Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.09.2024
Share:

By Village Missionary Movement

Tuesday, 10-Sep-2024

ಧೈನಂದಿನ ಧ್ಯಾನ(Kannada) – 10.09.2024

 

ಪ್ರಕಾಶವಾದ ಮುಖ

 

"ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ" - ಯೆಶಾಯ 60:1

  

ನಮ್ಮ ಮುಖ ಪ್ರಕಾಶವಾಗಿರಲು ಮತ್ತು ಸುಂದರವಾಗಿಡಲು ನಾವು ಹಲವಾರು ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ದೇವರಿಂದ ಬರುವ ಪ್ರಕಾಶದ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ? ನಾವು ಹೋದಲ್ಲೆಲ್ಲಾ ದೇವರ ಮಹಿಮೆಯು ನಮ್ಮ ಮೇಲೆ ಉದಯಿಸಬೇಕೆಂದು ನಾವು ಹೋಗುವ ಸ್ಥಳದಲ್ಲೆಲ್ಲಾ ಕರ್ತನಿಗಾಗಿ ಪ್ರಕಾಶಿಸಬೇಕೆಂದು ದೇವರು ನಿರೀಕ್ಷಿಸುತ್ತಾರೆ. ನಾವು ದೇವರ ಮಹಿಮೆಗಾಗಿ ಆಸೆಯಿಂದ ಕೂಗಿಕೊಳ್ಳುವಾಗ, ಆತನ ಮಹಿಮೆಗೆ ಸಮಾನವಾದ ಒಂದು ಮಹಿಮೆಯಲ್ಲಿ ರೂಪಾಂತರಗೊಳ್ಳುತ್ತೇವೆ. ಸತ್ಯವೇದದಲ್ಲಿ ಪ್ರಕಾಶವಾದ ಮುಖಗಳು ಯಾರೆಂದು ಇಂದು ನೋಡೋಣ. 

  

1. ಮೋಶೆ 2. ಯೇಸುಕ್ರಿಸ್ತನು 3. ಸ್ತೆಫನು ಮೋಶೆ ದೇವರೊಂದಿಗೆ ಏಕಾಂತವಾಗಿ ಕಳೆದ ಸಮಯವು ಅವರ ಮುಖವನ್ನು ಪ್ರಕಾಶಿಸುವಂತೆ ಮಾಡಿತು. ನಿನ್ನ ಮಹಿಮೆಯನ್ನು ನನಗೆ ತೋರಿಸು ಎಂದು ಮೋಶೆಯು ಪ್ರಾರ್ಥಿಸಿದರು. ಅವರು 40 ದಿನಗಳು ಕರ್ತನ ಸಂಗಡ ಇದ್ದ ನಂತರ ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಇಸ್ರಾಯೇಲ್ ಮಕ್ಕಳು ಅವರ ಮುಖವು ಪ್ರಕಾಶಿಸುತ್ತಿರುವುದನ್ನು ಕಂಡರು. ಯೇಸು ಪೇತ್ರನನ್ನು, ಯಾಕೋಬ ಮತ್ತು ಯೋಹಾನರನ್ನು ಒಟ್ಟಿಗೆ ಕರೆದುಕೊಂಡು ಎತ್ತರದ ಪರ್ವತವನ್ನು ಏರಿದರು. ಅವರು ಅವರ ಮುಂದೆ ರೂಪಾಂತರವಾದರು. ಅವರ ಮುಖ ಸೂರ್ಯನಂತೆ ಪ್ರಕಾಶಿಸುತ್ತಿತ್ತು. ಹೌದು, ದೇವರ ಮಹಿಮೆಯು ನಮ್ಮ ಮೇಲೆ ಉದಯಿಸಿದಾಗ ನಮ್ಮ ಮುಖವೂ ಪ್ರಕಾಶಿಸುತ್ತದೆ. ನಂತರ, ಸ್ತೆಫನು ಮಾತನಾಡಿದ ಬುದ್ಧಿವಂತಿಕೆ ಮತ್ತು ಆತ್ಮವನ್ನು ಅವನ ಸುತ್ತಲಿರುವವರು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ ಮತ್ತು ಅವನೊಂದಿಗೆ ತರ್ಕಿಸಿದರು. ಆದ್ದರಿಂದ ಅವರಿಗೆ ವಿರುದ್ಧವಾಗಿ ಸುಳ್ಳು ಸಾಕ್ಷಿಗಳನ್ನು ನಿಲ್ಲಿಸಿ, ಸಲಹೆಗಾರರ ಸಭೆಯಲ್ಲಿ ಅವರು ಇರಿಸಲ್ಪಟ್ಟಾಗ, ಅವರ ಮುಖವು ದೇವದೂತರ ಮುಖದಂತೆ ಪ್ರಕಾಶಿಸಿತು.

 

ಪ್ರೀತಿಯ ದೇವರ ಮಕ್ಕಳೇ! ಈ ಜಗತ್ತಿನಲ್ಲಿ ಎದ್ದು ಪ್ರಕಾಶಿಸಲು ದೇವರು ನಮ್ಮನ್ನು ಕರೆದಿದ್ದಾರೆ. ಜಗತ್ತಿಗೆ ಉಪ್ಪು ಮತ್ತು ಬೆಳಕಾಗಲು ದೇವರು ನಮ್ಮನ್ನು ಆರಿಸಿಕೊಂಡಿದ್ದಾರೆ. ನಮ್ಮ ಬೆಳಕು ಕತ್ತಲೆಯನ್ನು ಹೋಗಲಾಡಿಸುತ್ತದೆ. ಪಾಪದ ಶಾಪದಿಂದ ಬಂಧಿತರಾಗಿರುವ ಮನುಷ್ಯರ ಹೃದಯದಲ್ಲಿನ ಕತ್ತಲೆಯನ್ನು ಹೋಗಲಾಡಿಸಲು ನಾವು ಸುವಾರ್ತೆಯ ಜ್ಯೋತಿಯನ್ನು ಬೆಳಗಿಸಬೇಕು. ಮಹಿಮೆಯ ಪವಿತ್ರಾತ್ಮನು ನಮ್ಮಲ್ಲಿ ತುಂಬಿದಾಗ, ನಾವು ಖಂಡಿತವಾಗಿಯೂ ಬೆಳಗುತ್ತೇವೆ. ಕರ್ತನು ಹೇಳುತ್ತಾರೆ, "ಇಗೋ, ಕತ್ತಲೆಯು ಭೂಮಿಯನ್ನು ಮತ್ತು ಅಂಧಕಾರವು ಜನರನ್ನು ಆವರಿಸುತ್ತದೆ, ಆದರೆ ಕರ್ತನು ನಿನ್ನ ಮೇಲೆ ಉದಯಿಸುತ್ತಾರೆ. ಆತನ ಮಹಿಮೆಯು ನಿನ್ನ ಮೇಲೆ ಕಾಣಿಸುತ್ತದೆ. ನಿನ್ನ ಬೆಳಕಿನ ಕಡೆಗೆ ಜನಾಂಗಗಳು ಉದಯಿಸುವ ನಿನ್ನ ಬೆಳಕಿನ ಕಡೆಗೆ ರಾಜರು ಬರುತ್ತಾರೆ" ಈ ವಾಗ್ದಾನವು ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ನೆರವೇರುತ್ತದೆ.

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಪ್ರತಿ ತಾಲೂಕಿನಲ್ಲಿ ಒಂದು ಬೈಬಲ್ ತಾಯಿ ಹುಟ್ಟಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al