಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ ಎಂದು ಹರಕೆ ಮಾಡುತ್ತಾರೆ. ರಕ್ತಪರಾಧದಿಂದ ನನ್ನನ್ನು ಬಿಡಿಸು ಎಂದು ಜಜ್ಜಿಹೋದ ಹೃದಯದಿಂದ ಬೇಡಿಕೊಂಡರು. ಅಷ್ಟು ಮಾತ್ರವಲ್ಲದೆ ಮನಸಾಂತರ ಹೊಂದಿದವರಾಗಿ ಜೀವಿಸಲು ಶುದ್ಧ ಹೃದಯವನ್ನು ನನಗೆ ಕೊಡಿ ಎಂದು ಕೇಳಿದರು. ಆದ್ದರಿಂದ ಅವರು ಕ್ಷಮಾಪಣೆಯನ್ನು ಹೊಂದಿಕೊಂಡರು..

ಇದನ್ನು ಓದುತ್ತಿರುವ ನಾವೂ ಕೂಡ ಪಾಪವನ್ನು ಬಚ್ಚಿಡದೆ ಅದನ್ನು ಹಾಗೆಯೇ ದೇವರ ಬಳಿ ಹರಕೆ ಮಾಡಿ ಬಿಡುಗಡೆಯನ್ನು ಹೊಂದಿಕೊಳ್ಳೋಣ. ಪಾಪವನ್ನು ಬಚ್ಚಿಟ್ಟರೆ ಅಪರಾಧವನ್ನು ಮಾಡಿದ್ದೇವೆ ಎಂಬ ದುಃಖವನ್ನು ಅನುಭವಿಸಬೇಕಾಗುತ್ತದೆ. ಯೇಸುಕ್ರಿಸ್ತನೊಬ್ಬನೇ ನಮ್ಮ ಪಾಪಗಳನ್ನು ಕ್ಷಮಿಸುವಾತನು, ಅವರ ಬಳಿ ಬಚ್ಚಿಡದೆ ಹರಕೆ ಮಾಡೋಣ, ಕರುಣೆ ಹೊಂದೋಣ. 

- T. ಶಂಕರ್ ರಾಜ್

ಪ್ರಾರ್ಥನಾ ಅಂಶ:-

ನಮ್ಮ ಸೇವೆಯನ್ನು ಕಾಣಿಕೆಯಿಂದ ಬೆಂಬಲಿಸುತ್ತಿರುವ ಪಾಲುದಾರರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino