Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.09.2024
Share:

By Village Missionary Movement

Monday, 09-Sep-2024

ಧೈನಂದಿನ ಧ್ಯಾನ(Kannada) – 09.09.2024

 

ಎಂತಹ ನಂಬಿಕೆ

 

"…ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು" - ಲೂಕ 7:9

  

ಇಂದಿನ ಸತ್ಯವೇದಭಾಗದಲ್ಲಿ ಬರುವ ಶತಾಧಿಪತಿಯು ಸ್ವಾರ್ಥದಿಂದಲೋ ಅಥವಾ ತನಗಾಗಿಯೋ ಅಥವಾ ತನ್ನ ಕುಟುಂಬದವರಿಗಾಗಿಯೋ ಯೇಸುವಿನ ಬಳಿಗೆ ಬರಲಿಲ್ಲ. ಅವರು ತನ್ನ ಸೇವಕನ ಸ್ವಸ್ಥತೆಗಾಗಿ ತನ್ನನ್ನು ತಗ್ಗಿಸಿಕೊಂಡು ಯೇಸುವಿನ ಮಾತುಗಳ ಶಕ್ತಿಯನ್ನು ನಂಬಿ ಬಂದರು. ಯೇಸು ಅವರ ನಂಬಿಕೆಯನ್ನು ಮೇಲಿನಂತೆ ಹೊಗಳಿ ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ಹೇಳಿ ಸೇವಕನನ್ನು ಗುಣಪಡಿಸಿದರು. ಈ ಘಟನೆ ನಮಗೆ ಏನು ಕಲಿಸುತ್ತದೆ? 2 ಪೂರ್ವಕಾಲವೃತ್ತಾಂತ 7:14 ಅವರ ಹೆಸರುಗೊಂಡ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿದರೆ ನಾನು ದೇಶಕ್ಕೆ ಕ್ಷೇಮವನ್ನು ಅನುಗ್ರಹಿಸುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ. ವಿಶ್ವಾಸಿಗಳಾದ ನಾವು ಅವರ ಮಾತುಗಳ ಶಕ್ತಿಯನ್ನು ನಂಬಿ, ದೇಶದ ಉಜ್ಜೀವನಕ್ಕಾಗಿ, ಸಮಾಧಾನಕ್ಕಾಗಿ, ಹಿತಕ್ಕಾಗಿ ಮತ್ತು ಆಡಳಿತಗಾರರಿಗಾಗಿ ಪ್ರಾರ್ಥಿಸುತ್ತಿದ್ದೇವೆಯೇ? ಅಥವಾ ನಾವು ಸ್ವಾರ್ಥದಿಂದ ನಮ್ಮ ಸ್ವಂತ ವ್ಯವಹಾರಗಳಿಗಾಗಿ ಪ್ರಾರ್ಥಿಸುತ್ತಿದ್ದೇವೆಯೇ? ಅಥವಾ ದೇಶಕ್ಕಾಗಿ ಪ್ರಾರ್ಥಿಸುವುದು ನಿಷ್ಪ್ರಯೋಜಕ ಎಂದು ಅಪನಂಬಿಕೆಯ ಭಾವನೆಯಿಂದ ಇದ್ದೇವೆಯೇ? ಯೋಚಿಸೋಣ. 

 

ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರವೂ ಅರಸರುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವೆಗಳನ್ನೂ ಕೃತಜ್ಞತಾಸ್ತುತಿ ಗಳನ್ನೂ ಮಾಡುವುದು ದೇವರ ಮುಂದೆ ಒಳ್ಳೆಯದು ಪ್ರಿಯವೂ ಆಗಿದೆ. 1 ತಿಮೊಥೆ. 2: 1-3 ರಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿ ಇತರ ಜನರ ಬಂಧನಗಳು ಮತ್ತು ಸಮಸ್ಯೆಗಳಿಗಾಗಿ ನಂಬಿಕೆಯಿಂದ ದೇವರ ಬಳಿ ಬೇಡಿಕೊಳ್ಳಬೇಕು. ದಿನಪತ್ರಿಕೆಗಳಲ್ಲಿ ಬರುವ ಹೃದಯವಿದ್ರಾವಕ ವಿಷಯಗಳ ಕುರಿತು ನಾವು ನಿರ್ಲಕ್ಷ್ಯವಾಗಿ ಇದ್ದೇವೆಯೇ? ವಿವಿಧ ಕಷ್ಟಗಳಿಂದ ನರಳುತ್ತಿರುವ ಬಡವರು, ನಿರ್ಗತಿಕರು, ಮಕ್ಕಳು, ಮಹಿಳೆಯರಿಗಾಗಿ ನಾವು ಯೇಸುವಿನಲ್ಲಿ ಮೊರೆಯಿಡುತ್ತಿದ್ದೇವೆಯೇ? ಪ್ರೀತಿಯಿಂದ ಕೆಲಸನಡಿಸುವ ನಂಬಿಕೆ ಯಿಂದಲೇ ಪ್ರಯೋಜನವಾಗುತ್ತದೆ. (ಗಲಾತ್ಯದವರಿಗೆ 5:6) ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ. (ಯಾಕೋಬ 2:26) ನಮ್ಮ ನಂಬಿಕೆ ಎಂಥದ್ದು?

 

ಪ್ರಿಯರೇ, ವಿಶ್ವಾಸಿಗಳು ಎಂದು ಕರೆಯಲ್ಪಡುವ ನಾವು ನಮಗಾಗಿ ಮಾತ್ರ ಪ್ರಾರ್ಥಿಸದೆ ದೇಶಕ್ಕಾಗಿಯೂ ಪ್ರಾರ್ಥಿಸಬೇಕು ಮತ್ತು ಇತರರಿಗಾಗಿ ನಂಬಿಕೆಯೊಂದಿಗೆ ಪೌಳಿಯ ಒಡಕಿನಲ್ಲಿ ನಿಲ್ಲೋಣ. ಶತಾಧಿಪತಿಯಂತೆ ನಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥಿಸೋಣ. ದೇವರ ಆಶ್ಚರ್ಯವಾದ ಉತ್ತರಗಳನ್ನು ನೋಡೋಣ. ದೇವರು ಹೊಗಳುವ, ಘನಪಡಿಸುವ ನಿಜವಾದ ವಿಶ್ವಸಿಗಳಾಗೋಣ! ಆಮೆನ್.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಆಗಸ್ಟ್ 15 ರಂದು ಯೌವನಸ್ಥರ ಶಿಬಿರದಲ್ಲಿ ಅಭಿಷೇಕಿಸಲ್ಪಟ್ಟ ಪ್ರತಿಯೊಂದು ಯೌವನಸ್ಥರು ಪ್ರತಿದಿನವೂ ತಮ್ಮನ್ನು ಬೆಂಕಿ ಹೊತ್ತಿಸಿ ರಕ್ಷಿಸಿಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş